ಏನಿದು ಜೂಮ್ ಆ್ಯಪ್ ? ತಂತ್ರಜ್ಞಾನ ದೈತ್ಯರಿಗೆ ಟಕ್ಕರ್ ಕೊಟ್ಟ ಇದರ ವಿಶೇಷತೆಗಳೇನು ?
Team Udayavani, Apr 8, 2020, 6:00 PM IST
ಕೋವಿಡ್-19 ಸೋಂಕು ವಿಶ್ವದೆಲ್ಲೆಡೆ ಅಟ್ಟಹಾಸ ಮೆರೆಯುತ್ತಿದ್ದು ಅನೇಕ ದೇಶಗಳು ಲಾಕ್ ಡೌನ್ ಆಗಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಶಾಲಾ-ಕಾಲೇಜು ಮುಚ್ಚಲ್ಪಟ್ಟಿದ್ದರೆ, ಹಲವು ಕಂಪೆನಿಗಳು ಹಣಕಾಸು ಹಿಂಜರಿತದ ದೆಸೆಯಿಂದ ಕಚೇರಿಯ ಖರ್ಚು ಕಡಿಮೆ ಮಾಡುವುದಕ್ಕಾಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿವೆ.
ಈ ಸಂದರ್ಭದಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಮಾಡಲು ಜೂಮ್ ಅಪ್ಲಿಕೇಶನ್ ನ ಮೊರೆ ಹೋಗಿದ್ದಾರೆ. ವರ್ಕ್ ಫ್ರಮ್ ಹೋಮ್ ಮಾಡುವ ನೌಕಕರು ಕೂಡ ಈ ಜೂಮ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಈ ಮೂಲಕ ತಮ್ಮ ಆಫೀಸು ಕೆಲಸವನ್ನು ಮಾಡುತ್ತಿದ್ದಾರೆ. ಲಾಕ್‌ಡೌನ್ ಆದ ಬಳಿಕ ಜೂಮ್ ಆ್ಯಪ್ ಹೆಚ್ಚು ಜನಪ್ರಿಯವಾಗಿದ್ದು, ಮಾಹಿತಿಗಳ ಪ್ರಕಾರ 50 ಮಿಲಿಯನ್ಗೂ ಹೆಚ್ಚಿನ ಜನರು ಈ ಆ್ಯಪ್ ಅನ್ನು ಬಳಕೆ ಮಾಡುತ್ತಿದ್ದಾರೆ. ಡೌನ್ ಲೋಡ್ ಮಾಡಿಕೊಳ್ಳಲು ಗೂಗಲ್ ಪ್ಲೇ ಸ್ಟೋರ್ ಮೊರೆ ಹೋಗುತ್ತಿದ್ದಾರೆ.
ಹಾಗಾದರೇ ಏನಿದು ಜೂಮ್ ಆ್ಯಪ್, ಇದರ ವಿಶೇಷತೆಗಳೇನು? ಕೆಲವೇ ದಿನಗಳಲ್ಲಿ ಹೇಗೆ ಪ್ರಚಲಿತವಾಯಿತು… ?
ಲಾಕ್ ಡೌನ್ ಅವಧಿಯಲ್ಲಿ ಭಾರೀ ಸದ್ದು ಮಾಡಿದ ಆ್ಯಪ್ ಎಂದರೆ ಜೂಮ್. ಇದು ಅನ್ ಲೈನ್ ವಿಡಿಯೋ ಕಾನ್ಪರೆನ್ಸಿಂಗ್ ವ್ಯವಸ್ಥೆಯನ್ನು ಹೊಂದಿದೆ. ಜಾಗತಿಕವಾಗಿ ಲಾಕ್ ಡೌನ್ ಘೋಷಣೆಯಾದ ತಕ್ಷಣ ಮೀಟಿಂಗ್ ಪ್ಲ್ಯಾಟ್ ಫಾರ್ಮ್ ಗೆ ಭರ್ಜರಿ ಬೇಡಿಕೆ ಬಂದ ಪರಿಣಾಮ, ಕಳೆದ ತಿಂಗಳಲ್ಲಿ ಈ ಆ್ಯಪ್ ವಾಟ್ಸಾಪ್, ಟಿಕ್ ಟಾಕ್, ಫೇಸ್ ಬುಕ್, ಇನ್ ಸ್ಟಾಗ್ರಾಂ ಯೂಟ್ಯೂಬ್ ಮುಂತಾದ ಆ್ಯಪ್ ಗಳನ್ನು ಹಿಂದಿಕ್ಕಿ ಭಾರತದ ಗೂಗಲ್ ಪ್ಲೇ ಸ್ಟೋರ್ ನಲ್ಲಿ ನಂ.1 ಸ್ಥಾನಕ್ಕೇರಿದೆ. ಇದಕ್ಕೆ ಪ್ರಧಾನ ಕಾರಣವೆಂದರೆ ಇದರಲ್ಲಿ ಗರಿಷ್ಟ 100 ಮಂದಿ ಏಕಕಾಲಕ್ಕೆ ಆನ್ ಲೈನ್ ಮೂಲಕ ವಿಡಿಯೋ ಕಾಲ್ ಮಾಡಬಹುದು.
ಗೂಗಲ್ ಹ್ಯಾಂಗೌಟ್ಸ್ ಮೀಟ್, ಸ್ಕೈಪ್, ಸ್ಲ್ಯಾಕ್, ಮೈಕ್ರೋಸಾಫ್ಟ್ ಟೀಮ್ಸ್ ಇತ್ಯಾದಿ ಅನೇಕ ವಿಡಿಯೋ ಕಾಲಿಂಗ್ ಆ್ಯಪ್ ಗಳನ್ನು ಈ ಜೂಮ್ ಆ್ಯಪ್ ಹಿಂದಿಕ್ಕಿದೆ. ಇದರಲ್ಲಿ ವಿಡಿಯೋ ಕಾನ್ಫರೆನ್ಸ್ ಕಾಲ್‌ಗೆ ಸರಳ ಆಯ್ಕೆಗಳಿದ್ದು, ಕರೆಗೆ ಸೇರಿಕೊಳ್ಳಲು ನೀವು ಲಾಗಿನ್ ಆಗಬೇಕಾದ ಅವಶ್ಯಕತೆಯಿಲ್ಲ. ಕಂಪ್ಯೂಟರ್ ನಲ್ಲೂ ಬಳಸಬಹುದು. ವಿಡಿಯೋ ಕಾಲ್ ವೇಳೆ ನೆಟ್ ವರ್ಕ್ ತೀರಾ ದುರ್ಬಲವಾಗಿದ್ದರೆ ವಿಡಿಯೋ ಬಟನ್ ಆಫ್ ಮಾಡಿ, ಕಡಿಮೆ ಬ್ಯಾಂಡ್ ವಿಡ್ತ್ ಆಗತ್ಯವಿರುವ ಆಡಿಯೋವನ್ನೂ ಕೇಳಬಹುದು. ಹಲವರು ಏಕಕಾಲದಲ್ಲಿ ಭಾಗವಹಿಸಬಹುದಾದ್ದರಿಂದ ನಿಮಗೇನಾದರೂ ಮಾತನಾಡಬೇಕಿದ್ದರೆ ಕೈಯೆತ್ತುವ ಆಯ್ಕೆಯೊಂದು ಗೋಚರಿಸುತ್ತದೆ. ಅದರಲ್ಲೆ ಚಾಟಿಂಗ್ ಮಾಡುವ ಅವಕಾಶವೂ ಇದೆ.
ಬಳಕೆ ಹೇಗೆ?: ಯಾರೂ ಮೊದಲು ವಿಡಿಯೋ ಕಾಲ್ ಮಾಡುತ್ತಾರೋ ಅವರು ಇತರರೊಂದಿಗೆ ಒಂದು ಐಡಿಯನ್ನು ಹಂಚಿಕೊಂಡಿರುತ್ತಾರೆ. ಅದನ್ನು ನಮೂದಿಸಿದ ತಕ್ಷಣ ಈ ವಿಡಿಯೋ ಕಾಲ್ ಗೆ ಜಾಯಿನ್ ಆಗಬಹುದು. ಉಚಿತ ವ್ಯವಸ್ಥೆಯಲ್ಲಿ 100 ಮಂದಿ ಗರಿಷ್ಟ 40 ನಿಮಿಷದ ಮೀಟಿಂಗ್ ನಲ್ಲಿ ಭಾಗವಹಿಸಬಹುದು. ಹೆಚ್ಚು ಜನರಿದ್ದರೆ ಮತ್ತು ಹೆಚ್ಚು ಸಮಯದ ಅಗತ್ಯವಿದ್ದರೆ ಹಣ ಪಾವತಿಯ ವ್ಯವಸ್ಥೆಯೂ ಇದೆ.
ಆದರೆ ಇತ್ತೀಚೆಗೆ ಜೂಮ್ ಆ್ಯಪ್ ಬಗ್ಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಈ ಆ್ಯಪ್ ಬಳಕೆದಾರರ ಮಾಹಿತಿಯನ್ನು ಕದಿಯುವುದು ಮಾತ್ರವಲ್ಲದೆ ಜೊತೆಗೆ ಸೆಕ್ಯೂರಿಟಿ ಬಗ್ ಇದರಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಬಳಕೆದಾರರನ ಧ್ವನಿ, ಇ-ಮೇಲ್ ವಿವರ, ಫೋಟೋ, ವಿಡಿಯೋಗಳನ್ನು ನಕಲು ಮಾಡುತ್ತಿದೆ ಎಂದು ಮಾಧ‍್ಯಮದ ವರದಿ ತಿಳಿಸಿದೆ.
ಭಾರತದ ರಾಷ್ಟ್ರೀಯ ಸೈಬರ್ ಭದ್ರತಾ ಏಜೆನ್ಸಿಯಾಗಿರುವ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ(CERT) ಈ ಬಗ್ಗೆ ಒಂದು ಎಚ್ಚರಿಕೆಯನ್ನೂ ನೀಡಿದೆ. ಸೂಕ್ಷ್ಮವಾದ ಕಚೇರಿ ಮಾಹಿತಿಯೂ ಇಲ್ಲಿ ಸೈಬರ್ ವಂಚಕರ ಕೈಗೆ ಸಿಗದಂತೆ ಕಟ್ಟೆಚ್ಚರ ವಹಿಸುವಂತೆ ತಾಕೀತು ಮಾಡಿವೆ. ಭದ್ರತಾ ಕಾರಣಕ್ಕಾಗಿ ಬಹುತೇಕ ಟೆಕ್ ಕಂಪನಿಗಳು ಜೂಮ್ ಆ್ಯಪ್ ಬಳಕೆಯನ್ನು ನಿಷೇಧಿಸಿವೆ. ಜತೆಗೆ ಫೇಸ್‌ಬುಕ್‌ಗೂ ಜೂಮ್ ಆ್ಯಪ್ ಡಾಟಾ ಕಳುಹಿಸುತ್ತದೆ ಎನ್ನಲಾಗಿದೆ. ಆದ್ದರಿಂದ ಈ ಆ್ಯಪ್ ಬಳಸುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ.
-ಮಿಥುನ್ ಮೊಗೇರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.