![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 30, 2019, 6:00 AM IST
ದೇಶ ಗೆದ್ದ ಮೊದಲ ವಿಶ್ವಕಪ್ ಕ್ರಿಕೆಟ್ ಕುರಿತಾದ ಚಿತ್ರ ಮಾಡಬೇಕೆಂದು ಇಷ್ಟರ ತನಕ ಯಾರಿಗೂ ಅನ್ನಿಸಿರಲಿಲ್ಲ. ಇದೀಗ ಯಶಸ್ವಿ ನಿರ್ದೇಶಕ ಕಬೀರ್ ಖಾನ್ ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ. ಚಿತ್ರದ ಹೆಸರು-“83′.
ಬಾಲಿವುಡ್‌ನಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳು ಕುರಿತಾದ ಅನೇಕ ಚಿತ್ರಗಳು ಬಂದಿವೆ. ಅದರಲ್ಲೂ 2007ರಲ್ಲಿ ಬಂದ ಶಾರೂಕ್ ಖಾನ್ ಪ್ರಧಾನ ಭೂಮಿಕೆಯಲ್ಲಿದ್ದ “ಚಕ್ ದೇ ಇಂಡಿಯಾ’ ಸಿನೆಮಾ ಸೂಪರ್‌ಹಿಟ್ ಆದ ಬಳಿಕ ವರ್ಷಕ್ಕೆ ಕನಿಷ್ಠ ಎರಡಾದರೂ “ನ್ಪೋರ್ಟ್ಸ್ ಥೀಮ್’ ಉಳ್ಳ ಚಿತ್ರಗಳು ಬರುತ್ತಿವೆ. ಹಾಕಿ, ಫುಟ್ಬಾಲ್, ಕ್ರಿಕೆಟ್, ಬಾಸ್ಕೆಟ್‌ಬಾಲ್, ಕಬಡ್ಡಿ, ಕುಸ್ತಿ, ಬಾಕ್ಸಿಂಗ್…ಹೀಗೆ ಹೆಚ್ಚಿನೆಲ್ಲ ಕ್ರೀಡೆಗಳಿಗೆ ಬೆಳ್ಳಿತೆರೆಯಲ್ಲಿ ಮಿಂಚುವ ಅವಕಾಶ ಲಭಿಸಿದೆ.
ಕ್ರೀಡಾಜಗತ್ತಿನ ದಂತಕತೆಯಾಗಿರುವ ಮಿಲ್ಕಾ ಸಿಂಗ್, ಮೇರಿ ಕೋಮ್, ಧೋನಿ, ಸಚಿನ್ ತೆಂಡುಲ್ಕರ್ ಮೊದಲಾದವರ ಬದುಕಿನ ಕುರಿತಾದ ಚಿತ್ರಗಳು ಬಂದು ಯಶಸ್ವಿಯಾಗಿವೆ. ಆದರೆ ದೇಶ ಗೆದ್ದ ಮೊದಲ ಕ್ರಿಕೆಟ್ ವಿಶ್ವಕಪ್ ಕುರಿತಾದ ಚಿತ್ರ ಮಾಡಬೇಕೆಂದು ಇಷ್ಟರ ತನಕ ಯಾರಿಗೂ ಅನ್ನಿಸಿರಲಿಲ್ಲ. ಇದೀಗ ಯಶಸ್ವಿ ನಿರ್ದೇಶಕ ಕಬೀರ್ ಖಾನ್ ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ.
* ಮುಂದಿನ ವರ್ಷ ಬಿಡುಗಡೆ
ಎಲ್ಲವೂ ಅಂದುಕೊಂಡಂತೆ ಆದರೆ ಕಪಿಲ್‌ದೇವ್ ತಂಡ ಗೆದ್ದ ವಿಶ್ವಕಪ್ ಕತೆ ಸದ್ಯದಲ್ಲೇ ಬೆಳ್ಳಿ ತೆರೆಯಲ್ಲಿ ರಾರಾಜಿಸಲಿದೆ. ವಿಶ್ವಕಪ್ ನಡೆಯುತ್ತಿರುವಾಗಲೇ ಚಿತ್ರ ಬಿಡುಗಡೆ ಮಾಡಿ ಕ್ರಿಕೆಟಿಗರಿಗೆ ಸ್ಫೂರ್ತಿ ತುಂಬಬೇಕೆಂದು ಯೋಜನೆ ಹಾಕಿಕೊಂಡಿದ್ದರೂ, ನಿರ್ಮಾಣ ವಿಳಂಬವಾದ ಕಾರಣ ಮುಂದಿನ ವರ್ಷ ಎಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ.
* ಪ್ರಾಥಮಿಕ ತರಬೇತಿ
ಕಪಿಲ್ ಟೀಮ್‌ನಲ್ಲಿರುವ ಸದಸ್ಯರ ಪಾತ್ರಧಾರಿಗಳಿಗೆಲ್ಲ ಕ್ರಿಕೆಟ್‌ನ ಪ್ರಾಥಮಿಕ ತರಬೇತಿ ನೀಡುವ ಅಗತ್ಯವಿರುವುದರಿಂದ ಶೂಟಿಂಗ್ ಪ್ರಾರಂಭ ತಡವಾಗಿದೆ. ಕ್ರಿಕೆಟ್ ಕುರಿತಾದ ಸಿನೆಮಾ ಆಗಿರುವುದರಿಂದ, ಅದರಲ್ಲೂ ಭಾರತದ ಕ್ರಿಕೆಟ್ ಇತಿಹಾಸದ ಒಂದು ಸುಂದರ ನೆನಪಾಗಿರುವ ಮೊದಲ ವಿಶ್ವಕಪ್ ಕತೆಯಾಗಿರುವುದರಿಂದ ಯಾವಾಗ ಬಿಡುಗಡೆಯಾದರೂ ಚಿತ್ರ ಗೆಲ್ಲತ್ತದೆ ಎಂಬ ವಿಶ್ವಾಸ ನಿರ್ಮಾಪಕರಿಗಿದೆ. ಅಂದಹಾಗೆ ಈ ಚಿತ್ರದ ಹೆಸರೇ “83′ ಎಂದು. ನಾಯಕ ಕಪಿಲ್ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಅವರ ಹೆಂಡತಿ ರೋಮಿ ಭಾಟಿಯಾ ಆಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ.
* “83’ಯಲ್ಲಿ ಆಡುವವರು…
ರಣವೀರ್ ಸಿಂಗ್ ಕಪಿಲ್‌ದೇವ್
ತಾಹಿರ್‌ರಾಜ್ ಭಾಸಿನ್ ಸುನೀಲ್ ಗವಾಸ್ಕರ್
ಸಕಿಬ್ ಸಲೀಮ್ ಮೊಹಿಂದರ್ ಅಮರನಾಥ್
ಅಮ್ಮಿ ವಿರ್ಕ್ ಬಲ್ವಿಂದರ್ ಸಂಧು
ಜೀವಾ ಕೆ. ಶ್ರೀಕಾಂತ್
ಸಾಹಿಲ್ ಖಟ್ಟರ್ ಸಯ್ಯದ್ ಕಿರ್ಮಾನಿ
ಚಿರಾಗ್ ಪಾಟೀಲ್ ಸಂದೀಪ್ ಪಾಟೀಲ್
ಆದಿನಾಥ್ ಕೊಠಾರೆ ದಿಲೀಪ್ ವೆಂಗಸರ್ಕಾರ್
ಧೈರ್ಯ ಕರ್ವ ರವಿಶಾಸ್ತ್ರಿ
ದಿನಕರ್ ಶರ್ಮ ಕೀರ್ತಿ ಆಜಾದ್
ಜತಿನ್ ಸರ್ನ ಯಶ್‌ಪಾಲ್ ಶರ್ಮ
ನಿಶಾಂತ್ ದಹಿಯ ರೋಜರ್ ಬಿನ್ನಿ
ಹಾರ್ಡಿ ಸಂಧು ಮದನ್ ಲಾಲ್
ಆರ್. ಬದ್ರಿ ಸುನೀಲ್ ವಾಲ್ಸನ್
ಪಂಕಜ್ ತ್ರಿಪಾಠಿ ಪಿ.ಆರ್. ಮಣಿಸಿಂಗ್
ಸತೀಶ್ ಆಲೇಕರ್ ಶೇಷರಾವ್ ವಾಂಖೇಡೆ
ದೀಪಿಕಾ ಪಡುಕೋಣೆ ರೋಮಿ ಭಾಟಿಯಾ
You seem to have an Ad Blocker on.
To continue reading, please turn it off or whitelist Udayavani.