ಆಲ್‌ರೌಂಡರ್ ವಿಜಯ್ ಶಂಕರ್ ಫಿಟ್
Team Udayavani, May 26, 2019, 10:19 AM IST
ಲಂಡನ್: ವಿಶ್ವಕಪ್‌ಗೆ ಸಿದ್ಧವಾಗುತ್ತಿರುವ ಭಾರತದ ತಂಡದಲ್ಲೂ ಗಾಯದ ಸಮಸ್ಯೆ ಗೋಚರಿಸಿದೆ. ಆಲ್‌ರೌಂಡರ್ ವಿಜಯ್ ಶಂಕರ್ ನ್ಯೂಜಿಲ್ಯಾಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮೊದಲು ಬಲ ಮುಂಗೈಗೆ ಗಾಯ ಮಾಡಿಕೊಂಡಿದ್ದರಿಂದ ಆತಂಕ ಮನೆ ಮಾಡಿತ್ತು.
ಇದೀಗ ವಿಜಯ್ ಶಂಕರ್ ಸ್ಕ್ಯಾನಿಂಗ್ ವರದಿ ಬಂದಿದೆ. ಅವರಿಗೆ ತೀವ್ರ ಪ್ರಮಾಣದ ಪೆಟ್ಟಾಗಿಲ್ಲ ಎಂದು ವರದಿ ತಿಳಿಸಿದೆ.