“ನಾನು ಈಗಲೇ ನಿವೃತ್ತಿಯಾಗಬೇಕೆಂದು ಹಲವರು ಕಾಯುತ್ತಿದ್ದಾರೆ’


Team Udayavani, Jul 7, 2019, 12:48 PM IST

dhoni

ಲಂಡನ್‌: ವಿಶ್ವಕಪ್‌ ಮುಕ್ತಾಯದ ಹಂತಕ್ಕೆ ಬಂದಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ನಿವೃತ್ತಿಯಾಗುತ್ತಾರೆನ್ನುವ ಸುದ್ದಿ ಜೋರಾಗಿದೆ. ಈ ಬಗ್ಗೆ ಮೊದಲ ಬಾರಿ ಸ್ವತಃ ಧೋನಿ ಮೌನ ಮುರಿದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಾನು ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಮುನ್ನವೇ ನಿವೃತ್ತಿಯಾಗಬೇಕೆಂದು ಬೇಕಾದಷ್ಟು ಮಂದಿ ಹಾರೈಸುತ್ತಿದ್ದಾರೆ. ಆದರೆ ಯಾವಾಗ ನಿವೃತ್ತಿಯಾಗುತ್ತೇನೆಂದು ನನಗೇ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಈ ಹೇಳಿಕೆ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. ಪ್ರಸ್ತುತ ವಿಶ್ವಕಪ್‌ನಲ್ಲಿ ಧೋನಿ ಕಳಪೆ ಬ್ಯಾಟಿಂಗ್‌ ಮಾಡಿದ್ದಾರೆಂದು ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ ಸಹಿತ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಅನಾಮಿಕ ಬಿಸಿಸಿಐ ಅಧಿಕಾರಿಯೊಬ್ಬರು, ಧೋನಿಗೆ ವಿಶ್ವಕಪ್ಪೇ ಕೊನೆ ಎಂದು ಹೇಳಿದ್ದರು. ಇದರ ಬಳಿಕ ಧೋನಿ ನಿವೃತ್ತಿಯ ಕುರಿತು ಸತತವಾಗಿ ಚರ್ಚೆ ಆರಂಭವಾಗಿದೆ. ಆದರೆ ಧೋನಿ ಮಾತ್ರ ತಮ್ಮ ಅಚ್ಚರಿಯ ಹೇಳಿಕೆ ಮೂಲಕ ಎಲ್ಲರನ್ನೂ ಸ್ಟಂಪ್‌ಔಟ್‌ ಮಾಡಿದ್ದಾರೆ. ಈ ಹೇಳಿಕೆ ಯಾರನ್ನು ಕುರಿತಾಗಿ ನೀಡಿದ್ದು ಎಂಬುದೇ ಗೊಂದಲ ಮೂಡಿಸಿದೆ.

ಅಲ್ಲದೇ ತಂಡದೊಳಗೆ ಯಾರನ್ನಾದರೂ ಉದ್ದೇಶಿಸಿದ್ದೇ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿತ್ತು. ಹಾಗೇನು ಇಲ್ಲ ಎಂದು ಧೋನಿಯೇ ಸ್ಪಷ್ಟೀಕರಿಸಿದ್ದಾರೆ. ಇದಕ್ಕಿಂತ ಕುತೂಹಲ ಮೂಡಿಸಿರುವುದು ಧೋನಿ ತಾನು ಯಾವಾಗ ನಿವೃತ್ತಿಯಾಗುತ್ತೇನೆಂದು ತನಗೇ ಗೊತ್ತಿಲ್ಲ ಎಂದಿರುವುದು. ಹಿಂದಿನ
ಲೆಕ್ಕಾಚಾರಗಳ ಪ್ರಕಾರ, ವಿಶ್ವಕಪ್‌ಗೆ ಧೋನಿ ಆಟ ಅಂತ್ಯ ಎಂದು ಹೇಳಲಾಗಿತ್ತು. ಈಗ ಧೋನಿ ಇನ್ನೂ ಒಂದಷ್ಟು ಕಾಲ ಆಡುವ ಬಯಕೆ
ಹೊಂದಿರುವಂತಹ ಸುಳಿವನ್ನು ತಮ್ಮ ಹೇಳಿಕೆ ಮೂಲಕ ನೀಡಿದ್ದಾರೆ.

ಅಲ್ಲಿಗೆ ಅವರ ಸ್ಥಾನ ತುಂಬಲು ಕಾಯುತ್ತಿರುವ ರಿಷಭ್‌ ಪಂತ್‌ರಂತಹ ವಿಕೆಟ್‌ ಕೀಪರ್‌ಗಳು ಇನ್ನೂಕಾಯುವ ಪರಿಸ್ಥಿತಿ ಬರಬಹುದು. ಈ ಹಿಂದೆ ಧೋನಿ ಟೆಸ್ಟ್‌, ಸೀಮಿತ ಓವರ್‌ಗಳ ನಾಯಕತ್ವವನ್ನು ತ್ಯಜಿಸಿದಾಗ, ಅದನ್ನು ಹಠಾತ್ತನೆ ಪ್ರಕಟಿಸಿದ್ದರು. ಯಾವುದೇ ಊಹಾಪೋಹಗಳಿಗೆ ಅವಕಾಶ ನೀಡಿರಲಿಲ್ಲ. ಈಗಲೂ ಅಂತಹ ಹಠಾತ್‌ ಘೋಷಣೆಯೊಂದನ್ನು ಅಭಿಮಾನಿಗಳು ನಿರೀಕ್ಷಿಸಿದ್ದಾರೆ.

ಧೋನಿ ಒಂದು ಹೆಸರಲ್ಲ, ಅದ್ಭುತ ಪರಂಪರೆ
ಭಾನುವಾರ ಧೋನಿ ಹುಟ್ಟುಹಬ್ಬವಿದೆ. ಎಲ್ಲ ಕಡೆಯಿಂದ ಅಭಿಮಾನದ ಮಹಾಪೂರವೇ ಹರಿದುಬರುತ್ತಿದೆ. ಧೋನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ ವಿಶೇಷವಾಗಿ ಅಭಿನಂದಿಸಿದೆ. “ಧೋನಿಯೆಂದರೆ ಕೇವಲ ಒಂದು ಹೆಸರಲ್ಲ, ಅವರೊಂದು ಮರೆಯಲಾಗದ ಪರಂಪರೆ. ಅವರು ಭಾರತೀಯ ಕ್ರಿಕೆಟ್‌ನ ಚಹರೆಯನ್ನೇ ಬದಲಿಸಿದರು. ಜಾಗತಿಕವಾಗಿ ಲಕ್ಷಾಂತರ ಮಂದಿಯನ್ನು ಪ್ರಭಾವಿಸಿದ ವ್ಯಕ್ತಿ ಅವರು ಎಂದು ಐಸಿಸಿ ಹೇಳಿದೆ. ಧೋನಿ ನಾಯಕನಾಗಿ ಅದ್ಭುತ ಯಶಸ್ಸು ಸಾಧಿಸಿದ್ದಾರೆ. ಭಾರತೀಯ ಕ್ರಿಕೆಟ್‌ ತಂಡ ಮೂರೂ ಮಾದರಿಯಲ್ಲಿ ಅವರ ನಾಯಕತ್ವದಡಿಯಲ್ಲಿ ವಿಶ್ವ ನಂ.1 ಎನಿಸಿತ್ತು. ನಾಯಕನಾಗಿ ಅವರು ಒಂದು ಟಿ20, ಒಂದು ಏಕದಿನ ವಿಶ್ವಕಪ್‌ ಗೆದ್ದಿದ್ದಾರೆ. ಹಾಗೆಯೇ ಮಿನಿ ವಿಶ್ವಕಪ್‌ ಎಂದು ಕರೆಸಿಕೊಳ್ಳುವ ಚಾಂಪಿಯನ್ಸ್‌ ಟ್ರೋಯನ್ನು ಗೆದ್ದಿದ್ದಾರೆ. ವಿಶ್ವದ ಬೇರಾವುದೇ ನಾಯಕ ಈ ಮೂರು ಕಿರೀಟಗಳನ್ನು ಗೆದ್ದಿಲ್ಲ. ಇದು ವಿಶ್ವದಾಖಲೆಯಾಗಿದೆ. ಮೇಲು ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ, ಕಡೆಯ ಕಡೆಯ ಹಂತದ ಬ್ಯಾಟ್ಸ್‌ಮನ್‌ ಆಗಿ ಅವರು ಜಾಗತಿಕ ಖ್ಯಾತಿ ಗಳಿಸಿದ್ದಾರೆ. ಈಗಲೂ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಅವರಿಗೆ ಅತ್ಯಂತ ಮಹತ್ವದ ಸ್ಥಾನವಿದೆ.

ಟಾಪ್ ನ್ಯೂಸ್

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.