ಒಂದು ಪಂದ್ಯ ಹಲವು ದಾಖಲೆ: ರೋಹಿತ್ ಗಿದು ಸುವರ್ಣಾವಕಾಶ
Team Udayavani, Jul 6, 2019, 12:24 PM IST
ಲೀಡ್ಸ್ : ಪ್ರಸಕ್ತ ವಿಶ್ವಕಪ್‌ನಲ್ಲಿ ಪ್ರಚಂಡ ಫಾರ್ಮ್ ನಲ್ಲಿರುವ ರೋಹಿತ್ ಶರ್ಮ ಈಗಾಗಲೇ 4 ಶತಕ ಬಾರಿಸಿ ಎದುರಾಳಿಗಳಿಗೆ ಸಿಂಹ ಸ್ವಪ್ನರಾಗಿದ್ದಾರೆ. 96.96ರ ಸರಾಸರಿಯಲ್ಲಿ 544 ರನ್ ಪೇರಿಸಿದ್ದು ಇವರ ಸಾಧನೆ. ಈ ಕೂಟದಲ್ಲಿ ಗರಿಷ್ಠ 3 ಪಂದ್ಯಗಳನ್ನು ಆಡುವ ಅವಕಾಶ ಹೊಂದಿರುವ ಅವರ ಮುಂದೆ ಇನ್ನಷ್ಟು ದಾಖಲೆಗಳು ಕಾದು ಕುಳಿತಿವೆ.
ಅತ್ಯಧಿಕ 5 ಶತಕ
ಇನ್ನೊಮ್ಮೆ ಮೂರಂಕೆಯ ಗಡಿ ದಾಟಿದರೆ ವಿಶ್ವಕಪ್ ಕೂಟವೊಂದರಲ್ಲಿ ಅತೀ ಹೆಚ್ಚು 5 ಶತಕ ಬಾರಿಸಿದ ದಾಖಲೆ ರೋಹಿತ್ ಶರ್ಮ ಅವರದಾಗುತ್ತದೆ. ಕುಮಾರ ಸಂಗಕ್ಕರ ಕೂಡ 4 ಶತಕ ಬಾರಿಸಿದ್ದಾರೆ (2015). ತಮ್ಮ 3 ದ್ವಿಶತಕಗಳಲ್ಲಿ ಎರಡನ್ನು ಶ್ರೀಲಂಕಾ ವಿರುದ್ಧವೇ ಸಿಡಿಸಿರುವ ರೋಹಿತ್, ಶನಿವಾರ ಇಂಥದೇ ಕಮಾಲ್ ಮಾಡಿಯಾರೇ ಎಂಬ
ಕುತೂಹಲವೂ ಇದೆ.
ಕೂಟದಲ್ಲಿ ಗರಿಷ್ಠ ರನ್
ವಿಶ್ವಕಪ್ ಕೂಟವೊಂದರಲ್ಲಿ ಅತ್ಯಧಿಕ 673 ರನ್ ಬಾರಿಸಿದ ತೆಂಡುಲ್ಕರ್ ದಾಖಲೆಯನ್ನು ಮುರಿಯುವ ಅವಕಾಶವೂ ರೋಹಿತ್ ಮುಂದಿದೆ. ಇದಕ್ಕಾಗಿ ಅವರು 130 ರನ್ ಗಳಿಸಿದರೆ ಸಾಕು. ಸದ್ಯ ಈ ಯಾದಿಯಲ್ಲಿ ರೋಹಿತ್ 5ನೇ ಸ್ಥಾನದಲ್ಲಿದ್ದಾರೆ. ಇವರಿಗಿಂತ ಮುಂದಿರುವ ಉಳಿದ ಮೂವರೆಂದರೆ ಹೇಡನ್ (659), ಜಯವರ್ಧನೆ (548), ಗಪ್ಟಿಲ್ (547).
ವರ್ಲ್ಡ್ ಕಪ್ ಗ್ರೂಪ್/ಲೀಗ್ ಹಂತದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆಯೂ ರೋಹಿತ್‌ಗೆ ಒಲಿಯಬಹುದು. ಸದ್ಯ ಇದು ತೆಂಡುಲ್ಕರ್ ಹೆಸರಲ್ಲಿದೆ (586). ಲಂಕಾ ಎದುರು 43 ರನ್ ಮಾಡಿದರೆ ರೋಹಿತ್ ಈ ದಾಖಲೆಯ ಒಡೆಯನಾಗುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.