![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 8, 2019, 12:36 PM IST
ಲಂಡನ್: ಭಾರತ-ನ್ಯೂಜಿಲೆಂಡ್ ನಡುವೆ ಮಂಗಳವಾರ ನಡೆಯಲಿರುವ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಇಂಗ್ಲೆಂಡ್‌ನ ಇಬ್ಬರು ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ರಿಚರ್ಡ್ ಇಲ್ಲಿಂಗ್‌ವರ್ಥ್ ಹಾಗೂ ರಿಚರ್ಡ್ ಕೆಟಲ್ಬರ್ಗ್ ಕಾರ್ಯ ನಿರ್ವಹಿಸಲಿರುವ ಅಂಪೈರ್‌ಗಳಾಗಿದ್ದಾರೆ.
ಆಸ್ಟ್ರೇಲಿಯಾದ ರಾಡ್ ಠಕ್ಕರ್ ಥರ್ಡ್ ಅಂಪೈರ್ ಆಗಿ ಈ ಪಂದ್ಯದಲ್ಲಿ ಕಾಣಿಸಿಕೊಂಡರೆ, ಇಂಗ್ಲೆಂಡ್ ನ ನೈಜೆಲ್ ಲಾಂಗ್ ಅವರನ್ನು ಫೋರ್ಥ್ ಅಂಪೈರ್ ಆಗಿ ಐಸಿಸಿ ಆಯ್ಕೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ಬೂನ್ ಮ್ಯಾಚ್ ರೆಫ್ರೀಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಆಸೀಸ್-ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್ ಹಣಾಹಣಿಗೆ ಶ್ರೀಲಂಕಾದ ಕುಮಾರ ಧರ್ಮಸೇನಾ ಹಾಗೂ ದಕ್ಷಿಣ ಆಫ್ರಿಕಾ ದ ಮಾರೈಸ್ ಎರಾಸ್ಮಸ್ ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಈ ಪಂದ್ಯಕ್ಕೆ ಥರ್ಡ್ ಅಂಪೈರ್ ಆಗಿ ಕಿವೀಸ್ ನ ಕ್ರಿಸ್ ಗ್ಯಾಫ್ನಿ ಮತ್ತು ಪಾಕಿಸ್ತಾನದ ಅಲೀಮ್ ದರ್ ನಾಲ್ಕನೇ ತೀರ್ಪುಗಾರನಾಗಿ ಕಾಣಿಸಿ ಕೊಳ್ಳಲಿದ್ದಾರೆ. ಲಂಕಾದ ರಂಜನ್ ಮಧುಗಲೇ ಈ ಪಂದ್ಯದ ರೆಫ್ರೀಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
You seem to have an Ad Blocker on.
To continue reading, please turn it off or whitelist Udayavani.