ವಿಂಡೀಸ್‌ ದೈತ್ಯರನ್ನು ಕಡೆಗಣಿಸದಿರಿ…


Team Udayavani, May 23, 2019, 6:09 AM IST

KUU

ಹೊಸದಿಲ್ಲಿ: ವೆಸ್ಟ್‌ ಇಂಡೀಸ್‌ ತಂಡ ಇತ್ತೀಚೆಗಿನ ಕೆಲ ವರ್ಷದಿಂದ ತುಸು ಬಲಹೀನ ವಾಗಿರುವಂತೆ ಕಂಡಿರಬಹುದು. ಹಾಗೆಂದು ವಿಶ್ವಕಪ್‌ನ ಕೂಟದಲ್ಲಿ ದೈತ್ಯ ಆಟಗಾರರನ್ನೊಳಗೊಂಡಿರುವ ಈ ತಂಡವನ್ನು ಹಗುರವಾಗಿ ಪರಿಗಣಿಸಿದರೆ ಎದುರಾಳಿಗಳು ಭಾರೀ ಬೆಲೆ ತೆರಬೇಕಾಗಬಹುದು. ಜಾಸನ್‌ ಹೋಲ್ಡರ್‌ ನೇತೃತ್ವದ ವಿಂಡೀಸ್‌ ತಂಡಕ್ಕೆ ಅಚ್ಚರಿಯ ಫ‌ಲಿತಾಂಶ ನೀಡುವ ಸಾಮರ್ಥ್ಯವಿದೆ ಎನ್ನುವುದನ್ನು ಮರೆಯುವಂತಿಲ್ಲ.

ರಸೆಲ್‌ ಪರಾಕ್ರಮ
ಇತ್ತೀಚೆಗಷ್ಟೆ ಮುಗಿದ ಐಪಿಎಲ್‌ನಲ್ಲಿ ಅಪಾಯಕಾರಿ ಆಟಗಾರ ಕ್ರಿಸ್‌ಗೇಲ್‌ ಸಾಧಾರಣ ಯಶಸ್ಸು ಕಂಡಿದ್ದಾರೆ. ಆದರೆ ಆ್ಯಂಡ್ರೆ ರಸೆಲ್‌ ಸಿಡಿಸಿದ ಸಿಕ್ಸರ್ ಹಾಗೂ ಬೇಟೆಯಾಡಿರುವ ವಿಕೆಟ್‌ಗಳ ಸಂಖ್ಯೆ ವಿಂಡೀಸ್‌ ತಂಡ ಎಷ್ಟು ಅಪಾ ಯಕಾರಿ ಎನ್ನುವ ಸುಳಿವನ್ನು ನೀಡಿದೆ.

ಅನುಭವಿಗಳಾದ ಕಾರ್ಲೋಸ್‌ ಬ್ರಾತ್‌ವೇಟ್‌ ಮತ್ತು ಡ್ಯಾರೆನ್‌ ಬ್ರಾವೊ ಜತೆ ಏಕದಿನ ಮತ್ತು ಟಿ-20ಯಲ್ಲಿ 100 ಪ್ಲಸ್‌ ಸ್ಟ್ರೈಕ್‌ರೇಟ್‌ ಕಾಯ್ದುಕೊಂಡ ಹೆಗ್ಗಳಿಕೆ ಹೊಂದಿ ರುವ ಯುವ ಆಟಗಾರ ಶಿಮ್ರನ್‌ ಹೆಟ್‌ಮೇಯರ್‌, ಆರಂಭಿಕ ಶೈ ಹೋಪ್‌ ಅವರಿರುವ ಕೆರಿಬಿಯನ್‌ ತಂಡ ಎದುರಾಳಿಗಳಿಗೆ ಸಿಂಹಸ್ವಪ್ನವೇ ಸರಿ. ಎಲ್ಲರೂ ಎಲ್ಲ ತಂಡಗಳ ಜತೆಗೆ ಸೆಣಸಾಡಬೇಕಿರುವುದರಿಂದ ವಿಂಡೀಸ್‌ ತಂಡವನ್ನು ಯಾರೂ ಹಗು ರವಾಗಿ ಕಾಣಲು ಸಾಧ್ಯವಿಲ್ಲ.

ಕ್ರಿಕೆಟ್‌ ಮಂಡಳಿ ಜತೆ ಆಟಗಾರರ ತಿಕ್ಕಾಟದಿಂದಾಗಿ ಟೆಸ್ಟ್‌ ಮತ್ತು ಏಕದಿನ ಪಂದ್ಯಗಳಲ್ಲಿ ವೆಸ್ಟ್‌ ಇಂಡೀಸ್‌ ತಂಡ ನೀರಸ ನಿರ್ವಹಣೆ ನೀಡಿ ಹಿನ್ನಡೆ ಅನುಭವಿಸಿತ್ತು. ಇದರ ಪರಿಣಾ ಮವಾಗಿ ಗೇಲ್‌, ಕೈರನ್‌ ಪೊಲಾರ್ಡ್‌ , ಡ್ವೇನ್‌ ಬ್ರಾವೊ, ಸುನೀಲ್‌ ನಾರಾ ಯಣ್‌ ಅವರಂಥ ಸಿಡಿಲಬ್ಬರದ ಆಟಗಾರರು ಕೆಲ ಸಮಯದಿಂದೀಚೆಗೆ ಕಳೆಗುಂದಿದವರಂತೆ ಕಾಣಿಸುತ್ತಿದ್ದಾರೆ.

ಇದೀಗ ಗೇಲ್‌ ಮತ್ತು ಇತರ ಆಟಗಾ ರರು ತಂಡದಲ್ಲಿದ್ದಾರೆ. ಬ್ರಾವೊ ಮತ್ತು ಪೊಲಾರ್ಡ್‌ ಮೀಸಲು ಆಟಗಾರರಾಗಿ ಜತೆಗಿರಲಿದ್ದಾರೆ. ಇಂಗ್ಲಂಡ್‌ನ‌ ಸಣ್ಣ ಮೈದಾನ, ಫ್ಲ್ಯಾಟ್‌ ಪಿಚ್‌ ಮತ್ತು ಬೇಸಗೆ ಋತು ಎಲ್ಲವೂ ವಿಂಡೀಸ್‌ಗರಿಗೆ ಅನುಕೂಲಕರವಾಗಿದ್ದು, ಇಲ್ಲಿ ಕ್ಲಿಕ್‌ ಆದರೆ ಅವರನ್ನು ತಡೆಯುವುದು ಅಸಾಧ್ಯ.

ಅಪಾರ ಚೈತನ್ಯವನ್ನು ಹೊಂದಿರುವ, ಎತ್ತರದ ದೃಢಕಾಯ ಆಟಗಾರರಿರುವ ಈ ತಂಡ ತಮಗೆ ಸಿಕ್ಕಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದೆ ಆದರೆ ತಂಡದ ಪುನರುತ್ಥಾನವಾದಂತೆಯೇ. ಸದ್ಯ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿದ್ದರೂ ಅವರ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಇದೊಂದು ಸವಾಲಿನ ಸ್ಪರ್ಧೆಯಾಗಿದೆ. ರ್‍ಯಾಂಕಿಂಗ್‌ನಲ್ಲಿ ಬಾಂಗ್ಲಾದೇಶವು ವೆಸ್ಟ್‌ ಇಂಡೀಸ್‌ಗಿಂತ ಮೇಲಿದೆ. ಶ್ರೀಲಂಕಾ ಮತ್ತು ಹೊಸ ತಂಡ ಅಫ್ಘಾನಿಸ್ಥಾನ ಮಾತ್ರ ವೆಸ್ಟ್‌ ಇಂಡೀಸ್‌ಗಿಂತ ಕೆಳಗಿದೆ.

ವಿಶ್ವಕಪ್‌ನ ಇತಿಹಾಸ ವೆಸ್ಟ್‌ ಇಂಡೀಸ್‌ ಪರವಾಗಿರುವುದು ಅದಕ್ಕಿ ರುವ ಇನ್ನೊಂದು ಅನುಕೂಲ. 1975ರಿಂದೀಚೆಗೆ ಶುರುವಾದ ವಿಶ್ವಕಪ್‌ನ ಮೂರು ಕೂಟಗಳಲ್ಲಿ ವೆಸ್ಟ್‌ ಇಂಡೀಸ್‌ ತಂಡ ಫೈನಲ್‌ಗೇರಿತ್ತು. ಎರಡು ಬಾರಿ ಟ್ರೋಫಿ ಯನ್ನೂ ಗೆದ್ದುಕೊಂಡಿದೆ. ಹಲವು ಸಲ ವಿಶ್ವಕ್ರಿಕೆಟ್‌ನ ಮಹಾರಾಜನಾಗಿ ಮೆರೆದ ತಂಡವಿದು. ಕೆರಿಬಿಯನ್‌ ದೈತ್ಯರ ಅಬ್ಬರ ಆಂಗ್ಲರ ನೆಲದಲ್ಲಿ ಎಷ್ಟು ಪರಿಣಾಮಕಾರಿ ಎಂಬುದನ್ನು ಫ‌ಲಿತಾಂಶವೇ ಹೇಳಬೇಕು.

ಯುನಿವರ್ಸ್‌ ಬಾಸ್‌ ಕೊನೆಯ ಆಟ!
ಅಭಿಮಾನಿಗಳಿಂದ “ಯುನಿವರ್ಸ್‌ ಬಾಸ್‌’ ಎಂದು ಕರೆಸಿಕೊಳ್ಳುತ್ತಿರುವ ಗೇಲ್‌ ಪಾಲಿಗೆ ಇದು ಐದನೇ ತಥಾ ಕೊನೆಯ ವಿಶ್ವಕಪ್‌. ಈಗಲೂ ಬೌಲರ್‌ಗಳಿಗೆ ನನ್ನ ಭೀತಿಯಿದೆ ಎನ್ನುತ್ತಾರೆ 39ರ ಹರೆಯದ ಈ ಸಿಡಿಲಬ್ಬರದ ಬ್ಯಾಟ್ಸ್‌ಮ್ಯಾನ್‌. ಐಪಿಎಲ್‌ನ 13 ಪಂದ್ಯಗಳಿಂದ 490 ರನ್‌ ರಾಶಿ ಹಾಕಿರುವ ಗೇಲ್‌ ಇದಕ್ಕೂ ಮೊದಲಿನ ಏಕದಿನ ಸರಣಿಯಲ್ಲಿ 106ರ ಸರಾಸರಿಯಲ್ಲಿ 424 ರನ್‌ ಪೇರಿಸಿ ಇಂಗ್ಲಂಡ್‌ ತಂಡವನ್ನು ಕೆಡವಿದ್ದರು. ನಾಲ್ಕು ಪಂದ್ಯಗಳಲ್ಲಿ 39 ಸಿಕ್ಸರ್‌ ಬಾರಿಸಿರುವುದು ಅವರ ತೋಳಿನಲ್ಲಿ ಇನ್ನೂ ಪ್ರಚಂಡ ಶಕ್ತಿ ಇದೆ ಎನ್ನುವುದಕ್ಕೆ ಸಾಕ್ಷಿ. ಇಂಗ್ಲಂಡ್‌ ನೆಲದಲ್ಲಿ ಅವರು ಮಾಡಿರುವ ದಾಖಲೆಗಳು ಎದುರಾಳಿಗಳಲ್ಲಿ ನಡುಕ ಹುಟ್ಟಿಸುತ್ತಿವೆ.

ಯುವ ಬೌಲರ್‌ಗಳ ಬಗ್ಗೆ ಭಯ ಇಲ್ಲ ಎನ್ನುವುದು ಗೇಲ್‌ ವಿಶ್ವಾಸದ ನುಡಿ. ಹಾಗೆಂದು ಅವರೆದುರು ಬ್ಯಾಟ್‌ ಬೀಸುವುದು ಎಣಿಸಿದಷ್ಟು ಸುಲಭವಲ್ಲ. ಅವರಿಂದ ಹೆಚ್ಚು ಚುರುಕಾಗಿರಬೇಕಾಗುತ್ತದೆ.ಅವರಿಗೂ ಯುನಿವರ್ಸ್‌ ಬಾಸ್‌ನ ತಾಕತ್ತು ಏನು ಎನ್ನುವುದು ಗೊತ್ತಿದೆ, ಆದರೆ ಅದನ್ನು ಅವರು ಹೇಳಿಕೊಳ್ಳುತ್ತಿಲ್ಲ. ಅಪಾಯಕಾರಿ ಬ್ಯಾಟ್‌ಮ್ಯಾನ್‌ಗೆ ಬೌಲಿಂಗ್‌ ಮಾಡುತ್ತಿದ್ದೇವೆ ಎಂದು ಅವರು ಅರಿತಿರಬೇಕು ಎನ್ನುತ್ತಾರೆ ಗೇಲ್‌.

ಟಾಪ್ ನ್ಯೂಸ್

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.