1992 ರ ಓಟ ಮುಂದುವರಿಸಿದ ಪಾಕಿಸ್ಥಾನ
ಹೀಗೊಂದು ಕಾಕತಾಳೀಯ ಫಲಿತಾಂಶ
Team Udayavani, Jun 28, 2019, 5:39 AM IST
ವಿಶ್ವಕಪ್‌ನಲ್ಲಿ ಇತಿಹಾಸ ಮರುಕಳಿಸುತ್ತಿದೆಯೇ? 1992 ಹಾಗೂ 2019ರ ಪಾಕಿಸ್ಥಾನ ಪಂದ್ಯದ ಫಲಿತಾಂಶಗಳನ್ನು ಕಂಡಾಗ ಇದು ಸ್ಪಷ್ಟವಾಗುತ್ತದೆ. ಇಲ್ಲಿ ಪಾಕಿಸ್ಥಾನದ ಮೊದಲ ಏಳೂ ಪಂದ್ಯಗಳ ಫಲಿತಾಂಶ ಒಂದೇ ಆಗಿರುವುದೇ ಇದಕ್ಕೆ ಸಾಕ್ಷಿ. ಕ್ರಿಕೆಟ್ ಸ್ವಾರಸ್ಯಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ. ಇದನ್ನು ಗಮನಿಸಿ…
ಪಾಕ್ ಮುಂದಿನ ಹಾದಿ ಹೇಗೆ?
ಪಾಕಿಸ್ಥಾನದ ಮುಂದಿನ ಹಾದಿ ಹೇಗೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. 1992ರಲ್ಲಿ 8ನೇ ಹಾಗೂ 9ನೇ ಪಂದ್ಯಗಳೆರಡರಲ್ಲೂ ಪಾಕಿಸ್ಥಾನ ಆತಿಥೇಯ ನ್ಯೂಜಿಲ್ಯಾಂಡನ್ನು ಕೆಡವಿತ್ತು. ಇದರಲ್ಲೊಂದು ಲೀಗ್ ಪಂದ್ಯವಾಗಿತ್ತು. ಗೆಲುವಿನ ಅಂತರ 7 ವಿಕೆಟ್. ಮುಂದಿನದು ಸೆಮಿಫೈನಲ್. ಇದನ್ನು 4 ವಿಕೆಟ್‌ಗಳಿಂದ ಗೆದ್ದು ನ್ಯೂಜಿಲ್ಯಾಂಡನ್ನು ಕೂಟದಿಂದ ಹೊರದಬ್ಬಿತು. ಫೈನಲ್‌ನಲ್ಲಿ ಇಂಗ್ಲೆಂಡನ್ನು 22 ರನ್ನುಗಳಿಂದ ಮಣಿಸಿ ಮೊದಲ ಸಲ ವಿಶ್ವಕಪ್ ಎತ್ತಿ ಮೆರೆದಾಡಿತು. ಅಂದು ಪಾಕಿಸ್ಥಾನ ತಂಡದ ನಾಯಕನಾಗಿದ್ದ ಇಮ್ರಾನ್ ಖಾನ್ ಇಂದು ಪಾಕ್ ಪ್ರಧಾನಿಯಾಗಿದ್ದಾರೆ!
-ಪಾಕಿಸ್ಥಾನ ಈ ಎರಡೂ ಕೂಟಗಳ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದೊಡ್ಡ ಅಂತರದಲ್ಲಿ ಸೋತಿತ್ತು. ಅಂದು ಎದುರಾದದ್ದು 10 ವಿಕೆಟ್ ಸೋಲು. ಇದು ವಿಶ್ವಕಪ್‌ನಲ್ಲಿ ಪಾಕ್ ಅನುಭವಿಸಿದ ವಿಕೆಟ್ ಅಂತರದ ಅತೀ ದೊಡ್ಡ ಸೋಲಾಗಿತ್ತು. ಈ ಬಾರಿ 218 ಎಸೆತ ಬಾಕಿ ಇರುವಾಗಲೇ ಎಡವಿತು. ಇದು ಉಳಿದ ಎಸೆತಗಳ ಲೆಕ್ಕಾಚಾರದಲ್ಲಿ ವಿಶ್ವಕಪ್‌ನಲ್ಲಿ ಪಾಕ್‌ಗೆ ಎದುರಾದ ಬೃಹತ್ ಸೋಲು.
-ಪಾಕಿಸ್ಥಾನ ದ್ವಿತೀಯ ಪಂದ್ಯವನ್ನು ಚೇಸ್ ಮಾಡಿ ಗೆದ್ದಿತು.
-3ನೇ ಪಂದ್ಯ ಮಳೆಯಿಂದ ರದ್ದುಗೊಂಡಿತು. ಇತ್ತಂಡಗಳಿಗೆ ಅಂಕ ಹಂಚಲಾಯಿತು.
-1992ರ 4ನೇ ಪಂದ್ಯವನ್ನು 43 ರನ್ನುಗಳಿಂದ ಕಳೆದುಕೊಂಡಿತು. ಈ ಬಾರಿಯ ಅಂತರ 42 ರನ್.
-5ನೇ ಪಂದ್ಯದಲ್ಲಿ ಎರಡೂ ಸಲ ಪರಿಷ್ಕೃತ ಗುರಿ ಲಭಿಸಿತು. ಎರಡರಲ್ಲೂ ಸೋತಿತು. ಅಂತರ 20 ರನ್ ಮತ್ತು 89 ರನ್.
-6ನೇ ಪಂದ್ಯಗಳ ಫಲಿತಾಂಶ ಬಹುತೇಕ ಸಮನಾಗಿತ್ತು. ಪಾಕಿಸ್ಥಾನದ ಗೆಲುವಿನ ಅಂತರ 48 ರನ್ ಹಾಗೂ 49 ರನ್. ಅಂದು ಆಸೀಸ್ ವಿರುದ್ಧ ಅಮಿರ್ ಸೊಹೈಲ್ ಪಂದ್ಯಶ್ರೇಷ್ಠರಾದರೆ, ಈ ಬಾರಿ ಆಫ್ರಿಕಾ ವಿರುದ್ಧ ಈ ಗೌರವ ಹ್ಯಾರಿಸ್ ಸೊಹೈಲ್ ಪಾಲಾಯಿತು.
-ಎರಡೂ ಕೂಟಗಳ 7ನೇ ಪಂದ್ಯವನ್ನು 5 ಎಸೆತ ಬಾಕಿ ಇರುವಾಗ ಜಯಿಸಿತು. ಎದುರಾಳಿ ನ್ಯೂಜಿಲ್ಯಾಂಡ್ ಅಲ್ಲಿಯ ತನಕ ಅಜೇಯವಾಗಿತ್ತು. ಈ ಎರಡೂ ಪಂದ್ಯಗಳು ಬುಧವಾರವೇ ನಡೆದಿದ್ದವು.
-ಇವೆರಡೂ ರೌಂಡ್ ರಾಬಿನ್ ಮುಖಾ ಮುಖೀಯಾಗಿ ದ್ದವು.
1992
1992ರಲ್ಲಿ ಪಾಕಿಸ್ಥಾನದ ಮೊದಲ 7 ಪಂದ್ಯಗಳ ಫಲಿತಾಂಶ ಹೀಗಿದೆ:
ಸೋಲು (ವೆಸ್ಟ್ ಇಂಡೀಸ್), ಗೆಲುವು (ಜಿಂಬಾಬ್ವೆ), ರದ್ದು (ಇಂಗ್ಲೆಂಡ್), ಸೋಲು (ಭಾರತ), ಸೋಲು (ದಕ್ಷಿಣ ಆಫ್ರಿಕಾ), ಗೆಲುವು (ಆಸ್ಟ್ರೇಲಿಯ), ಗೆಲುವು (ಶ್ರೀಲಂಕಾ).
2019
2019ರಲ್ಲೂ ಪಾಕಿಸ್ಥಾನದ ಮೊದಲ 7 ಫಲಿತಾಂಶವೂ ಹೀಗೇ ಇದೆ: ಸೋಲು (ವೆಸ್ಟ್ ಇಂಡೀಸ್), ಗೆಲುವು (ಇಂಗ್ಲೆಂಡ್), ರದ್ದು (ಶ್ರೀಲಂಕಾ), ಸೋಲು (ಆಸ್ಟ್ರೇಲಿಯ), ಸೋಲು (ಭಾರತ), ಗೆಲುವು (ದಕ್ಷಿಣ ಆಫ್ರಿಕಾ), ಗೆಲುವು (ನ್ಯೂಜಿಲ್ಯಾಂಡ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.