ಹೋರಾಟ ನೀಡದ ಪಾಕ್: ಮಾಜಿಗಳ ಆಕ್ರೋಶ
Team Udayavani, Jun 18, 2019, 5:52 AM IST
ಕರಾಚಿ: ತನ್ನ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಸ್ವಲ್ಪವೂ ಹೋರಾಟ ನೀಡದೇ ಶರಣಾದ ಪಾಕಿಸ್ಥಾನದ ಆಟವನ್ನು ವಾಸಿಮ್ ಅಕ್ರಮ್ ಸಹಿತ ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಾಯಕ ಸಫìರಾಜ್ ಅಹ್ಮದ್ ಅವರ ನಿರ್ಧಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ತಂಡದ ಆಯ್ಕೆ ಸರಿಯಾಗಿಲ್ಲ
“ನನ್ನ ಪ್ರಕಾರ ತಂಡದ ಆಯ್ಕೆ ಸರಿಯಾಗಿಲ್ಲ. ವಿಶ್ವಕಪ್‌ನಂತಹ ಕೂಟದಲ್ಲಿ ಭಾಗವಹಿಸುವಾಗ ಪಾಕಿಸ್ಥಾನ ತಂಡ ಯಾವುದೇ ಯೋಜನೆ ರೂಪಿಸಿರುವುದು ನನಗೆ ಕಾಣುತ್ತಿಲ್ಲ’ ಎಂದು ವಾಸಿಮ್ ಅಕ್ರಮ್ ಹೇಳಿದ್ದಾರೆ.
“ಗೆಲುವು ಅಥವಾ ಸೋಲು ಆಟದ ಅವಿಭಾಜ್ಯ ಅಂಗ. ಆದರೆ ಈ ರೀತಿಯ ಸೋಲು ಅಲ್ಲ. ನಾವು ಯಾವುದೇ ಹೋರಾಟ ನೀಡದೇ ಶರಣಾಗಿದ್ದೇವೆ’ ಎಂದವರು ಬೇಸರಿಸಿದರು.
ಬಹಳಷ್ಟು ಟೀಕೆಗೆ ಒಳಗಾದ ಸಫìರಾಜ್ ಮಾತ್ರ ಮೊದಲು ಫೀಲ್ಡಿಂಗ್ ನಡೆಸುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಹೆಚ್ಚಿನೆಲ್ಲ ಮಾಜಿ ಕ್ರಿಕೆಟಿಗರು ಸಫìರಾಜ್ ಅವರದ್ದು ಕಳಪೆ ನಿರ್ಧಾರ ಎಂದಿದ್ದಾರೆ.
ವೇತನ ಕಡಿತ ಮಾಡಿ !
ಪಾಕಿಸ್ಥಾನ ಆಟಗಾರರು ಒಂದು ವೇಳೆ ನಿರೀಕ್ಷಿತ ನಿರ್ವಹಣೆ ನೀಡದಿದ್ದಲ್ಲಿ ಆಟಗಾರರ ಕೇಂದ್ರೀಯ ಗುತ್ತಿಗೆ ಮತ್ತು ಪಂದ್ಯ ಮೊತ್ತದ ಹಣದಲ್ಲಿ ಕಡಿತ ಮಾಡುವ ನಿಯಮವನ್ನು ಜಾರಿಗೊಳಿಸುವಂತೆ ಮಾಜಿ ವೇಗಿ ಸಿಕಂದರ್ ಭಕ್¤ ಪಾಕಿಸ್ಥಾನ ಕ್ರಿಕೆಟ್ ಮಂಡಳಿಗೆ ಸಲಹೆ ಮಾಡಿದ್ದಾರೆ.
“ಒತ್ತಡದಲ್ಲಿ ಉತ್ತಮ ನಿರ್ವಹಣೆ ನೀಡುವ ಎಚ್ಚರಿಕೆ ಆಟಗಾರರಲ್ಲಿ ಇರಬೇಕು ಮತ್ತು ಹೆಚ್ಚು ಜವಾಬ್ದಾರಿಯಿಂದ ಆಡುವಂತಾಗಲು ಆಟಗಾರರಿಗೆ ನಿರ್ವಹಣೆ ಆಧಾರದಲ್ಲಿ ವೇತನ ಪಾವತಿ ಮಾಡುವುದು ಇದಕ್ಕೆ ಪರಿಹಾರವಾಗಬಹುದು’ ಎಂದು ಭಕ್¤ ಅಭಿಪ್ರಾಯಪಟ್ಟರು.
ಆಡದಿದ್ದರೆ ವಜಾಗೊಳಿಸಿ
ವಿಶ್ವಕಪ್‌ನಂತಹ ಕೂಟದಲ್ಲಿ ಆಡುವ ವೇಳೆ ತಂಡ ರೂಪಿಸಿದ ಯೋಜನೆಯನ್ನು ಆಟಗಾರರಿಗೆ ತಿಳಿಸುವುದು ನಾಯಕ ಮತ್ತು ಕೋಚ್ ಅವರ ಕರ್ತವ್ಯವಾಗಿದೆ. ಒಂದು ವೇಳೆ ಆಟಗಾರರು ತಮ್ಮ ಕರ್ತವ್ಯ ನಿಭಾಯಿಸದಿದ್ದರೆ ಅವರನ್ನು ವಜಾಗೊಳಿಸಿ ಎಂದು ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಕ್ ಸಲಹೆ ನೀಡಿದ್ದಾರೆ.
ಪಾಕಿಸ್ಥಾನದ ಕಳಪೆ ನಿರ್ವಹಣೆಯನ್ನು ಟೀಕಿಸಿದ ಮಾಜಿ ನಾಯಕ ಮೊಹಮ್ಮದ್ ಯೂಸುಫ್, ಆಟಗಾರರ ಮನಃಸ್ಥಿತಿ ಸಕಾರಾತ್ಮಕವಾಗಿರಲಿಲ್ಲ. ಗೆಲ್ಲಬೇಕೆಂಬ ಛಲದಿಂದ ಆಡಿದಂತೆ ಕಂಡುಬಂದಿಲ್ಲ ಎಂದಿದ್ದಾರೆ.
ಗೆಲ್ಲುವ ಛಲ ಇರಬೇಕು
“ಭಾರತೀಯ ತಂಡ ಎಷ್ಟೇ ಬಲಿಷ್ಠವಾಗಿರಬಹುದು. ಆದರೆ ನಮ್ಮಲ್ಲೂ ಪಂದ್ಯವನ್ನು ಗೆಲ್ಲುವ ಛಲ ಇರಬೇಕು. ಅಂತಹ ಉತ್ಸಾಹ, ನಂಬಿಕೆಯೊಂದಿಗೆ ಆಡಿದರೆ ಗೆಲ್ಲುವ ಸಾಧ್ಯತೆ ಇದೆ’ ಎಂದು ಮಾಜಿ ಆರಂಭಿಕ ಮೊಹ್ಸಿನ್ ಖಾನ್ ಹೇಳಿದ್ದಾರೆ.
ಹುಡುಗರು ನಿಜಕ್ಕೂ ಚೆನ್ನಾಗಿ ಆಡಿದರು. ನೋಡುವಾಗ ಇದು ಸುಲಭ ಅನಿಸುತ್ತಿತ್ತು…
-ವೀರೇಂದ್ರ ಸೆಹವಾಗ್
ಅರ್ಹ ಗೆಲುವಿಗೆ ಅಭಿನಂದನೆಗಳು. ಇದಕ್ಕೆಲ್ಲ ಐಪಿಎಲ್ ಕಾರಣ. ಇದು ಪ್ರತಿಭೆಗಳನ್ನು ಪತ್ತೆಹಚ್ಚುವ ಜತೆಗೆ ಒತ್ತಡ ನಿಭಾಯಿಸುವುದನ್ನೂ ಕಲಿಸಿ ಕೊಟ್ಟಿದೆ.
-ಶಾಹಿದ್ ಅಫ್ರಿದಿ
ದೇಶ ವಿಭಜನೆಯಾಗದೇ ಇರುತ್ತಿದ್ದರೆ ಪದೇ ಪದೇ ನಾವು ಅವಮಾನಿತರಾಗುತ್ತಿರಲಿಲ್ಲ.
– ಅಲೀನಾ
ಭಾರತ ಇಬ್ಬರು ನಾಯಕರೊಂದಿಗೆ ಆಡುತ್ತಿತ್ತು. ಆದರೆ ನಮ್ಮಲ್ಲಿದ್ದುದು ಅರ್ಧ ನಾಯಕ ಮಾತ್ರ.
ಆರ್ಟ್‌ವರ್ಲ್ಡ್
500 ರನ್. ಭಾರತದ 350 ಮತ್ತು ನಮ್ಮದು 150.
– ರಾಂಟಿಂಗ್ ಪಾಕಿಸ್ಥಾನಿ
ನನ್ನನ್ನು ದೇಶದ್ರೋಹಿ ಎಂದು ಕರೆಯಬೇಡಿ. ಭಾರತದ ಆಟಗಾರರನ್ನು ನೋಡಿ, ಅವರು ಪರಿಪೂರ್ಣ ಆಟಗಾರರಂತೆ ಕಾಣಿಸುತ್ತಾರೆ. ನಮ್ಮವರನ್ನು ನೋಡಿ, ಫಿಕೆ ಕಿ ಲಸ್ಸಿ ಮತ್ತು ಬೆನಜೀರ್ ಕುಲ್ಫಾದ ಜತೆಗೆ ಎರಡು ಪ್ಲೇಟ್ ವಾರಿಸ್ ನಿಹಾರಿಯನ್ನು ತಿಂದು ಬಂದವರಂತೆ ಕಾಣಿಸುತ್ತಿದ್ದಾರೆ.
-ಶಾಬಾಜ್ ಖಾನ್
ಡಾಲರ್ ದರ ಮತ್ತು ಭಾರತದ ರನ್ ನಿಯಂತ್ರಿಸುವುದು ನಮ್ಮ ಕೈಲಾಗುವ ಕೆಲಸವಲ್ಲ.
– ಶಿರಾಜ್ ಹಸನ್
ಭಾರತ ಯಾವ ರೀತಿ ಹೊಡೆಯುತ್ತಿದೆ ಎಂದರೆ, ನಾವು ಸಾಲ ಐಎಂಎಫ್ನಿಂದಲ್ಲ, ಅವರಿಂದ ಕೇಳಿದಂತೆ!
– ಆದಿಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.