ಸೊಹೈಲ್‌ ಕಿರಿಕ್‌; ಪ್ರಸಾದ್‌ ತಿರುಗೇಟು


Team Udayavani, Jun 16, 2019, 5:47 AM IST

VENKATESH-PRASAD

ಭಾರತ-ಪಾಕಿಸ್ಥಾನ ನಡುವಿನ ಕ್ರಿಕೆಟ್‌ ಪಂದ್ಯವೆಂದರೆ ಅಭಿಮಾನಿಗಳ ಜೋಶ್‌ ತಾರಕಕ್ಕೇರುತ್ತದೆ. ಅಂಗಳದಲ್ಲಿ ಆಟಗಾರರ ರೋಷಾವೇಶ ಕೂಡ ಬೇರೆಯೇ ಸ್ವರೂಪ ಪಡೆದುಕೊಂಡಿರುತ್ತದೆ. ಆಗಾಗ ಕಿರಿಕ್‌ ನಡೆಯುತ್ತಲೇ ಇರುತ್ತದೆ!

1992ರ ಸಿಡ್ನಿ ಪಂದ್ಯದಲ್ಲಿ ಜಾವೇದ್‌ ಮಿಯಾಂದಾದ್‌ ಕೀಪರ್‌ ಕಿರಣ್‌ ಮೋರೆ ಅವರನ್ನು ಅಣಕಿಸಲು ಮಂಗನಂತೆ ಕುಣಿದದ್ದು ಇದಕ್ಕೊಂದು ಉತ್ತಮ ಉದಾಹರಣೆ. ಇನ್ನೊಂದಕ್ಕೆ 1996ರ ಬೆಂಗಳೂರು ಕ್ವಾರ್ಟರ್‌ ಫೈನಲ್‌ ಪಂದ್ಯ ನಿದರ್ಶನ ಒದಗಿಸುತ್ತದೆ.

288 ರನ್‌ ಚೇಸಿಂಗ್‌ ವೇಳೆ ಸಯೀದ್‌ ಅನ್ವರ್‌-ಅಮೀರ್‌ ಸೊಹೈಲ್‌ ದಿಟ್ಟ ಆರಂಭ ಒದಗಿಸುತ್ತಿದ್ದರು. 48 ರನ್‌ ಆದಾಗ ಅನ್ವರ್‌ ವಿಕೆಟ್‌ ಬಿತ್ತು. ವೆಂಕಟೇಶ ಪ್ರಸಾದ್‌ ಎಸೆತವೊಂದನ್ನು ಮಿಡ್‌-ಆಫ್ ಬೌಂಡರಿಗೆ ರವಾನಿಸುವ ಮೂಲಕ ನಾಯಕ ಸೊಹೈಲ್‌ ಅರ್ಧ ಶತಕ ಪೂರೈಸಿದರು. ಅಷ್ಟಕ್ಕೇ ಸುಮ್ಮನಾಗದೆ, ನಿಮ್ಮ ಮುಂದಿನ ಎಸೆತನ್ನೂ ಇದೇ ಮಾರ್ಗವಾಗಿ ಬೌಂಡರಿಗೆ ಅಟ್ಟುತ್ತೇನೆ ಎಂದು ಸನ್ನೆಯಲ್ಲಿ ಕೆಣಕಿದರು. ಪ್ರಸಾದ್‌ ಇದನ್ನೇ ಸವಾಲಾಗಿ ಸ್ವೀಕರಿಸಿದರು. ಆಫ್-ಸ್ಟಂಪ್‌ ಮೇಲಿಂದ ಬಂದ ಮುಂದಿನ ಎಸೆತಕ್ಕೆ ಸೊಹೈಲ್‌ ಬೌಲ್ಡ್‌ ಆಗಿದ್ದರು. “ಚಿನ್ನಸ್ವಾಮಿ ಸ್ಟೇಡಿಯಂ’ ಒಮ್ಮೆಲೇ ಭೋರ್ಗರೆಯಿತು!

ಪ್ರಸಾದ್‌ ಸುಮ್ಮನಿರಬೇಕಲ್ಲ, ಸೊಹೈಲ್‌ಗೆ ಪೆವಿಲಿಯನ್‌ ತೋರಿಸುತ್ತ “ಸೆಂಡ್‌-ಆಫ್’ ಮಾಡಿದರು. ಜತೆಗೆ ಮಾತಿನ ಮೂಲಕವೂ ತಿವಿದರು.

ಅಂದು ರಾತ್ರಿಯಿಡೀ ಪ್ರಸಾದ್‌ ಮನೆ ಮುಂದೆ ಅಭಿಮಾನಿಗಳ ಸಂಭ್ರಮಕ್ಕೆ ಮೇರೆ ಇರಲಿಲ್ಲ. ಮರುದಿನ ಮನೆಯಲ್ಲಿ ರಾಶಿ ರಾಶಿ ಉಡುಗೊರೆ. ಪ್ರಸಾದ್‌ ಸಾಧನೆ 45ಕ್ಕೆ 3 ವಿಕೆಟ್‌. ಆದರೆ ಅಭಿಮಾನಿ ಗಳು ಈ ಗಿಫ್ಟ್ ನೀಡಿದ್ದು ಕೇವಲ ಸೊಹೈಲ್‌ ವಿಕೆಟ್‌ಗಾಗಿ!

ಟಾಪ್ ನ್ಯೂಸ್

YouTuber: 40 ಗಂಟೆಗಳ ಕಾಲ ಖ್ಯಾತ ಯುಟ್ಯೂಬರ್‌ ಅಂಕುಶ್‌”ಡಿಜಿಟಲ್‌ ಅರೆಸ್ಟ್‌’

YouTuber: 40 ಗಂಟೆಗಳ ಕಾಲ ಖ್ಯಾತ ಯುಟ್ಯೂಬರ್‌ ಅಂಕುಶ್‌”ಡಿಜಿಟಲ್‌ ಅರೆಸ್ಟ್‌’

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

YouTuber: 40 ಗಂಟೆಗಳ ಕಾಲ ಖ್ಯಾತ ಯುಟ್ಯೂಬರ್‌ ಅಂಕುಶ್‌”ಡಿಜಿಟಲ್‌ ಅರೆಸ್ಟ್‌’

YouTuber: 40 ಗಂಟೆಗಳ ಕಾಲ ಖ್ಯಾತ ಯುಟ್ಯೂಬರ್‌ ಅಂಕುಶ್‌”ಡಿಜಿಟಲ್‌ ಅರೆಸ್ಟ್‌’

1-hrb

Hebri; ಬೈಕ್‌ಗೆ ಕಾರು ಢಿಕ್ಕಿ: ಯುವಕ ಸಾ*ವು

police

Mudbidri; ಎಂಟು ತಿಂಗಳ ಹಿಂದೆ ಬ್ಯಾಟರಿ ಕಳವು: ಇಬ್ಬರು ಆರೋಪಿಗಳ ಬಂಧನ

Exam

Udupi:ಕಾಲೇಜುಗಳಲ್ಲಿ ಯುವನಿಧಿ ನೋಂದಣಿ

1-aaaa

ಬಡ ದಂಪತಿಗೆ ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.