ಇಯಾನ್ ಮಾರ್ಗನ್ ದಾಖಲೆ
Team Udayavani, May 31, 2019, 6:00 AM IST
ಓವಲ್: ಐಸಿಸಿ ವಿಶ್ವಕಪ್ ಕ್ರಿಕೆಟ್ ಕೂಟದ ಆರಂಭಿಕ ಪಂದ್ಯಕ್ಕಾಗಿ ಟಾಸ್‌ಗೆ ಆಗಮಿಸಿದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಅವರು ದಾಖಲೆಯೊಂದನ್ನು ಮುರಿದಿದ್ದಾರೆ.
ಅಯರ್‌ಲ್ಯಾಂಡ್ ಮೂಲದ ಮಾರ್ಗನ್ ಅವರು ಇಂಗ್ಲೆಂಡ್ ಪರ 200 ಏಕದಿನ ಪಂದ್ಯವನ್ನಾಡಿದ ಮೊದಲ ಆಟಗಾರ ಆಗಿದ್ದಾರೆ. ಅವರು ಈಗಾಗಲೇ ಪಾಲ್ ಕಾಲಿಂಗ್‌ವುಡ್ ಅವರ ದಾಖಲೆ (197 ಏಕದಿನ) ಯನ್ನು ಅಳಿಸಿ ಹಾಕಿದ್ದಾರೆ. ಪಾಕಿಸ್ಥಾನ ವಿರುದ್ಧ ನಡೆದ ಐದು ಪಂದ್ಯಗಳ ಸರಣಿ ವೇಳೆ ಮಾರ್ಗನ್ ಈ ದಾಖಲೆ ಮುರಿದಿದ್ದರು.
ಉದ್ಘಾಟನ ಪಂದ್ಯದಲ್ಲಿ ಆಡುವ ಮೂಲಕ ಮಾರ್ಗನ್ ಇಂಗ್ಲೆಂಡ್ ಪರ ದ್ವಿಶತಕ ಪಂದ್ಯ ಆಡಿದ ಸಾಧಕ ಎಂದೆನಿಸಿಕೊಂಡರು. ಇಂಗ್ಲೆಂಡ್ ಪರ ಮಾರ್ಗನ್ ಉತ್ತಮ ಗೆಲುವಿನ ದಾಖಲೆ ಹೊಂದಿದ್ದಾರೆ. ಇಷ್ಟರವರೆಗೆ ಆಡಿದ 199 ಏಕದಿನ ಪಂದ್ಯಗಳ ವೇಳೆ ಮಾರ್ಗನ್ ನೇತೃತ್ವದ ಪಡೆ 113 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.
ತನ್ನ ಬಾಳ್ವೆ ವೇಳೆ ಮಾರ್ಗನ್ 221 ಏಕದಿನ ಪಂದ್ಯಗಳನ್ನಾಡಿದ್ದಾರೆ. ಅಯರ್‌ಲ್ಯಾಂಡ್ ಪರ 21 ಪಂದ್ಯ ಆಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.