![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 4, 2019, 6:04 AM IST
ಲಂಡನ್: ಬಾಂಗ್ಲಾದೇಶ-ದಕ್ಷಿಣ ಆಫ್ರಿಕಾ ಪಂದ್ಯದ ವೇಳೆಛಾಯಾಚಿತ್ರಗ್ರಾಹಕರೊಬ್ಬರು ಒಂದು ಕೈಯಲ್ಲಿ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ನಾಯಕ ಫಾ ಡು ಪ್ಲೆಸಿಸ್ ಭರ್ಜರಿಯಾಗಿ ಸಿಕ್ಸರ್ ಸಿಡಿಸಿ ಅರ್ಧ ಶತಕ ಪೂರೈಸಿದರು.
ಈ ಸಿಕ್ಸರ್ ಚೆಂಡು ನೇರವಾಗಿ ಮೈದಾನದ ಪೆವಿಲಿಯನ್ ಎಂಡ್ ಕಡೆ ಸಾಗಿತು. ಅಲ್ಲಿಯೇ ಛಾಯಾಚಿತ್ರ ತೆಗೆಯುತ್ತಿದ್ದ ಇಯಾನ್ ಕಿಂಗ್‌ಟನ್ ಒಂದೇ ಕೈಯಲ್ಲಿ ಅದ್ಭುತ ರೀತಿಯಲ್ಲಿ ಚೆಂಡನ್ನು ಹಿಡಿದರು. ಅಲ್ಲಿದ್ದ ಪ್ರೇಕ್ಷಕರೆಲ್ಲರೂ ಅವರಿಗೆ ಮೆಚ್ಚುಗೆ ಸೂಚಿಸಿದರು. ಕಿಂಗ್‌ಸ್ಟನ್ ಅವರ ಪ್ರಯತ್ನವನ್ನು ” ಪ್ಲೇ ಆಫ್ ದ ಡೇ’ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮತ್ತು ಬಿಬಿಸಿ ಬಣ್ಣಿಸಿದೆ.
ಕಿಂಗ್‌ಟನ್ ಅವರು ಪ್ಲೆಸಿಸ್ ಸಿಕ್ಸರ್ ಹೊಡೆತದ ಪ್ರಯತ್ನವನ್ನು ತನ್ನ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ್ದರು. ತತ್‌ಕ್ಷಣವೇ ಆ ಚೆಂಡು ತನ್ನ ಕಡೆ ಬರುತ್ತಿದ್ದುದನ್ನು ಗಮನಿಸಿದ ಅವರು ಉದ್ದ ಲೆನ್ಸ್‌ನ ಕ್ಯಾಮರಾವನ್ನು ಎಡಗೈಯಲ್ಲಿ ಹಿಡಿದು ಬಲಗೈಯಲ್ಲಿ ಚೆಂಡನ್ನು ಪಡೆದರು. ಬಳಿಕ ಕ್ಯಾಚ್ ಪಡೆದ ಸಾಹಸವನ್ನು ಪ್ರೇಕ್ಷಕರತ್ತ ತೋರಿಸುತ್ತ ಸಂಭ್ರಮಿಸಿದರು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.