ಭಾರತ-ಕಿವೀಸ್‌ಗೆ ಮಳೆ ಸವಾಲು

ಇಂದು ನಾಟಿಂಗ್‌ಹ್ಯಾಮ್‌ನಲ್ಲಿ ಅಜೇಯ ತಂಡಗಳ ಸ್ಪರ್ಧೆ

Team Udayavani, Jun 13, 2019, 5:35 AM IST

AP6_12_2019_000122A

ನಾಟಿಂಗ್‌ಹ್ಯಾಮ್‌: ವಿಶ್ವಕಪ್‌ ಕೂಟದ ಈವರೆಗಿನ ಅಜೇಯ ತಂಡಗಳಾದ ಭಾರತ ಮತ್ತು ನ್ಯೂಜಿಲ್ಯಾಂಡ್‌ ಗುರುವಾರ ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಜ್‌ ಅಂಗಳದಲ್ಲಿ ಮುಖಾಮುಖೀ ಯಾಗಲಿವೆ. ಎರಡೂ ತಂಡಗಳ ಮುಂದಿ ರುವ ದೊಡ್ಡ ಸವಾಲೆಂದರೆ ಮಳೆಯನ್ನು ಗೆಲ್ಲು ವುದು. ಈ ಪಂದ್ಯಕ್ಕೆ ಮಳೆ ಎದುರಾಗದಿರಲಿ ಎಂದು ಮೊದಲು ಪ್ರಾರ್ಥಿಸಿ ಅನಂತರ ಟೀಮ್‌ ಇಂಡಿಯಾ ಗೆಲುವನ್ನು ಹಾರೈಸಬೇಕಾದುದು ಸದ್ಯದ ಅನಿವಾರ್ಯತೆ.

ಹವಾಮಾನ ವರದಿ ಪ್ರಕಾರ ಗುರುವಾರದ ಬೆಳಗಿನ ಅವಧಿಯ ಆಟಕ್ಕೇನೂ ಅಡ್ಡಿಯಾಗದು. ಆದರೆ ಅಪರಾಹ್ನದ ಬಳಿಕ ಮಳೆ ಸುರಿಯುವುದು ಬಹುತೇಕ ಖಚಿತ. ಹೀಗಾಗಿ ಮೊದಲು ಬ್ಯಾಟಿಂಗ್‌ ನಡೆಸುವ ತಂಡ ದೊಡ್ಡ ಮೊತ್ತ ಪೇರಿಸುವ ಯೋಜನೆ ಹಾಕಿ ಕೊಳ್ಳಬೇಕಾಗುತ್ತದೆ. ಅಕಸ್ಮಾತ್‌ ಪಂದ್ಯದ ಫ‌ಲಿತಾಂಶ ಡಕ್‌ವರ್ತ್‌- ಲೂಯಿಸ್‌ ನಿಯಮದಂತೆ ನಿರ್ಧ ರಿಸುವುದಾದಲ್ಲಿ ಇದು ನೆರವಿಗೆ ಬರಲಿದೆ.

ರಾಹುಲ್‌-ರೋಹಿತ್‌
ಓಪನಿಂಗ್‌
ಆಫ್ರಿಕಾ ಮತ್ತು ಆಸ್ಟ್ರೇಲಿಯವನ್ನು ಮಣಿಸಿ ಪ್ರಚಂಡ ಓಟ ಆರಂಭಿಸಿರುವ ಭಾರತಕ್ಕೆ ಸದ್ಯ ಎದುರಾಗಿರುವ ಚಿಂತೆಯೆಂದರೆ ಆರಂಭಕಾರ ಧವನ್‌ ಅನುಪಸ್ಥಿತಿ. ಆಸೀಸ್‌ ವಿರುದ್ಧ ಭರ್ಜರಿ ಶತಕ ಬಾರಿಸಿ ಅಮೋಘ ಫಾರ್ಮ್ ಪ್ರದರ್ಶಿಸಿದ್ದ ಧವನ್‌ ಗೈರು ತಂಡದ ಅಷ್ಟೂ ಕಾರ್ಯತಂತ್ರವನ್ನು ಅಡಿಮೇಲಾಗಿಸಿದೆ. ಧವನ್‌ ಬದಲು ರಾಹುಲ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ ನಿಜ, ಆದರೆ ಧವನ್‌-ರೋಹಿತ್‌ ಈಗಾಗಲೇ “ಸೆಟ್‌’ ಆಗಿದ್ದ ಜೋಡಿ. ಇವರಿಬ್ಬರು ಸೇರಿ ಈಗಾಗಲೇ ಮೊದಲ ವಿಕೆಟಿಗೆ 4,681 ರನ್‌ ಪೇರಿಸಿ ಮೆರೆದಿದ್ದಾರೆ. ಇಬ್ಬರ ನಡುವಿನ ಹೊಂದಾಣಿಕೆ ಚೆನ್ನಾಗಿತ್ತು. ಹೊಸ ಜೋಡಿ ಟ್ರೆಂಟ್‌ ಬೌಲ್ಟ್-ಮ್ಯಾಟ್‌ ಹೆನ್ರಿ ದಾಳಿಯನ್ನು ಹೇಗೆ ನಿಭಾಯಿಸೀತು ಎಂಬ ಕುತೂಹಲವಿದೆ.

20 ವರ್ಷಗಳ ಹಿಂದೆ
ಇದೇ ಅಂಗಳದಲ್ಲಿ…
ಕಾಕತಾಳೀಯವೆಂಬಂತೆ ಸರಿಯಾಗಿ 20 ವರ್ಷಗಳ ಬಳಿಕ ಭಾರತ-ನ್ಯೂಜಿಲ್ಯಾಂಡ್‌ ತಂಡಗಳು ನಾಟಿಂಗ್‌ಹ್ಯಾಮ್‌ನಲ್ಲಿ ವಿಶ್ವಕಪ್‌ನಲ್ಲಿ ಎದುರಾಗುತ್ತಿವೆ! ಅದು ಇಂಗ್ಲೆಂಡ್‌ನ‌ಲ್ಲಿ ನಡೆದ 1999ರ ವಿಶ್ವಕಪ್‌ ಕೂಟದ “ಸೂಪರ್‌-8′ ಪಂದ್ಯ. ನಡೆದದ್ದು ಜೂನ್‌ 12ರಂದು (ಈ ಬಾರಿ ಜೂ. 13) ಇದನ್ನು ನ್ಯೂಜಿಲ್ಯಾಂಡ್‌ 5 ವಿಕೆಟ್‌ಗಳಿಂದ ಜಯಿಸಿತ್ತು.
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 6 ವಿಕೆಟಿಗೆ 251 ರನ್‌ ಗಳಿಸಿತು. ಅಜಯ್‌ ಜಡೇಜ ಸರ್ವಾಧಿಕ 76 ರನ್‌ ಹೊಡೆದಿದ್ದರು. ಜವಾಬಿತ್ತ ಫ್ಲೆಮಿಂಗ್‌ ಪಡೆ 48.2 ಓವರ್‌ಗಳಲ್ಲಿ 5 ವಿಕೆಟಿಗೆ 253 ರನ್‌ ಬಾರಿಸಿ ಗೆದ್ದು ಬಂತು. ಆರಂಭಕಾರ ಮ್ಯಾಟ್‌ ಹೋಮ್‌ 74, ಮಧ್ಯಮ ಸರದಿಯ ರೋಜರ್‌ ಟೂಸ್‌ 60 ರನ್‌ ಕೊಡುಗೆ ಸಲ್ಲಿಸಿದರು. ಭಾರತ 35 ಎಕ್ಸ್‌ಟ್ರಾ ರನ್‌ ನೀಡಿ ಕಳಪೆ ಬೌಲಿಂಗ್‌ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಮಿಡ್ಲ್ ಆರ್ಡರ್‌ ಸ್ಪರ್ಧೆ
ರಾಹುಲ್‌ ಆರಂಭಿಕನಾಗಿ ಇಳಿಯುವುದರಿಂದ ಮಧ್ಯಮ ಕ್ರಮಾಂಕದ ಕುರಿತೂ ಹೆಚ್ಚು ಯೋಚಿಸಬೇಕಾಗುತ್ತದೆ. ಮೊದಲೇ ಭಾರತದ “ಮಿಡ್ಲ್ ಆರ್ಡರ್‌’ ದುರ್ಬಲವಾದ್ದರಿಂದ ಆತಂಕ ಸಹಜ. ಇಲ್ಲಿ ದಿನೇಶ್‌ ಕಾರ್ತಿಕ್‌ ಮತ್ತು ವಿಜಯ್‌ ಶಂಕರ್‌ ನಡುವೆ ಸ್ಪರ್ಧೆ ಇದೆ. ಆದರೆ ಅನುಭವದ ನೆಲೆಯಲ್ಲಿ ಕಾರ್ತಿಕ್‌ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚು.
ಕೇದಾರ್‌ ಜಾಧವ್‌ ಬದಲು ಆಲ್‌ರೌಂಡರ್‌ ನೆಲೆಯಲ್ಲಿ ರವೀಂದ್ರ ಜಡೇಜ ಅವರನ್ನು ಆಡಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆಸೀಸ್‌ ವಿರುದ್ಧ ಧವನ್‌ ಬದಲು ಅಮೋಘ ಫೀಲ್ಡಿಂಗ್‌ ನಡೆಸಿದ್ದು ಜಡೇಜ ಮೇಲಿನ ವಿಶ್ವಾಸ ಹೆಚ್ಚುವಂತೆ ಮಾಡಿದೆ. ಸ್ಪಿನ್‌ ದಾಳಿಯಲ್ಲೂ ಅವರು ಜಾಧವ್‌ಗಿಂತ ಎಷ್ಟೋ ಮೇಲ್ಮಟ್ಟದಲ್ಲಿದ್ದಾರೆ. ಅಕಸ್ಮಾತ್‌ ಜಡೇಜಾಗೆ ಅವಕಾಶ ಲಭಿಸಿದರೆ ಆಗ ಕುಲದೀಪ್‌ ಯಾದವ್‌ ಬದಲು ಮೊಹಮ್ಮದ್‌ ಶಮಿ ಅವರನ್ನು ಆಡಿಸುವ ಸಾಧ್ಯತೆಯೂ ಇದೆ.

ಎಕ್ಸ್‌ಟ್ರಾ ಬೌನ್ಸ್‌ ನೆರವು
ಭಾರತ-ನ್ಯೂಜಿಲ್ಯಾಂಡ್‌ ಈಗಾಗಲೇ ಅಭ್ಯಾಸ ಪಂದ್ಯದಲ್ಲಿ ಮುಖಾಮುಖೀಯಾಗಿವೆ. ಇದನ್ನು ವಿಲಿಯಮ್ಸನ್‌ ಪಡೆ ಭಾರೀ ಅಂತರದಿಂದ ಜಯಿಸಿತ್ತು. ಭಾರತ ಬೌಲ್ಟ್ ದಾಳಿಯನ್ನು ನಿಭಾಯಿಸುವಲ್ಲಿ ಎಡ ವಿತ್ತು. ಈ ಪಂದ್ಯ ಮುಗಿದು ಈಗಾಗಲೇ 15 ದಿನ ಆಗಿದೆ. ಆದರೆ ಈವರೆಗೆ ಬೌಲ್ಟ್ ನಿರೀಕ್ಷಿತ ಮಟ್ಟದಲ್ಲಿ ಸ್ವಿಂಗ್‌ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾಗಿಲ್ಲ. ಆದರೂ ಕಿವೀಸ್‌ ಬೌಲಿಂಗ್‌ ಇಂಗ್ಲೆಂಡ್‌ ವಾತಾವರಣಕ್ಕೆ ಹೆಚ್ಚು ಸೂಕ್ತ ಎಂಬುದನ್ನು ಮರೆಯುವಂತಿಲ್ಲ. ಟ್ರೆಂಟ್‌ಬ್ರಿಜ್‌ನಲ್ಲಿ ಎಕ್ಸ್‌ಟ್ರಾ ಬೌನ್ಸ್‌ ಇದೆ ಎಂಬುದನ್ನು ವೆಸ್ಟ್‌ ಇಂಡೀಸ್‌ ಈಗಾಗಲೇ ತೋರಿಸಿಕೊಟ್ಟಿದೆ.

ಕಿವೀಸ್‌ಗೆ ಓಪನಿಂಗ್‌ ಚಿಂತೆ
ನ್ಯೂಜಿಲ್ಯಾಂಡ್‌ ಬ್ಯಾಟಿಂಗ್‌ ಕೇನ್‌ ವಿಲಿಯಮ್ಸನ್‌, ರಾಸ್‌ ಟೇಲರ್‌ ಅವರನ್ನು ಹೆಚ್ಚು ಅವಲಂಬಿಸಿದೆ. ಟೇಲರ್‌ ಅವರಂತೂ ಅಮೋಘ ಫಾರ್ಮ್ನಲ್ಲಿದ್ದಾರೆ. ಆದರೆ ಓಪನಿಂಗ್‌ನಲ್ಲಿ ತಂಡ ವೈಫ‌ಲ್ಯ ಕಾಣುತ್ತಿದೆ. ನಂಬುಗೆಯ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌ ರನ್‌ ಬರಗಾಲದಲ್ಲಿದ್ದಾರೆ. ಭಾರತ ಇದರ ಲಾಭ ಎತ್ತಬೇಕಿದೆ. ಬ್ಲ್ಯಾಕ್‌ ಕ್ಯಾಪ್ಸ್‌ ಈವರೆಗಿನ ಮೂರೂ ಪಂದ್ಯಗಳನ್ನು ಚೇಸ್‌ ಮಾಡಿಯೇ ಗೆದ್ದಿದೆ. ಮೂರೂ ಏಶ್ಯನ್‌ ಎದುರಾಳಿಯೇ ಆಗಿದ್ದವು. ಲಂಕಾ ವಿರುದ್ಧ 10 ವಿಕೆಟ್‌ಗಳಿಂದ ಗೆದ್ದರೆ, ಬಾಂಗ್ಲಾ ವಿರುದ್ಧ ಪರದಾಡಿ 2 ವಿಕೆಟ್‌ ಜಯ ಸಾಧಿಸಿತು. ಬಳಿಕ ಅಫ್ಘಾನ್‌ಗೆ
7 ವಿಕೆಟ್‌ಗಳ ಏಟು ಬಿಗಿಯಿತು. ಭಾರತ ಈ ಕೂಟದಲ್ಲಿ ನ್ಯೂಜಿಲ್ಯಾಂಡಿಗೆ ಎದುರಾಗುತ್ತಿರುವ ಮೊದಲ ಬಲಿಷ್ಠ ಎದುರಾಳಿ!

ಸಿಲ್ಲಿ ಪಾಯಿಂಟ್‌
03: ಇಂಗ್ಲೆಂಡ್‌ನ‌ಲ್ಲಿ ಸಾಗಿದ ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡ್‌ ಭಾರತವನ್ನು 3 ಸಲ ಸೋಲಿಸಿದೆ. ಕಿವೀಸ್‌ಗೆ ಇನ್ನೊಂದು ಗೆಲುವು ತವರಲ್ಲಿ ಒಲಿದಿದೆ.

02: ಭಾರತ ವಿಶ್ವಕಪ್‌ನಲ್ಲಿ ಸಾಧಿಸಿದ 2 ಗೆಲುವು ತವರಲ್ಲಿ ಬಂದಿದೆ. ಇನ್ನೊಂದು ದಕ್ಷಿಣ ಆಫ್ರಿಕಾ ಕೂಟದಲ್ಲಿ ಒಲಿದಿದೆ.

2003: ಭಾರತ-ನ್ಯೂಜಿಲ್ಯಾಂಡ್‌ ಕೊನೆಯ ಸಲ ವಿಶ್ವಕಪ್‌ನಲ್ಲಿ ಮುಖಾಮುಖೀ ಯಾದದ್ದು 2003ರಲ್ಲಿ. ಅಂದು ಭಾರತ ಜಯ ಸಾಧಿಸಿತ್ತು.

101: ಭಾರತ-ನ್ಯೂಜಿಲ್ಯಾಂಡ್‌ ಈವರೆಗೆ ಏಕದಿನದಲ್ಲಿ 101 ಸಲ ಮುಖಾಮುಖೀಯಾಗಿವೆ. ಭಾರತ 51, ನ್ಯೂಜಿಲ್ಯಾಂಡ್‌ 44 ಜಯ ಸಾಧಿಸಿದೆ.

ಟಾಪ್ ನ್ಯೂಸ್

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.