ಆಗದು, ಹೋಗದು; ಪಾಕ್‌ ಮುಂದೆ ಸಾಗದು


Team Udayavani, Jul 5, 2019, 5:59 AM IST

pak2

ಲಂಡನ್‌: ಕ್ರಿಕೆಟ್‌ನಲ್ಲಿ “ಗಣಿತದ ಲೆಕ್ಕಾಚಾರ’ ಹೇಗೆಲ್ಲ ಪ್ರಾಮುಖ್ಯ ಪಡೆಯುತ್ತದೆ ಎಂಬುದಕ್ಕೆ ಶುಕ್ರವಾರ ಲಾರ್ಡ್ಸ್‌ನಲ್ಲಿ ನಡೆಯಲಿರುವ ಪಾಕಿಸ್ಥಾನ-ಬಾಂಗ್ಲಾದೇಶ ನಡುವಿನ ಪಂದ್ಯ ಅತ್ಯುತ್ತಮ ನಿದರ್ಶನ ಒದಗಿಸಲಿದೆ. ರನ್‌ರೇಟ್‌ನಲ್ಲಿ ನ್ಯೂಜಿಲ್ಯಾಂಡನ್ನು ಮೀರಿಸಿ ಸೆಮಿಫೈನಲ್‌ ಪ್ರವೇಶಿಸಬೇಕಾದರೆ ಪಾಕ್‌ ಮುಂದೆ ಅದೆಂಥ ಕಠಿನ ಹಾದಿ ಇದೆ ಎಂಬುದು ಬಹುಶಃ ಕ್ರಿಕೆಟ್‌ ಇತಿಹಾಸದಲ್ಲೇ ಅತೀ ಹೆಚ್ಚು ಚರ್ಚೆಗೊಳಗಾದ ಸಂಗತಿ. ಆದರೆ ಇದರಿಂದ ಪಾಕಿಗೆ ಯಾವ ರೀತಿಯಲ್ಲೂ ಲಾಭವಾಗದು ಎಂಬುದು ಮಾತ್ರ ವಿಪರ್ಯಾಸ!

ಪಾಕಿಸ್ಥಾನ ಈ ಪಂದ್ಯ ಗೆದ್ದರೆ ಅದರ ಅಂಕ ನ್ಯೂಜಿಲ್ಯಾಂಡಿನೊಂದಿಗೆ ಸಮನಾಗುತ್ತದೆ (11). ಆಗ ರನ್‌ರೇಟ್‌ನಲ್ಲಿ ಮುಂದಿರುವ ಕಿವೀಸ್‌ ಪಡೆ ಸೆಮಿಫೈನಲ್‌ ತಲುಪುತ್ತದೆ, ಪಾಕ್‌ ಹೊರಬೀಳುತ್ತದೆ. ಯಾವ ರೀತಿಯಲ್ಲಿ ನೋಡಿದರೂ ನ್ಯೂಜಿಲ್ಯಾಂಡಿನ ರನ್‌ರೇಟ್‌ ಮೀರಿಸಿ ಗೆಲ್ಲುವುದು ಪಾಕಿಗೆ ಸಾಧ್ಯವಿಲ್ಲ. ಹೀಗಾಗಿ ಈಗಾಗಲೇ ನ್ಯೂಜಿಲ್ಯಾಂಡ್‌ 4ನೇ ಸ್ಥಾನ ಗಟ್ಟಿಪಡಿಸಿದೆ, ಸಫ‌ìರಾಜ್‌ ಪಡೆ ಕೂಟದಿಂದ ಹೊರಬಿದ್ದಾಗಿದೆ. ಇದಕ್ಕೆ ಅಧಿಕೃತ ಮುದ್ರೆ ಬೀಳುವುದೊಂದೇ ಬಾಕಿ.

ಬಾಂಗ್ಲಾ ಗೆದ್ದರೆ ಲೆಕ್ಕವೆಲ್ಲ ಠುಸ್‌!
ಇಲ್ಲಿ ಇನ್ನೊಂದು ಸಾಧ್ಯತೆ ಇದೆ. ಎಲ್ಲರೂ ಬರೀ ಪಾಕಿಸ್ಥಾನದ ಸೆಮಿಫೈನಲ್‌ ಕುರಿತೇ ಲೆಕ್ಕಾಚಾರ ನಡೆಸುತ್ತಿರುವ ಈ ಹೊತ್ತಿನಲ್ಲಿ ಅಮೋಘ ಪ್ರದರ್ಶನ ಕಾಯ್ದುಕೊಂಡ ಬಾಂಗ್ಲಾದೇಶ ಲಾರ್ಡ್ಸ್‌ನಲ್ಲಿ ಜಯಭೇರಿ ಮೊಳಗಿಸಬಾರದೇಕೆ ಎಂಬ ಬಗ್ಗೆ ಯಾರೂ ಯೋಚಿಸಿದಂತಿಲ್ಲ. ಆಗ ಈವರೆಗಿನ ಎಲ್ಲ ಲೆಕ್ಕಾಚಾರ ಠುಸ್‌ ಆಗುತ್ತದೆ!

ಬುಧವಾರ ಆತಿಥೇಯ ಇಂಗ್ಲೆಂಡಿಗೆ ಮಣಿದರೂ ನ್ಯೂಜಿಲ್ಯಾಂಡಿನ 4ನೇ ಸ್ಥಾನಕ್ಕೇನೂ ಧಕ್ಕೆ ಆಗಿಲ್ಲ. ಅದು +0.175ರ ರನ್‌ರೇಟ್‌ ಹೊಂದಿದೆ. ಪಾಕಿಸ್ಥಾನದ ರನ್‌ರೇಟ್‌ ಮೈನಸ್‌ನಲ್ಲಿದೆ (-0.792). ಇದನ್ನು ಮೀರಬೇಕಾದರೆ ಪಾಕ್‌ ಮೊದಲು ಬ್ಯಾಟಿಂಗ್‌ ನಡೆಸಿ ಮುನ್ನೂರಕ್ಕೂ ಹೆಚ್ಚು ರನ್‌ ಅಂತರದಿಂದ ಗೆಲ್ಲಬೇಕು. ಅಕಸ್ಮಾತ್‌ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್‌ ನಡೆಸಲು ಮುಂದಾದರೆ ಪಾಕಿಸ್ಥಾನಕ್ಕೆ ಯಾವ ಅವಕಾಶವೂ ಲ್ಲವಾಗುತ್ತದೆ.

ಭಾರತದ ಪಾತ್ರ
ಈ ಎರಡೂ ತಂಡಗಳ ಅಳಿವು ಉಳಿವಿನಲ್ಲಿ ಭಾರತದ ಪಾತ್ರ ಇದ್ದುದನ್ನು ಮರೆಯುವಂತಿಲ್ಲ. ಇಂಗ್ಲೆಂಡ್‌ ಎದುರು ಭಾರತ ಅನುಭವಿಸಿದ ಸೋಲು ಪಾಕಿಸ್ಥಾನವನ್ನು ಸಂಕಟಕ್ಕೆ ತಳ್ಳಿತು. ಹಾಗೆಯೇ ಭಾರತದೆದುರಿನ ಪಂದ್ಯ ರದ್ದಾದ್ದರಿಂದ ನ್ಯೂಜಿಲ್ಯಾಂಡಿಗೆ ಒಂದಂಕ ಲಭಿಸಿತು. ಈ ಒಂದು ಅಂಕದ ಬಲದಿಂದಲೇ ವಿಲಿಯಮ್ಸನ್‌ ಪಡೆಯ ಸೆಮಿಫೈನಲ್‌ ಹಾದಿ ತೆರೆಯಿತು. ಅಕಸ್ಮಾತ್‌ ಈ ಪಂದ್ಯ ನಡೆದು ಕಿವೀಸ್‌ ಸೋತಿದ್ದರೆ ಆಗ ಪಾಕಿಗೆ ನಾಕೌಟ್‌ ಅವಕಾಶ ಹೆಚ್ಚಿರುತ್ತಿತ್ತು.

ಪಾಕಿಸ್ಥಾನದ ಸೆಮಿಫೈನಲ್‌ ಲೆಕ್ಕಾಚಾರ
ಪಾಕಿಸ್ಥಾನ ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸುವುದು ಪವಾಡ ಸಂಭವಿಸಿದರೂ ಸಾಧ್ಯವಾಗದು ಎಂಬುದಕ್ಕೆ ಈ ಲೆಕ್ಕಾಚಾರವೇ ಸಾಕ್ಷಿ. ರನ್‌ರೇಟ್‌ನಲ್ಲಿ ಅದು ನ್ಯೂಜಿಲ್ಯಾಂಡನ್ನು ಮೀರಿಸಬೇಕಾದರೆ ಮೊದಲು ಬ್ಯಾಟಿಂಗ್‌ ನಡೆಸಬೇಕು, ಕನಿಷ್ಠ 308 ರನ್‌ ಪೇರಿಸಬೇಕು. ಆಗ ಒಂದೂ ರನ್‌ ನೀಡದಂತೆ ಬಾಂಗ್ಲಾದೇಶವನ್ನು ತಡೆಯಬೇಕು!

ಇದೇ ರೀತಿ ಈ ಲೆಕ್ಕಾಚಾರ ಮುಂದು ವರಿಯುತ್ತದೆ. ಪಾಕ್‌ 350 ರನ್‌ ಮಾಡಿದರೆ ಬಾಂಗ್ಲಾದ ಮೊತ್ತ 38ರ ಗಡಿ ದಾಟುವಂತಿಲ್ಲ. ಅಕಸ್ಮಾತ್‌ ಪಾಕ್‌ 500 ರನ್‌ ಬಾರಿಸಿತು ಎಂದಿಟ್ಟುಕೊಳ್ಳೋಣ, ಆಗ ಬಾಂಗ್ಲಾ ಮೊತ್ತವನ್ನು 175ಕ್ಕೆ ಹಿಡಿದು ನಿಲ್ಲಿಸಬೇಕು.

ಮೊದಲು ಬೌಲಿಂಗ್‌ ಲಭಿಸಿದರೆ?
ಇವೆಲ್ಲ ಪಾಕಿಸ್ಥಾನ ಮೊದಲು ಬ್ಯಾಟಿಂಗ್‌ ಮಾಡಿದರೆ ನಡೆಸಲಾದ ರನ್‌ರೇಟ್‌ ಲೆಕ್ಕಾಚಾರ. ಒಂದು ವೇಳೆ ಪಾಕಿಸ್ಥಾನಕ್ಕೆ ಚೇಸಿಂಗ್‌ ನಡೆಸುವ ಅವಕಾಶ ಲಭಿಸಿದರೆ? ಯಾವ ಕಾರಣಕ್ಕೂ ಪಾಕ್‌ ರನ್‌ರೇಟ್‌ ನ್ಯೂಜಿಲ್ಯಾಂಡನ್ನು ಮೀರದು.

ಈ ಉದಾಹರಣೆ ಗಮನಿಸಿ…
ಪಾಕಿಸ್ಥಾನ ಮೊದಲು ಬೌಲಿಂಗ್‌ ನಡೆಸಿದರೆ ಬಾಂಗ್ಲಾ ದೇಶವನ್ನು ಸೊನ್ನೆಗೇ ಆಲೌಟ್‌ ಮಾಡಿತು ಎಂದಿಟ್ಟುಕೊಳ್ಳೋಣ. ಗೆಲುವಿನ ಆ ಒಂದು ರನ್‌ ವೈಡ್‌ ಅಥವಾ ನೋಬಾಲ್‌ ಮೂಲಕ ಬಂದರೂ ಪಾಕ್‌ ನಿಗದಿತ ರನ್‌ರೇಟ್‌ಗಿಂತ 0.05ರಷ್ಟು ಹಿಂದೆಯೇ ಉಳಿಯುತ್ತದೆ! ಅಕಸ್ಮಾತ್‌ ಬಾಂಗ್ಲಾದೇಶ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸುವ ನಿರ್ಧಾರಕ್ಕೆ ಬಂದರೆ ಮುಗಿಯಿತು… ಆ ಕ್ಷಣದಲ್ಲೇ ಪಾಕಿಸ್ಥಾನ ಅಧಿಕೃತವಾಗಿ ಕೂಟದಿಂದ ಹೊರ ಬೀಳುತ್ತದೆ!

ಹೀಗೊಂದು ಸ್ಕೋರ್‌ ಲೆಕ್ಕಾಚಾರ
ಪಾಕಿಸ್ಥಾನ ಮೊದಲು ಬ್ಯಾಟಿಂಗ್‌ ನಡೆಸಿದರೆ ಎಷ್ಟು ರನ್‌ ಗಳಿಸಬೇಕು, ಬಾಂಗ್ಲಾದೇಶವನ್ನು ಎಷ್ಟು ರನ್ನಿಗೆ ತಡೆದು ನಿಲ್ಲಿಸಬೇಕು ಎಂಬ ಯಾದಿ ಇಲ್ಲಿದೆ.

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.