ಬರೆದ ಪುಟವನ್ನು ತಿಂದು ಮಾತು ಉಳಿಸಿಕೊಂಡ ಸಂಪಾದಕ!
"ವಿಸ್ಡನ್ ಕ್ರಿಕೆಟ್' ಪತ್ರಿಕೆಯ ಸಂಪಾದಕ ಡೇವಿಡ್ ಫ್ರಿತ್ ಮಾಡಿದ್ದೇನು?
Team Udayavani, May 19, 2019, 6:00 AM IST
ಹಿಂದಿನೆರಡೂ ವಿಶ್ವಕಪ್ ಗಳಲ್ಲಿ ಅತ್ಯಂತ ಹೀನಾಯವಾಗಿ ಸೋತು ಹೋಗಿದ್ದ ಭಾರತ 1983ರಲ್ಲಿ ವಿಶ್ವಕಪ್ ಎತ್ತಲಿದೆ ಎಂದು ಭವಿಷ್ಯ ನುಡಿಯಲು ಯಾರು ತಾನೇ ಸಿದ್ಧರಿದ್ದರು?! ಹೀಗೆ ಹೇಳಿದ್ದೇ ಆದರೆ ಅವರನ್ನು ಮೂರ್ಖರ ಸಾಲಿಗೆ ಸೇರಿಸಬೇಕಿತ್ತು!
ಪರಿಸ್ಥಿತಿ ಹೀಗಿರುವಾಗ “ವಿಸ್ಡನ್ ಕ್ರಿಕೆಟ್’ ಪತ್ರಿಕೆಯ ಸಂಪಾದಕ ಡೇವಿಡ್ ಫ್ರಿತ್, “ಭಾರತದಂಥ ತಂಡವನ್ನು ಇಂಥ ಪ್ರತಿಷ್ಠಿತ ಕೂಟಕ್ಕೆ ಆರಿಸಲೇಬಾರದು. ಭಾರತಕ್ಕೆ ಚಾಂಪಿಯನ್ ಆಗಲು ಖಂಡಿತ ಸಾಧ್ಯವಿಲ್ಲ’ ಎಂದು ಬರೆದಿದ್ದರು. ಇನ್ನೂ ಮುಂದು ವರಿದು, “ಅಕಸ್ಮಾತ್ ಭಾರತ ವಿಶ್ವಕಪ್ ಎತ್ತಿದ್ದೇ ಆದಲ್ಲಿ ನಾನಿಲ್ಲಿ ಬರೆದುದನ್ನು ಕಾಗದ ಸಮೇತ ನುಂಗುತ್ತೇನೆ’ ಎಂದು ಚಾಲೆಂಜ್ ಕೂಡ ಹಾಕಿದ್ದರು.
ಗೆದ್ದೇ ಬಿಟ್ಟಿತಲ್ಲ ಭಾರತ!
ಡೇವಿಡ್ ಫ್ರಿತ್‌ಗೆ ತಾನು ಬರೆ ದದ್ದು ನೆನಪಿನಲ್ಲಿತ್ತೋ ಇಲ್ಲವೋ, ಆದರೆ ನ್ಯೂ ಜೆರ್ಸಿಯಲ್ಲಿರುವ ಭಾರತೀಯ ಮೂಲದ ಮಾನ್ ಸಿಂಗ್ ಎಂಬ ಓದುಗರೊಬ್ಬರು ಇದನ್ನು ನೆನಪಿಸಿದರು. ಫ್ರಿತ್ ಹಿಂದೇಟು ಹಾಕಲಿಲ್ಲ. ಕೊಟ್ಟ ಮಾತಿನಂತೆ ಆ ಬರಹವುಳ್ಳ ವಿಸ್ಡನ್ ಪತ್ರಿಕೆಯ ಪುಟಗಳನ್ನು ಹರಿದು ತಿಂದೇ ಬಿಟ್ಟರು. ಮುಂದಿನ ಸಂಚಿಕೆ ಯಲ್ಲಿ ತಾನು ಕಾಗದ ತಿನ್ನುತ್ತಿರುವ ಚಿತ್ರವನ್ನೂ ಪ್ರಕಟಿಸಿ ಓದುಗರಿಂದ ಶಹಬ್ಟಾಸ್‌ಗಿರಿ ಪಡೆದರು!
ಫ್ರಿತ್ ಕಾಗದ ತಿನ್ನುತ್ತಿರುವ ಚಿತ್ರ ಹಾಗೂ ಮಾನ್ ಸಿಂಗ್ ಅವರ ಪತ್ರ 1983ರ ಸೆಪ್ಟಂಬರ್ ಸಂಚಿಕೆಯ “ವಿಸ್ಡನ್’ ಸಂಚಿಕೆಯಲ್ಲಿ ಒಟ್ಟೊಟ್ಟಿಗೇ ಪ್ರಕಟವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.