ವಿಶ್ವಕಪ್: ನಾಯಕರ ವಿಶಿಷ್ಟ ಆಯ್ಕೆ
Team Udayavani, May 26, 2019, 10:16 AM IST
ಲಂಡನ್: ವಿಶ್ವಕಪ್ ನಾಯಕರೆಲ್ಲ ಕಳೆದ ರಾತ್ರಿ ಲಂಡನ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದರು. “ನಿಮ್ಮ ತಂಡದಲ್ಲಿ ಎದುರಾಳಿ ತಂಡ ದ ಯಾವ ಆಟಗಾರ ಇರಬೇಕೆಂದು ಬಯಸುತ್ತೀರಿ?’ ಎಂಬ ಕುತೂಹಲದ ಪ್ರಶ್ನೆ ಇವರಿಗೆ ಕೇಳಲಾಗಿತ್ತು. ಎಲ್ಲರೂ ಸ್ವಾರಸ್ಯಕರ ಉತ್ತರ ನೀಡುತ್ತ ಹೋದರು.
ಕೊಹ್ಲಿ ಆಯ್ಕೆ ಡು ಪ್ಲೆಸಿಸ್
“ಇದರ ಆಯ್ಕೆ ಬಹಳ ಕಠಿನ. ನನ್ನ ಆಯ್ಕೆ ಎಬಿ ಡಿ ವಿಲಿಯರ್. ಆದರೆ ಅವರು ನಿವೃತ್ತರಾಗಿರುವುದರಿಂದ ಫಾ ಡು ಪ್ಲೆಸಿಸ್ ಅವರನ್ನು ಆಯ್ಕೆ ಮಾಡುತ್ತೇನೆ’ ಎಂದು ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಹೇಳಿದರು. ಬಳಿಕ ಫಾ ಡು ಪ್ಲೆಸಿಸ್ ಕೂಡ ಕೊಹ್ಲಿ ಅವರನ್ನೇ ಆರಿಸಿದರು.
ಬಾಂಗ್ಲಾದೇಶ ನಾಯಕ ಮಶ್ರಫೆ ಮೊರ್ತಜಾ ಅವರ ಆಯ್ಕೆ ಕೂಡ ವಿರಾಟ್ ಕೊಹ್ಲಿ ಆಗಿತ್ತು. ಜತೆಗೆ ಬುಮ್ರಾ, ಪ್ಯಾಟ್ ಕಮಿನ್ಸ್, ರಶೀದ್ ಖಾನ್ ಬಗ್ಗೆಯೂ ಡು ಪ್ಲೆಸಿಸ್ ಒಲವು ತೋರಿದರು. ಕಿವೀಸ್ ಕಪ್ತಾನ ಕೇನ್ ವಿಲಿಯಮ್ಸನ್ ಆಯ್ಕೆ ಕೂಡ ರಶೀದ್ ಖಾನ್ ಆಗಿತ್ತು.
ಪಾಂಟಿಂಗ್ ಬೇಕು!
ತಂಡದಲ್ಲಿ ತಾನು ಯಾವುದೇ ಬದಲಾವಣೆ ಬಯಸುವುದಿಲ್ಲ ಎಂದು ಹೇಳಿದವರು ಇಂಗ್ಲೆಂಡ್ ನಾಯಕ ಮಾರ್ಗನ್. ಬದಲಾಗಿ ಪಾಂಟಿಂಗ್‌ಚ ಅವರನ್ನು ಕೋಚ್ ಆಗಿ ಪಡೆಯಬಯಸುತ್ತೇನೆ ಎಂದರು. ಪಾಕಿಸ್ಥಾನದ ನಾಯಕ ಸಫರಾಜ್ ಖಾನ್ ಅವರ ಆಯ್ಕೆ ಬಟ್ಲರ್. ಹಾಗೆಯೇ ಆಸೀಸ್ ನಾಯಕ ಆರನ್ ಫಿಂಚ್ ವೇಗಿ ರಬಾಡ ಅವರನ್ನು ಆರಿಸಿದರು. ಲಂಕೆಯ ದಿಮುತ್ ಕರುಣರತ್ನೆ “ಗೇಮ್ ಚೇಂಜರ್’ ಬೆನ್ ಸ್ಟೋಕ್ಸ್ ಆಗಬಹುದೆಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.