ರೌಂಡ್‌ ರಾಬಿನ್‌ ಲೀಗ್‌


Team Udayavani, May 30, 2019, 6:00 AM IST

x-3

ವಿಶ್ವವನ್ನು ಗೆಲ್ಲಲು ಹೊರಟವರು ಕೆಲವೇ ಎದುರಾಳಿಗಳನ್ನು ಮಣಿಸಿದರೆ ಪರಿಪೂರ್ಣವೆನಿಸದು. ಎಲ್ಲರನ್ನೂ ಎದುರಿಸಿದಾಗಲೇ ಈ ಗೆಲುವಿಗೊಂದು ಅರ್ಥ. ಇದಕ್ಕೆ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಕೂಡ ಹೊರತಲ್ಲ. ಸಾಮಾನ್ಯವಾಗಿ ಇಲ್ಲಿ ಗ್ರೂಪ್‌ ಹಂತದಲ್ಲಿ ಸ್ಪರ್ಧೆ ನಡೆಯುತ್ತದೆ. ಗ್ರೂಪ್‌ನಿಂದ ನಿರ್ಗಮಿಸಿದ ತಂಡಗಳ ವಿರುದ್ಧ ಆಡುವ ಅವಕಾಶ ಬಹುತೇಕ ತಂಡಗಳಿಗೆ ಸಿಗುವುದೇ ಇಲ್ಲ. ಕೆಲವೇ ತಂಡಗಳ ವಿರುದ್ಧ ಸತತ ಗೆಲುವನ್ನು ದಾಖಲಿಸುತ್ತ ಬರುವ ತಂಡವೊಂದು ಕಪ್‌ ಎತ್ತುತ್ತದೆ.

ಭಾರತಕ್ಕೆ ಪಾಕ್‌ ಎದುರಾಗಿರಲಿಲ್ಲ
1983ರ ಉದಾಹರಣೆಯನ್ನೇ ಗಮನಿಸಿ. ಭಾರತ ಅಂದು ಮೊದಲ ಸಲ ಕಪ್‌ ಎತ್ತಿ ಇತಿಹಾಸ ನಿರ್ಮಿಸಿತ್ತು. ವೆಸ್ಟ್‌ ಇಂಡೀಸನ್ನು 2 ಸಲ, ಆತಿಥೇಯ ಇಂಗ್ಲೆಂಡನ್ನು ಸೆಮಿಫೈನಲ್‌ನಲ್ಲಿ ಕಪಿಲ್‌ ಪಡೆ ಕೆಡವಿದ್ದು ದೊಡ್ಡ ಸಾಧನೆಯಾಗಿತ್ತು. ಆದರೆ ಅಂದು ಬದ್ಧ ಎದುರಾಳಿ ಪಾಕಿಸ್ಥಾನವನ್ನು ಭಾರತ ಎದುರಿಸಿರಲೇ ಇಲ್ಲ. ಹಾಗೆಯೇ ನ್ಯೂಜಿಲ್ಯಾಂಡ್‌ ವಿರುದ್ಧವೂ ಆಡುವ ಅವಕಾಶ ಭಾರತಕ್ಕೆ ಲಭಿಸಿರಲಿಲ್ಲ. ವೆಸ್ಟ್‌ ಇಂಡೀಸ್‌ ಮೊದಲೆರಡು ಸಲ ಕಪ್‌ ಗೆದ್ದಾಗ, ಆಸ್ಟ್ರೇಲಿಯ ಹ್ಯಾಟ್ರಿಕ್‌ ಸಾಧಿಸಿದಾಗಲೂ ಈ ಮಾತು ಅನ್ವಯಿಸುತ್ತದೆ. ಆದರೆ “ರೌಂಡ್‌ ರಾಬಿನ್‌ ಲೀಗ್‌’ ಇಂಥ ನ್ಯೂನತೆಗಳನ್ನೆಲ್ಲ ಹೊಡೆದೋಡಿಸುತ್ತದೆ. ಇಲ್ಲಿ ತಂಡವೊಂದು ಉಳಿದೆಲ್ಲ ತಂಡಗಳ ವಿರುದ್ಧ ಆಡಲಿಳಿಯುತ್ತದೆ. ಆಗ ನಿಜವಾದ ಸಾಮರ್ಥ್ಯ ಅನಾವರಣಗೊಳ್ಳುತ್ತದೆ. 1992ರಲ್ಲಿ ಮೊದಲ ಸಲ ಏಕದಿನ ವಿಶ್ವಕಪ್‌ನಲ್ಲಿ ಈ ಮಾದರಿಯನ್ನು ಅಳವಡಿಸಲಾಗಿತ್ತು. ಅನಂತರ ಈ ಮಾದರಿಗೆ ಆದ್ಯತೆ ನೀಡುತ್ತಿರುವುದು ಇದೇ ಮೊದಲು. ಹೀಗಾಗಿ ಈ ಕೂಟದ ರೋಮಾಂಚನಕ್ಕೆ ಬಹುಶಃ ಸಾಟಿ ಇರಲಿಕ್ಕಿಲ್ಲ!

ಭಾರತ, ಆಸ್ಟ್ರೇಲಿಯ ನೆಚ್ಚಿನ ತಂಡಗಳು
ಮೂಲತಃ ಬೆಂಗಳೂರಿನಲ್ಲಿ ಜನಿಸಿದ ರೋಜರ್‌ ಬಿನ್ನಿ 1983ರ ವಿಶ್ವಕಪ್‌ನಲ್ಲಿ ಗರಿಷ್ಠ 18 ವಿಕೆಟ್‌ ಪಡೆದು ಭಾರತ ತಂಡ ಮೊತ್ತ ಮೊದಲ ಬಾರಿಗೆ ವಿಶ್ವ ಕ್ರಿಕೆಟ್‌ನಲ್ಲಿ ಅಧಿಪತ್ಯ ಸ್ಥಾಪಿಸಲು ಬಲುದೊಡ್ಡ ಕೊಡುಗೆ ನೀಡಿದವರು. ತಮ್ಮ ಮಧ್ಯಮ ವೇಗದ ಬೌಲಿಂಗ್‌ ಮೂಲಕವೇ ಆಂಗ್ಲರ ನಾಡಿನಲ್ಲಿ ಯಶಸ್ಸು ಕಂಡವರು. 27 ಟೆಸ್ಟ್‌ ಹಾಗೂ 72 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ, ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ ಮೂಲಕ ಗಮನಾರ್ಹ ಕೊಡುಗೆ ಸಲ್ಲಿಸಿದವರು. ತಮ್ಮ ವಿಶ್ವಕಪ್‌ ವಿಜೇತ ತಂಡದ ಒಡನಾಡಿ ಮೊಹಿಂದರ್‌ ಅಮರನಾಥ್‌ ಜತೆ ಕೆಲ ವರ್ಷಗಳ ಕಾಲ ಭಾರತ ತಂಡದ ಆಯ್ಕೆ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

1983ರ ವಿಶ್ವಕಪ್‌ ವಿಜೇತ ತಂಡದ ಭಾಗವಾಗಿದ್ದೀರಿ, ಫೈನಲ್‌ ಗೆದ್ದ ಕ್ಷಣ ಹೇಗಿತ್ತು?
ನಿಜಕ್ಕೂ ಇದು ನಮಗೆಲ್ಲ ಹೆಮ್ಮೆಯ ಕ್ಷಣ. ಆ ಗೆಲುವನ್ನು ನಮಗೆ ಮಾತ್ರವಲ್ಲ, ದೇಶದ ಎಲ್ಲರಿಗೂ ನಂಬಲಸಾಧ್ಯವಾಗಿತ್ತು. ವೆಸ್ಟ್‌ ಇಂಡೀಸ್‌, ಇಂಗ್ಲೆಂಡ್‌, ಆಸ್ಟ್ರೇಲಿಯದಂತಹ ಬಲಿಷ್ಠ ತಂಡಗಳಿದ್ದ ಪಂದ್ಯಾವಳಿಯಲ್ಲಿ ನಾವು ವಿಜೇತರಾಗಿದ್ದು, ಭಾರತಕ್ಕೆ ದೊಡ್ಡ ಗೌರವವೂ ಆಗಿತ್ತು. ಇದು ಕೇವಲ ಒಂದು ಗೆಲುವಲ್ಲ. ಭಾರತೀಯ ಕ್ರಿಕೆಟ್‌ ರಂಗದ ಭವಿಷ್ಯಕ್ಕೆ ಹೊಸ ಭಾಷ್ಯ ಬರೆದ ಅತ್ಯಮೂಲ್ಯವಾದ ಗೆಲುವು.

ವಿಶ್ವಕಪ್‌ ಆಡಲು ಇಂಗ್ಲೆಂಡಿಗೆ ತೆರಳುವಾಗ ಕಪ್‌ ಗೆಲ್ಲುವ ವಿಶ್ವಾಸವಿತ್ತೆ?
ಆ ಗೆಲುವೇ ಒಂದು ಕನಸು. ನಾವೆಲ್ಲ ಅಲ್ಲಿಗೆ ಹೋಗುವ ಮೊದಲಾಗಲೀ ಅಥವಾ ಅಲ್ಲಿ ಆಡುತ್ತಿರುವಾಗಲೂ ಕಪ್‌ ಗೆಲ್ಲುವ ಬಗ್ಗೆ ಯಾವುದೇ ದೃಢವಾದ ವಿಶ್ವಾಸವಿರಲಿಲ್ಲ. ಆದರೆ ಉತ್ತಮವಾಗಿ ಆಟವಾಡಬೇಕು ಎನ್ನುವ ಛಲವಿತ್ತು. ಅದರಂತೆ ತಂಡದ ಪ್ರತಿಯೊಬ್ಬರೂ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಕ್ರಿಕೆಟ್‌ ಶಿಶುಗಳಾಗಿ ಹೋಗಿದ್ದ ನಾವು ಭಾರತಕ್ಕೆ ಮರಳುವಾಗ ಚಾಂಪಿಯನ್ನರಾಗಿದ್ದೆವು!

ಫೈನಲ್‌ನಲ್ಲಿ ದೈತ್ಯ ವಿಂಡೀಸ್‌ ವಿರುದ್ಧ ಕೇವಲ 183 ರನ್‌ಗಳ ಗುರಿ ನೀಡಿದಾಗ ಗೆಲ್ಲುವ ನಂಬಿಕೆಯಿತ್ತೆ?
ಖಂಡಿತ ಇರಲಿಲ್ಲ. ವಿವಿಯನ್‌ ರಿಚರ್ಡ್ಸ್‌, ಕ್ಲೈವ್‌ ಲಾಯ್ಡ, ಗ್ರಿನೀಜ್‌, ಹೇನ್ಸ್‌ ಅವರಂತಹ ಘಟಾನುಘಟಿಗಳಿಗೆ ಇದೊಂದು ಸವಾಲಿನ ಮೊತ್ತವೇ ಆಗಿರಲಿಲ್ಲ. ಆದರೆ “ಲೋ ಸ್ಕೋರ್‌’ ನಮಗೆ ವರದಾನವಾಗಿ ಪರಿಣಮಿಸಿತು. ಕೆರಿಬಿಯನ್ನರು ಕೂಡ ಇದನ್ನು ಸಾಮಾನ್ಯ ಮೊತ್ತ ಎಂದು ಪರಿಗಣಿಸಿದ್ದರು ಅನ್ನಿಸುತ್ತೆ. ಹಾಗಾಗಿ ಕೊನೆಯಲ್ಲಿ ಗೆಲುವು ನಮ್ಮದಾಯಿತು.

ವಿಶ್ವಕಪ್‌ನಲ್ಲಿ ಗರಿಷ್ಠ 18 ವಿಕೆಟ್‌ ಪಡೆದು ಗೆಲುವಿನ ರೂವಾರಿಯಾಗಿದ್ದೀರಿ?
ಭಾರತೀಯ ಕ್ರಿಕೆಟಿನ ಹೊಸ ಅಧ್ಯಾಯ ಆರಂಭವಾದ 1983ರ ವಿಶ್ವಕಪ್‌ ಗೆಲುವಿನಲ್ಲಿ ಬೌಲಿಂಗ್‌ ಮೂಲಕ ಕೊಡುಗೆ ನೀಡಿದ ಬಗ್ಗೆ ತೃಪ್ತಿ ಮತ್ತು ಖುಷಿ ಇದೆ. ಇಂಗ್ಲೆಂಡಿನ ಪಿಚ್‌ ಪರಿಸ್ಥಿತಿ ನನ್ನ ಬೌಲಿಂಗ್‌ ಶೈಲಿಗೆ ಹೊಂದುವಂತೆ ಇತ್ತು. ಹಾಗಾಗಿಯೇ ನಾನು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು.

ಈ ಬಾರಿಯ ವಿಶ್ವಕಪ್‌ನಲ್ಲಿ ಯಾವ ತಂಡ ಚಾಂಪಿಯನ್‌ ಆಗಬಹುದು?
ನನ್ನ ಪ್ರಕಾರ ಎಲ್ಲ ತಂಡಗಳೂ ಈ ಸಲ ಬಲಿಷ್ಠವಾಗಿವೆ. ಆದರೂ ಭಾರತ ಹಾಗೂ ಆಸ್ಟ್ರೇಲಿಯ ಗೆಲ್ಲುವ ನೆಚ್ಚಿನ ತಂಡಗಳು. ಆತಿಥೇಯ ಇಂಗ್ಲೆಂಡ್‌ ಹಾಗೂ ನ್ಯೂಜಿಲ್ಯಾಂಡ್‌ ಕೂಡ ಉತ್ತಮ ತಂಡಗಳಾಗಿವೆ.

ಈ ಬಾರಿ ಭಾರತ ತಂಡಕ್ಕೆ ಗೆಲ್ಲುವ ಅವಕಾಶ ಹೇಗಿದೆ?
ಭಾರತ ಉತ್ತಮ ಸಮತೋಲಿತ ತಂಡವಾಗಿದ್ದು, ಕೆಲವೊಂದು ಸಣ್ಣ ಸಣ್ಣ ತಪ್ಪುಗಳನ್ನು ಕೂಡಲೇ ಸರಿಪಡಿಸಿಕೊಳ್ಳಬೇಕಿದೆ. ಉತ್ತಮ ಬ್ಯಾಟಿಂಗ್‌ ಲೈನ್‌ಅಪ್‌ ಇದೆ, ಬೌಲಿಂಗ್‌ ಪಡೆಯಂತೂ ಅದ್ಭುತವಾಗಿದೆ. ಆಲ್‌ರೌಂಡರ್‌ ವಿಭಾಗ ಹಿಂದಿಗಿಂತ ಚೆನ್ನಾಗಿಯೇ ಇದೆ. ಇಲ್ಲಿ ವೇಗದ ಬೌಲರ್‌ಗಳು ಸ್ವಿಂಗ್‌ ಕಡೆಗೆ ಹೆಚ್ಚು ಗಮನಕೊಟ್ಟರೆ ಖಂಡಿತ ಯಶಸ್ವಿಯಾಗಬಲ್ಲರು.

1983ರ ವಿಶ್ವಕಪ್‌ ವಿಜೇತ ತಂಡದ ಪ್ರಮುಖ ಆಲ್‌ರೌಂಡರ್‌, ಬೌಲಿಂಗ್‌ ಆಧಾರ ಸ್ತಂಭವಾಗಿದ್ದ ಕರುನಾಡಿನ ಹೆಮ್ಮೆಯ ಆಟಗಾರ ರೋಜರ್‌ ಬಿನ್ನಿ ವಿಶ್ವಕಪ್‌ ಸಂದರ್ಭ ದಲ್ಲಿ ಉದಯವಾಣಿಗೆ ನೀಡಿರುವ ವಿಶೇಷ ಸಂದರ್ಶನ.

ರೋಜರ್‌ ಬಿನ್ನಿ
1983ರ ವಿಶ್ವಕಪ್‌ ಗೆಲುವಿನ ರೂವಾರಿ

ಟಾಪ್ ನ್ಯೂಸ್

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

dw

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

8

Kasaragod: ಟ್ಯಾಂಕರ್‌ ಲಾರಿಯಿಂದ ರಸ್ತೆಗೆ ಹರಿದ ಎಣ್ಣೆ

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.