ಪಂತ್‌ ಇಂಗ್ಲೆಂಡ್‌ ಪಯಣ

ಧವನ್‌ ಗಾಯಾಳಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ

Team Udayavani, Jun 13, 2019, 5:46 AM IST

Rishabh-Pant

ಹೊಸದಿಲ್ಲಿ: ಯುವ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಇಂಗ್ಲೆಂಡಿಗೆ ಪಯ ಣಿಸಲಿದ್ದಾರೆ. ಆರಂಭಕಾರ ಶಿಖರ್‌ ಧವನ್‌ ಗಾಯಾಳಾದ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಪಂತ್‌ ಟೀಮ್‌ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಆದರೆ ಅವರು ಬದಲಿ ಆಟಗಾರನಾಗಿರುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

“ತಂಡದ ಆಡಳಿತ ಮಂಡಳಿಯ ಕೋರಿಕೆಯಂತೆ ಮುಂಜಾಗ್ರತಾ ಕ್ರಮವಾಗಿ ಪಂತ್‌ ಅವರನ್ನು ಇಂಗ್ಲೆಂಡಿಗೆ ಕಳುಹಿಸಿಕೊಡಲಾಗುವುದು. ಆದರೆ ಅವರು ಬದಲಿ ಆಟಗಾರನಾಗಿರುವುದಿಲ್ಲ’ ಎಂದು ಬಿಸಿಸಿಐ ಅಧಿಕಾರಿ ಯೊಬ್ಬರು ಹೇಳಿದ್ದಾರೆ.

ಐಸಿಸಿ ನಿಯಮ ಅಡ್ಡಿ
ಶಿಖರ್‌ ಧವನ್‌ ಅವರ ಚೇತರಿಕೆಯನ್ನು ಗಮನಿಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುವುದು ಬಿಸಿಸಿಐ ಯೋಜನೆ ಯಾಗಿದೆ. ಧವನ್‌ ಬೇಗನೇ ಗುಣಮುಖರಾಗುವುದಾದರೆ ಬದಲಿ ಆಟಗಾರನ ಅಗತ್ಯ ಕಂಡುಬಾರದು ಎಂಬುದು ಮಂಡಳಿ ಲೆಕ್ಕಾಚಾರ. ಒಂದು ವೇಳೆ ಪಂತ್‌ ಅಧಿಕೃತ “ಬದಲಿ ಕ್ರಿಕೆಟಿಗ’ನಾದರೆ, ಮುಂದೆ ಧವನ್‌ ಚೇತರಿಸಿಕೊಂಡರೂ ಐಸಿಸಿ ನಿಯಮದಂತೆ ವಿಶ್ವಕಪ್‌ ತಂಡವನ್ನು ಸೇರಿಕೊಳ್ಳಲಾರರು.

ಐಸಿಸಿಯ ಇನ್ನೊಂದು ನಿಯಮದ ಪ್ರಕಾರ ತಂಡದ ಆಟಗಾರರ ಸಂಖ್ಯೆ 15ರ ಗಡಿ ಮೀರುವಂತಿಲ್ಲ. 2015ರ ವಿಶ್ವಕಪ್‌ನಲ್ಲಿ ಧವಳ್‌ ಕುಲಕರ್ಣಿ ಅವರನ್ನು ಹೆಚ್ಚುವರಿ 16ನೇ ಸದಸ್ಯನಾಗಿ ಇರಿಸಿಕೊಂಡ ತಪ್ಪಿಗೆ ಬಿಸಿಸಿಐ 2.4 ಕೋಟಿ ರೂ. ದಂಡ ತೆರುವಂತಾಗಿತ್ತು. ಇಂಥ ತಪ್ಪು ಈ ಸಲ ಮರುಕಳಿಸಬಾರದೆಂಬ ಕಾರಣಕ್ಕೆ ಪಂತ್‌ ವಿಚಾರದಲ್ಲಿ ಬಿಸಿಸಿಐ ಮುನ್ನೆಚ್ಚರಿಕೆ ವಹಿಸಿದೆ.

21ರ ಹರೆಯದ ರಿಷಭ್‌ ಪಂತ್‌ ಕಳೆದ ಐಪಿಎಲ್‌ನಲ್ಲಿ ಕೆಲವು ಸ್ಫೋಟಕ ಇನ್ನಿಂಗ್ಸ್‌ ಆಡಿದ್ದರು.

ಡ್ರೆಸ್ಸಿಂಗ್‌ ರೂಮ್‌ ನಿಷೇಧ
ರಿಷಭ್‌ ಪಂತ್‌ ಪಾಕಿಸ್ಥಾನದೆ ದುರಿನ ರವಿವಾರದ ಪಂದ್ಯಕ್ಕೂ ಮುನ್ನ ಮ್ಯಾಂಚೆಸ್ಟರ್‌ಗೆ ಬರಲಿದ್ದಾರೆ. ಜತೆಗೆ ನೆಟ್‌ ಬೌಲರ್‌ ಖಲೀಲ್‌ ಅಹ್ಮದ್‌ ಕೂಡ ಇರಲಿದ್ದಾರೆ. ಪಂತ್‌ ತಂಡದ ಸದಸ್ಯನಲ್ಲದ ಕಾರಣ ಪಂದ್ಯದ ದಿನಗಳಂದು ಡ್ರೆಸ್ಸಿಂಗ್‌ ರೂಮ್‌ ಪ್ರವೇಶಿಸುವಂತಿಲ್ಲ. ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದ ನಿಯಮದಂತೆ ನಿರ್ದಿಷ್ಟ ಕ್ರಿಕೆಟಿ ಗರಷ್ಟೇ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಉಳಿಯಬಹುದು ಹಾಗೂ ತಂಡದ ಬಸ್ಸಿನಲ್ಲಿ ಪ್ರಯಾಣಿಸಬಹುದು.

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.