ಇದು ನಮ್ಮ ವಿಶ್ವಕಪ್‌: ಸ್ಟೋಕ್ಸ್‌ ವಿಶ್ವಾಸ


Team Udayavani, Jun 27, 2019, 5:14 AM IST

BEN

ಲಂಡನ್‌: “ಇದು ನಮ್ಮ ವಿಶ್ವಕಪ್‌. ಕಳೆದ 4 ವರ್ಷಗಳಿಂದ ನಮಗೆ ಎಲ್ಲ ಕಡೆಗಳಿಂದಲೂ ಅಮೋಘ ಬೆಂಬಲ. ಪ್ರೋತ್ಸಾಹ ಲಭಿಸುತ್ತಿದೆ. ಯಾವ ಕಾರಣಕ್ಕೂ ನಾವು ಹಿಂದಡಿ ಇಡಲಾರೆವು. ನಾವು ಹೇಗೆ ಎಣಿಸಿದ್ದೇವೋ ಅದೇ ರೀತಿ ಮುಂದೆ ಸಾಗಲಿದ್ದೇವೆ’ ಎಂದಿದ್ದಾರೆ ಇಂಗ್ಲೆಂಡ್‌ ಕ್ರಿಕೆಟಿಗ ಬೆನ್‌ ಸ್ಟೋಕ್ಸ್‌.


ಮಂಗಳವಾರ ಸಾಂಪ್ರದಾಯಿಕ ಎದುರಾಳಿ, ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಕ್ಕೆ ಶರಣಾದ ಬಳಿಕ ಸ್ಟೋಕ್ಸ್‌ ಈ ಪ್ರತಿಕ್ರಿಯೆ ನೀಡಿದ್ದಾರೆ. 64 ರನ್‌ ಜಯದೊಂದಿಗೆ ಆಸ್ಟ್ರೇಲಿಯ ಸೆಮಿಫೈನಲ್‌ ತಲುಪಿದರೆ, ಇಂಗ್ಲೆಂಡ್‌ ಮೇಲೀಗ ತೀವ್ರ ಒತ್ತಡ ಬಿದ್ದಿದೆ.

ಇದು ಇಂಗ್ಲೆಂಡಿಗೆ ಎದುರಾದ ಸತತ ಎರಡನೇ ಸೋಲು. ಇದಕ್ಕೂ ಹಿಂದಿನ ಪಂದ್ಯದಲ್ಲಿ ಅದು ಸಾಮಾನ್ಯ ತಂಡವೆನಿಸಿದ ಶ್ರೀಲಂಕಾಕ್ಕೆ ಶರಣಾಗಿತ್ತು. ಈ ಎರಡೂ ಪಂದ್ಯಗಳಲ್ಲಿ ಸ್ಟೋಕ್ಸ್‌ 82 ಹಾಗೂ 89 ರನ್‌ ಮಾಡುವ ಮೂಲಕ ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು.

“ನಿಜ, ಸೋಲಿನಿಂದ ನಿರಾಸೆಯಾಗಿದೆ. ಗೆಲುವಿಗಾಗಿ ಎಲ್ಲರೂ ಗರಿಷ್ಠ ಪ್ರಯತ್ನ ಮಾಡಿದ್ದಾರೆ. ನನ್ನ ಬ್ಯಾಟಿನಿಂದ ರನ್‌ ಬರುತ್ತಿದೆ ನಿಜ, ಆದರೆ ಇದು ಗೆಲುವಾಗಿ ಪರಿವರ್ತನೆ ಆಗುವುದು ಮುಖ್ಯ’ ಎಂದು ಸ್ಟೋಕ್ಸ್‌ ಹೇಳಿದರು.

“ನಮ್ಮ ಮುಂದೆ ಇನ್ನೆರಡು ಪಂದ್ಯಗಳಿವೆ. ಸಂಪೂರ್ಣ ಭಿನ್ನ ವಾತಾವರಣದಲ್ಲಿ ನಾವಿದನ್ನು ಆಡಬೇಕಿದೆ. ನಮ್ಮ ಯೋಜನೆಯಂತೆಯೇ ಇದನ್ನು ಆಡಲಿದ್ದೇವೆ. ಭಾರತದೆದುರು ನಾವು ಉತ್ತಮ ತವರಿನ ದಾಖಲೆ ಹೊಂದಿದ್ದೇವೆ. ಆದರೆ ಭಾರತ ಅಮೋಘ ಫಾರ್ಮ್ನಲ್ಲಿದೆ. ಅವರೆದುರು ಅತ್ಯುತ್ತಮ ಪ್ರದರ್ಶನ ನೀಡಬಲ್ಲೆವೆಂಬ ವಿಶ್ವಾಸ ನಮ್ಮದು’ ಎಂದರು ಸ್ಟೋಕ್ಸ್‌.

ಎಕ್ಸ್‌ಟ್ರಾ ಇನ್ನಿಂಗ್ಸ್‌
– ಇಂಗ್ಲೆಂಡ್‌ ವಿರುದ್ಧ ಸತತ 6 ಏಕದಿನ ಪಂದ್ಯಗಳ ಸೋಲಿನ ಸರಪಳಿಯನ್ನು ಆಸ್ಟ್ರೇಲಿಯ ಕಡಿದುಕೊಂಡಿತು.
– ಇಂಗ್ಲೆಂಡ್‌ ವಿರುದ್ಧ ಆಡಿದ ಸತತ 4 ವಿಶ್ವಕಪ್‌ ಪಂದ್ಯಗಳಲ್ಲಿ ಆಸ್ಟ್ರೇಲಿಯ ಜಯ ಸಾಧಿಸಿತು. ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಕೊನೆಯ ಸಲ ಆಸ್ಟ್ರೇಲಿಯವನ್ನು ಸೋಲಿಸಿದ್ದು 1992ರಲ್ಲಿ.
– ಆರನ್‌ ಫಿಂಚ್‌ ಇಂಗ್ಲೆಂಡ್‌ ವಿರುದ್ಧ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಮೊದಲ ನಾಯಕ. 2007ರಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್‌ ಸ್ಮಿತ್‌ ಅಜೇಯ 89 ರನ್‌ ಹೊಡೆದದ್ದು ಹಿಂದಿನ ಅತ್ಯುತ್ತಮ ಸಾಧನೆಯಾಗಿತ್ತು.
– ಆರನ್‌ ಫಿಂಚ್‌ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 2 ಶತಕ ಬಾರಿಸಿದ ಏಕೈಕ ಆಟಗಾರ. ಕಳೆದ ಸಲ ಮೆಲ್ಬರ್ನ್ ಮುಖಾಮುಖೀಯಲ್ಲಿ ಫಿಂಚ್‌ 135 ರನ್‌ ಹೊಡೆದಿದ್ದರು.
– ಫಿಂಚ್‌ ಇಂಗ್ಲೆಂಡ್‌ ವಿರುದ್ಧ 7 ಶತಕ ಬಾರಿಸಿದರು. ಇದು ಆಸ್ಟ್ರೇಲಿಯದ ಆಟಗಾರನೊಬ್ಬ ನಿರ್ದಿಷ್ಟ ತಂಡದೆದುರು ಬಾರಿಸಿದ ಅತ್ಯಧಿಕ ಶತಕ. ರಿಕಿ ಪಾಂಟಿಂಗ್‌ ಭಾರತ ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧ ತಲಾ 6, ಆ್ಯಡಂ ಗಿಲ್‌ಕ್ರಿಸ್ಟ್‌ ಶ್ರೀಲಂಕಾ ವಿರುದ್ಧ 6 ಶತಕ ಹೊಡೆದದ್ದು ಆಸೀಸ್‌ ದಾಖಲೆಯಾಗಿತ್ತು.
– ಫಿಂಚ್‌ ಈ ಪಂದ್ಯಾವಳಿಯ ಸತತ 4 ಇನ್ನಿಂಗ್ಸ್‌ಗಳಲ್ಲಿ 50 ಪ್ಲಸ್‌ ರನ್‌ ಹೊಡೆದರು. ಅವರು ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ 2ನೇ ನಾಯಕ. ಗ್ರೇಮ್‌ ಸ್ಮಿತ್‌ ಮೊದಲಿಗ (2007).
– ಜಾಸನ್‌ ಬೆಹೆÅಂಡಾಫ್ì (44ಕ್ಕೆ 5) ಮತ್ತು ಮಿಚೆಲ್‌ ಸ್ಟಾರ್ಕ್‌ (43ಕ್ಕೆ 4) ಒಟ್ಟು 9 ವಿಕೆಟ್‌ಗಳನ್ನು ಹಂಚಿಕೊಂಡರು. ಇದು ಏಕದಿನ ಇತಿಹಾಸದಲ್ಲಿ ಎಡಗೈ ಆರಂಭಿಕ ಬೌಲಿಂಗ್‌ ಜೋಡಿಯೊಂದು ಉರುಳಿಸಿದ ಅತ್ಯಧಿಕ ಸಂಖ್ಯೆಯ ವಿಕೆಟ್‌.
– ಮಿಚೆಲ್‌ ಸ್ಟಾರ್ಕ್‌ ವಿಶ್ವಕಪ್‌ನಲ್ಲಿ 5 ಸಲ 4 ಪ್ಲಸ್‌ ವಿಕೆಟ್‌ ಕಿತ್ತ 2ನೇ ಬೌಲರ್‌. ಇಮ್ರಾನ್‌ ತಾಹಿರ್‌ ಮೊದಲಿಗ. ಕಳೆದ ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದಲ್ಲಿ ತಾಹಿರ್‌ ಈ ಸಾಧನೆ ಪೂರ್ತಿಗೊಳಿಸಿದ್ದರು.
– ವಾರ್ನರ್‌-ಫಿಂಚ್‌ ಈ ವಿಶ್ವಕಪ್‌ನಲ್ಲಿ 3 ಶತಕದ ಜತೆಯಾಟಗಳ ಜಂಟಿ ದಾಖಲೆ ನಿರ್ಮಿಸಿದರು. ಇವರಿಗೂ ಮೊದಲು ಅರವಿಂದ ಡಿ ಸಿಲ್ವ-ಅಸಂಕ ಗುರುಸಿನ್ಹ (1996), ಆ್ಯಡಂ ಗಿಲ್‌ಕ್ರಿಸ್ಟ್‌-ಮ್ಯಾಥ್ಯೂ ಹೇಡನ್‌ (2007) ಮತ್ತು ಕುಮಾರ ಸಂಗಕ್ಕರ-ತಿಲಕರತ್ನೆ ದಿಲ್ಶನ್‌ (2015) ಈ ಸಾಧನೆ ಮಾಡಿದ್ದರು.
– ವಾರ್ನರ್‌-ಫಿಂಚ್‌ ಈ ಕೂಟದಲ್ಲಿ 6ನೇ 50 ಪ್ಲಸ್‌ ರನ್‌ ಜತೆ ಯಾಟ ನಡೆಸಿದರು.ಇದು ವಿಶ್ವಕಪ್‌ ಪಂದ್ಯಾವಳಿಯೊಂದರಲ್ಲಿ ಜೋಡಿಯೊಂದು ದಾಖಲಿಸಿದ 2ನೇ ಅತ್ಯಧಿಕ 50 ಪ್ಲಸ್‌ ರನ್‌ ಜತೆಯಾಟ. 2007ರಲ್ಲಿ ಗಿಲ್‌ಕ್ರಿಸ್ಟ್‌-ಹೇಡನ್‌ 7 ಸಲ ಈ ಸಾಧನೆ ಮಾಡಿದ್ದು ದಾಖಲೆ.

ಟಾಪ್ ನ್ಯೂಸ್

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ

ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

tirupati

Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.