“ಯಾವ ಕ್ರಮಾಂಕವಾದರೂ ಸೈ’ : ಕೆ.ಎಲ್. ರಾಹುಲ್
Team Udayavani, May 18, 2019, 9:59 AM IST
ಹೊಸದಿಲ್ಲಿ: ವಿಶ್ವಕಪ್‌ನಲ್ಲಿ ಭಾರತಕ್ಕೆ ಎದುರಾಗಿರುವ ದೊಡ್ಡ ಸಮಸ್ಯೆಯೆಂದರೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನದ್ದು. ಇಲ್ಲಿ ಸೂಕ್ತ ಆಟಗಾರರಿಲ್ಲದಿರುವುದು ಚರ್ಚೆಗೆ ಕಾರಣವಾಗಿದೆ. 4ನೇ ಕ್ರಮಾಂಕಕ್ಕೆ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡಿದೆ. ಈ ಕ್ರಮಾಂಕದಕಲ್ಲಿ ಕೆ.ಎಲ್. ರಾಹುಲ್ ಅವರನ್ನು ಆಡಿಸುವ ಸಾಧ್ಯತೆ ಇದೆಯೇ?
ಈ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಪಿಟಿಐ ಸುದ್ದಿಸಂಸ್ಥೆ ಶುಕ್ರವಾರ ಕೆ.ಎಲ್. ರಾಹುಲ್ ಅವರನ್ನು ಸಂದರ್ಶಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕದ ಆರಂಭಕಾರ, ತನಗೆ ಯಾವ ಕ್ರಮಾಂಕವಾದರೂ ಅಡ್ಡಿಯಿಲ್ಲ ಎಂದಿದ್ದಾರೆ.
“ಆಯ್ಕೆಗಾರರು ನನ್ನನ್ನು ತಂಡಕ್ಕೆ ಆರಿಸಿದ್ದಾರೆ. ಅಂದಮೇಲೆ ತಂಡದ ಆಡಳಿತ ಮಂಡಳಿ ನನಗೆ ಸಂಬಂಧಿಸಿದಂತೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಬದ್ಧನಾಗಿರಬೇಕಾಗುತ್ತದೆ’ ಎಂದು ರಾಹುಲ್ ಹೇಳಿದರು.
ಐಪಿಎಲ್‌ನಲ್ಲಿ ರನ್ ಸುರಿಮಳೆ
ಆಸ್ಟ್ರೇಲಿಯ ವಿರುದ್ಧದ 2 ಟಿ20 ಪಂದ್ಯಗಳಲ್ಲಿ ಕ್ರಮವಾಗಿ 50 ಮತ್ತು 47 ರನ್ ಬಾರಿಸಿದ ರಾಹುಲ್, ಇದೇ ಫಾರ್ಮನ್ನು ಐಪಿಎಲ್‌ಗೂ
ವಿಸ್ತರಿಸಿದರು. ಪಂಜಾಬ್ 53.90ರ ಸರಾಸರಿಯಲ್ಲಿ 593 ರನ್ ಪೇರಿಸಿ ಮೆರೆದರು. ಇದರಲ್ಲಿ ಒಂದು ಶತಕವೂ ಸೇರಿದೆ. ವಾರ್ನರ್ ಬಳಿಕ ಅತ್ಯಧಿಕ ರನ್ ಪೇರಿಸಿದ ಹೆಗ್ಗಳಿಕೆಯೂ ಇವರದಾಗಿದೆ. ಹೀಗಾಗಿ ವಿಶ್ವಕಪ್‌ನಲ್ಲೂ ರಾಹುಲ್ ಮಿಂಚಬಲ್ಲರೆಂಬ ಭರವಸೆ ಮೂಡಿದೆ.
“ಕಳೆದೆರಡು ತಿಂಗಳಿಂದ ನನ್ನ ಬ್ಯಾಟಿಂಗ್ ಉತ್ತಮ ಲಯದಲ್ಲಿದೆ. ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡುವಾಗ ಬ್ಯಾಟಿಂಗ್ ಕೌಶಲದತ್ತ ಹೆಚ್ಚಿನ ಗಮನ ನೀಡಲು ಸಾಧ್ಯವಾಯಿತು. ಹೀಗಾಗಿ ಆಸ್ಟ್ರೇಲಿಯ ವಿರುದ್ಧದ ಟಿ20, ಐಪಿಎಲ್‌ನಲ್ಲಿ ರನ್ ಉತ್ತಮ ರನ್ ಸಂಪಾದಿಸಿದೆ’ ಎಂದರು.
“ನನ್ನ ಬ್ಯಾಟಿಂಗ್ ಟೆಕ್ನಿಕ್ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ನನ್ನದು ಸರಳ ಟೆಕ್ನಿಕ್. ವಿಶ್ವ ಮಟ್ಟದ ಕೂಟಗಳಲ್ಲಿ ಫಾರ್ಮ್ ಮುಖ್ಯವಾಗುತ್ತದೆ’ ಎಂಬುದು ರಾಹುಲ್ ಅಭಿಪ್ರಾಯ.
ಇಂಗ್ಲೆಂಡ್ ವಾತಾವರಣದ ಅರಿವಿದೆ
ಕಳೆದ ಇಂಗ್ಲೆಂಡ್ ಪ್ರವಾಸದ ವೇಳೆ ಅಸ್ಥಿರ ಪ್ರದರ್ಶನ ನೀಡಿದ ಪ್ರಶ್ನೆಯೂ ರಾಹುಲ್‌ಗೆ ಎದುರಾಯಿತು. “ಕಳೆದ ವರ್ಷ ಇದೇ ಅವಧಿಯಲ್ಲಿ ನಾವು ಇಂಗ್ಲೆಂಡ್‌ನಲ್ಲಿದ್ದೆವು. ಹೀಗಾಗಿ ಅಲ್ಲಿನ ವಾತಾವರಣದ ಬಗ್ಗೆ ಅರಿವಿದೆ. ಕಳೆದ ಪ್ರವಾಸ ಯಾರಿಗೂ ಆತ್ಮವಿಶ್ವಾಸ ತುಂಬಿಸದು. ನಾವು ಫ್ರೆಶ್ ಆಗಿ ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಆಡಬೇಕಿದೆ. ಇದಕ್ಕಾಗಿ ಉತ್ತಮ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ರಾಹುಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.