ಬಾಂಗ್ಲಾ ಹುಲಿಗಳೆದುರು ಕಿವೀಸ್ ಸೆಣಸಾಟ
Team Udayavani, Jun 5, 2019, 6:06 AM IST
ಓವಲ್: ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದ ಖುಷಿಯಲ್ಲಿರುವ ಬಾಂಗ್ಲಾ ಮತ್ತು ನ್ಯೂಜಿಲ್ಯಾಂಡ್ ಓವಲ್ ಅಂಗಳದಲ್ಲಿ ಮುಖಾಮುಖೀಯಾಗಲು ಸಜ್ಜಾಗಿವೆ. ವಿಶ್ವಕಪ್‌ನಲ್ಲಿ ಬಲಾಬಲದ ಲೆಕ್ಕಾಚಾರದಲ್ಲಿ ನ್ಯೂಜಿಲ್ಯಾಂಡ್ ಬಲಿಷ್ಠವಾಗಿದೆ. ಯಾಕೆಂದರೆ ಈ ಹಿಂದೆ ಆಡಿದ ನಾಲ್ಕು ಪಂದ್ಯವನ್ನು ನ್ಯೂಜಿಲ್ಯಾಂಡ್ ಗೆದ್ದಿದೆ. ಆದರೆ ಬಾಂಗ್ಲಾ ಹುಲಿಗಳನ್ನು ಈ ಬಾರಿ ಕಡೆಗಣಿಸುವಂತಿಲ್ಲ. ಶನಿವಾರದ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾದ ವಿರುದ್ಧ 21ರನ್‌ಗಳ ಗೆಲುವು ದಾಖಲಿಸಿದ ಬಾಂಗ್ಲಾ ಇದೀಗ ಎರಡನೇ ಗೆಲುವಿನ ಹಾಗೂ ವಿಶ್ವಕಪ್ ಮುಖಾಮುಖೀಯಲ್ಲಿ ನೂಜಿಲ್ಯಾಂಡ್ ವಿರುದ್ಧ ಮೊದಲ ಗೆಲುವು ದಾಖಲಿಸಲು ಬಾಂಗ್ಲಾ ಕಾದು ಕುಳಿತಿದೆ.
ನ್ಯೂಜಿಲ್ಯಾಂಡ್ ಬಲಿಷ್ಠ
ಶ್ರೀಲಂಕಾ ವಿರುದ್ಧ 10 ವಿಕೆಟ್‌ಗಳ ಸುಲಭ ಗೆಲುವು ಪಡೆದ ನ್ಯೂಜಿಲ್ಯಾಂಡ್ ಅತ್ಯಂತ ಬಲಿಷ್ಠ ತಂಡ ಎನ್ನಲಡ್ಡಿಯಿಲ್ಲ. 2015ರ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನದೊಂದಿಗೆ ನೂಜಿಲ್ಯಾಂಡ್ ಫೈನಲ್ ತಲುಪಿತ್ತು. ಆದರೆ ಫೈನಲ್ನಲ್ಲಿ ತೀರಾ ಕಳಪೆ ಪ್ರದರ್ಶನ ತೋರಿ ಆಸ್ಟ್ರೇಲಿಯ ವಿರುದ್ಧ ಸೋಲನುಭವಿಸಿತ್ತು. ಆದರೆ ಈ ಬಾರಿ ಅಂತಹ ತಪ್ಪು ಮತ್ತೆ ಮರುಕಳಿಸಬಾರದು ಎಂದು ಪಣ ತೊಟ್ಟಿರುವ ವಿಲಿಯಮ್ಸ್ ಪಡೆ ವಿಶ್ವ ಚಾಂಪಿಯನ್ ಪಟ್ಟಕ್ಕೇರಲು ಸಜ್ಜಾಗಿ ನಿಂತಿದೆ.
ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಕಿವೀಸ್ ಸಶಕ್ತವಾಗಿದೆ. ಆರಂಭಿಕ ಆಟಗಾರರಾದ ಕಾಲಿನ್ ಮುನ್ರೊ, ಮಾರ್ಟಿನ್ ಗಪ್ಟಿಲ್ ಎದುರಾಳಿ ತಂಡದ ದಾಳಿಯನ್ನು ಪುಡಿಮಾಡುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಶ್ರೀಲಂಕಾ ವಿರುದ್ಧದ ಪಂದ್ಯವೇ ಸಾಕ್ಷಿ. ಮಧ್ಯಮ ಕ್ರಮಾಂಕದಲ್ಲಿ ನಾಯಕ ಕೇನ್ ವಿಲಿಯಮ್ಸನ್, ರಾಸ್ ಟೇಲರ್ ತಂಡಕ್ಕೆ ನೆರವಾಗಬಲ್ಲರು. ಕಿವೀಸ್ ಬೌಲಿಂಗ್ ಘಾತಕವಾಗಿದೆ. ಟ್ರೆಂಟ್ ಬೌಲ್r, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯುಸನ್, ಜೆಮ್ಮಿ ನೀಶಮ್ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.
ಬಾಂಗ್ಲಾಕ್ಕೆ ಬ್ಯಾಟಿಂಗ್ ಬಲ
ಬಾಂಗ್ಲಾದೇಶಕ್ಕೆ ತನ್ನ ಬ್ಯಾಟಿಂಗ್ ಮೇಲೆ ಹೆಚ್ಚು ವಿಶ್ವಾಸ ಎನ್ನುವಂತಿದೆ. ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಬೌಲರ್‌ಗಳು ಬಾಂಗ್ಲಾ ತಂಡದಲ್ಲಿಲ್ಲ ಮತ್ತು ಫೀಲ್ಡಿಂಗ್ ಕೂಡ ಕಳಪೆ ಮಟ್ಟದಲ್ಲಿದೆ. ಸುಲಭದ ಕ್ಯಾಚ್‌ಗಳನ್ನೆಲ್ಲ ಕೈಚೆಲ್ಲುತ್ತಿದ್ದಾರೆ. ಕಳೆದ ದ. ಆಫ್ರಿಕಾ ವಿರುದ್ಧದ ಪಂದ್ಯವೇ ಇದಕ್ಕೆ ಸಾಕ್ಷಿ. ಆದರೆ ಬ್ಯಾಟಿಂಗ್ ತುಂಬಾ ಬಲಿಷ್ಠವಾಗಿದೆ.
ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಕಿಬ್ ಅಲ್ ಹಸನ್, ಮುಶ್ಫಿಕರ್ ರಹಿಂ, ಮೊಹಮ್ಮದುಲ್ಲ ಉತ್ತಮ ಫಾರ್ಮ್ನಲ್ಲಿ ದ್ದಾರೆ. ಆದ್ದರಿಂದ ಬಾಂಗ್ಲಾ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿಗೆ ದೊಡ್ಡ ಮೊತ್ತದ ಗುರಿ ನೀಡುವ ಯೋಜನೆ ಹಾಕಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.