ಐನಾಕ್ಸ್ ದೈತ್ಯ ಪರದೆಗಳಲ್ಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿ
Team Udayavani, May 28, 2019, 6:00 AM IST
ಹೊಸದಿಲ್ಲಿ: ಈ ಬಾರಿಯದ್ದು “ಹ್ಯೂಜ್ ವರ್ಲ್ಡ್ಕಪ್ ಕ್ರಿಕೆಟ್’ ಎನಿಸಲಿದೆ. ಕಾರಣ, ಭಾರತದ ಲೀಗ್ ಪಂದ್ಯಗಳು ಐನಾಕ್ಸ್‌ನ ಬಿಗ್ ಸ್ಕ್ರೀನ್‌ಗಳಲ್ಲಿ ಮೂಡಿಬರಲಿವೆ. ಇದಕ್ಕೆ ಐಸಿಸಿ ಮತ್ತು ಭಾರತದ ಮಲ್ಟಿಪ್ಲೆಕ್ಸ್ ಜತೆ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿದೆ.
ಭಾರತದ ಜತೆಗೆ ಯುಎಇ ಮತ್ತು ಬಹ್ರೈನ್‌ನ ಮಲ್ಟಿಪ್ಲೆಕ್ಸ್ ಗಳಲ್ಲೂ ವಿಶ್ವಕಪ್ ಪಂದ್ಯಗಳು ಬಿತ್ತರಗೊಳ್ಳಲಿವೆ. ಭಾರತದ 9 ಲೀಗ್ ಪಂದ್ಯಗಳೂ ಸೇರಿದಂತೆ ಒಟ್ಟು 15 ವಿಶ್ವಕಪ್ ಪಂದ್ಯಗಳನ್ನು ಐನಾಕ್ಸ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಇದರಲ್ಲಿ ಸೆಮಿಫೈನಲ್ಸ್ ಮತ್ತು ಫೈನಲ್ ಕೂಡ ಸೇರಿದೆ. ಉಳಿದ 3 ಪಂದ್ಯಗಳು ಯಾವುವು ಎಂಬುದು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಇಲ್ಲಿ ಕೂಟದ ಹೈ ವೋಲ್ಟೆàಜ್ ಪಂದ್ಯಗಳಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ. ಭಾರತದ ಸುಮಾರು 12 ನಗರಗಳ “ಐನಾಕ್ಸ್ ಲೀಸರ್ ಮಲ್ಟಿಪ್ಲೆಕ್ಸ್ ಸಿನೆಮಾಸ್’ನಲ್ಲಿ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.
ಈ ಕೇಂದ್ರಗಳೆಂದರೆ ಹೊಸದಲ್ಲಿ, ನೋಯ್ಡಾ, ಫರೀದಾಬಾದ್, ಗುರುಗ್ರಾಮ್, ಮುಂಬಯಿ, ಬೆಂಗಳೂರು, ಪುಣೆ, ಕೋಲ್ಕತಾ, ಜೈಪುರ, ಇಂದೋರ್, ಸೂರತ್ ಮತ್ತು ವಡೋದರ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.