![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Jul 7, 2019, 5:49 AM IST
ಲಂಡನ್: ವಿಶ್ವಕಪ್ ಕ್ರಿಕೆಟ್ ಎನ್ನುವುದು ಅನೇಕ ಹಿರಿಯ ಕ್ರಿಕೆಟಿಗರ ಪಾಲಿಗೆ ವಿದಾಯ ಕೂಟವಾಗುವುದು ವಿಶೇಷವೇನಲ್ಲ. ಈ ಸಾಲಿನಲ್ಲಿ ಅಂಪಾಯರ್ ಕೂಡ ಕಾಣಿಸಿಕೊಳ್ಳುತ್ತಿರುವುದು ತುಸು ಅಚ್ಚರಿಯೆನಿಸಿದೆ. ಹೀಗೆ ವಿದಾಯ ಹೇಳುವ ಅಂಪಾಯರ್ ಆತಿಥೇಯ ಇಂಗ್ಲೆಂಡಿನ ಇಯಾನ್ ಗೂಲ್ಡ್.
ಭಾರತ-ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಅಂಪಾಯರ್ ಆಗಿ ಸೇವೆ ಸಲ್ಲಿಸಿದ 61ರ ಹರೆಯದ ಇಯಾನ್ ಗೂಲ್ಡ್ ಪಾಲಿಗೆ ಇದೇ ಕೊನೆಯ ಅಂತಾರಾಷ್ಟ್ರೀಯ ಪಂದ್ಯವೆಂದೂ, ಈ ಮುಖಾಮುಖೀ ಮುಗಿದೊಡನೆ ಅವರು ತಮ್ಮ ಅಂಪಾಯರಿಂಗ್ ಬಾಳ್ವೆಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಿಳಿಸಿದೆ.
ಇಯಾನ್ ಗೂಲ್ಡ್ 74 ಟೆಸ್ಟ್‌ಗಳಲ್ಲಿ ಅಂಪಾಯರಿಂಗ್ ಸೇವೆ ಸಲ್ಲಿಸಿದ್ದಾರೆ. ಭಾರತ-ಶ್ರೀಲಂಕಾ ನಡುವಿನ ಮುಖಾಮುಖೀ ಅವರ 140ನೇ ಏಕದಿನ ಪಂದ್ಯವಾಗಿದೆ.
ಇದು ಇಯಾನ್ ಗೂಲ್ಡ್ ಕರ್ತವ್ಯ ನಿಭಾಯಿಸಿದ 4ನೇ ಐಸಿಸಿ ವಿಶ್ವಕಪ್ ಪಂದ್ಯಾವಳಿ. ಮೊಹಾಲಿಯಲ್ಲಿ ನಡೆದ 2011ರ ಭಾರತ-ಪಾಕಿಸ್ಥಾನ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಕರ್ತವ್ಯ ನಿಭಾಯಿಸಿದ ಹೆಗ್ಗಳಿಕೆ ಇವರದ್ದಾಗಿದೆ.
ಮೊದಲು ವಿಕೆಟ್ ಕೀಪರ್
ಯಶಸ್ವಿ ವಿಕೆಟ್ ಕೀಪರ್ ಆಗಿದ್ದ ಇಯಾನ್ ಗೂಲ್ಡ್ 1983ರ ವಿಶ್ವಕಪ್ ವೇಳೆ ಇಂಗ್ಲೆಂಡ್ ತಂಡದಲ್ಲಿದ್ದರು. ಒಟ್ಟು18 ಏಕದಿನ ಪಂದ್ಯಗಳನ್ನಾಡಿದ್ದಾರೆ. ಆಬಳಿಕ ಮಿಡ್ಲ್ ಸೆಕ್ಸ್ ಕೌಂಟಿಗೆ ಕೋಚ್ ಆಗಿ ದುಡಿದರು.
ಕೀಪರ್ ಹಾಗೂ ಕೋಚಿಂಗ್‌ಗಿಂತಲೂ ಮಿಗಿಲಾಗಿ ಅಂಪಾಯರ್ ಆಗಿದ್ದ ವೇಳೆ ಗೂಲ್ಡ್ ಹೆಚ್ಚು ಜನಪ್ರಿಯರಾಗಿದ್ದರು. 13 ವರ್ಷಗಳ ಹಿಂದೆ ಇಂಗ್ಲೆಂಡ್-ಶ್ರೀಲಂಕಾ ನಡುವಿನ ಟಿ20 ಪಂದ್ಯದಲ್ಲಿ ಅಂಪಾಯರ್ ಆಗಿ ಪದಾರ್ಪಣೆ ಮಾಡಿದ್ದರು. ಐದೇ ದಿನಗಳ ಬಳಿಕ ಈ ಎರಡು ತಂಡಗಳ ನಡುವಿನ ಏಕದಿನ ಪಂದ್ಯದಲ್ಲೂ ಅಂಪಾಯರ್ ಆಗಿ ಕರ್ತವ್ಯ ಆರಂಭಿಸಿದರು.
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.