ಮುನ್ನಡೆಯುವ ಅವಕಾಶವಿದೆ: ಮೊರ್ತಜ
Team Udayavani, Jun 19, 2019, 10:10 AM IST
ಲಂಡನ್: ವಿಶ್ವಕಪ್‌ನಲ್ಲಿ ನಮಗೆ ಮುಂದಿನ ಸುತ್ತಿಗೆ ಮುನ್ನಡೆಯುವ ಅವಕಾಶವಿದೆ. ಆದರೆ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಬೇಕಿದೆ ಎಂದು ಬಾಂಗ್ಲಾದೇಶದ ನಾಯಕ ಮುಶ್ರಫೆ ಮೊರ್ತಜ ಹೇಳಿದ್ದಾರೆ.
ವೆಸ್ಟ್‌ಇಂಡೀಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದ ಖುಷಿಯಲ್ಲಿ ಮಾತನಾಡಿದ ಅವರು ಬ್ಯಾಟಿಂಗ್, ಬೌಲಿಂಗ್‌ನಲ್ಲಿ ನಮ್ಮ ಆಟಗಾರರು ಗಮನಾರ್ಹ ನಿರ್ವಹಣೆ ನೀಡಿದ್ದಾರೆ. ಮುಸ್ತಾಫಿಜುರ್ ಎರಡು ವಿಕೆಟ್ ಕಿತ್ತಿರುವುದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಗಿದೆ. ಶಕಿಬ್ ಈ ವಿಶ್ವಕಪ್‌ನಲ್ಲಿ ಅಮೋಘವಾಗಿ ಆಡುತ್ತಿದ್ದಾರೆ. ಅವರ ಬಲದಿಂದ ನಾವು ಗೆಲ್ಲುವಂತಾಯಿತು ಎಂದವರು ತಿಳಿಸಿದರು.
ತುಂಬಾ ಖುಷಿಯಾಗುತ್ತಿದೆ. ಗೆಲುವು ದಾಖಲಿಸುವ ತನಕ ಕ್ರೀಸ್‌ನಲ್ಲಿ ಇರುವುದು ತೃಪ್ತಿ ತಂದ ವಿಷಯವಾಗಿದೆ. ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಲ್ಲಿ ಗೆಲುವು ನಮ್ಮದಾಗಬಹುದು ಎಂದು ನಂಬಿದ್ದೆ ಎಂದು ಶಕಿಬ್ ಅಲ್ ಹಸನ್ ಹೇಳಿದ್ದಾರೆ.
ಮೂರನೇ ಕ್ರಮಾಂಕ ಇಷ್ಟ
ಮೂರನೇ ಕ್ರಮಾಂಕದಲ್ಲಿ ಆಡುವುದು ನನಗೆ ಇಷ್ಟ. ಯಾಕೆಂದರೆ ಇಲ್ಲಿ ನನಗೆ ಹೆಚ್ಚಿನ ಅವಕಾಶ ಸಿಗುತ್ತದೆ ಮತ್ತು ಹೆಚ್ಚಿನ ಸಮಯವೂ ಸಿಗುತ್ತದೆ ಎಂದು ಶಕಿಬ್ ತಿಳಿಸಿದರು. ಒಂದು ವೇಳೆ 5ನೇ ಕ್ರಮಾಂಕದಲ್ಲಿ ಆಡಿದರೆ ಸ್ವಲ್ಪಮಟ್ಟಿನ ಒತ್ತಡದಲ್ಲಿ ಆಡಬೇಕಾಗುತ್ತದೆ ಎಂದರು.
ಸಾಕಷ್ಟು ರನ್ ಗಳಿಸಿಲ್ಲ
ಪಿಚ್ ದಿನಪೂರ್ತಿ ಬ್ಯಾಟಿಂಗ್‌ಗೆ ಯೋಗ್ಯವಾಗಿತ್ತು. ಆದರೆ ನಾವು ಚೆನ್ನಾಗಿ ಆಡಿಲ್ಲ. 40ರಿಂದ 50 ರನ್ ಕಡಿಮೆಯಾಯಿತು. ನಮ್ಮ ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ ಕಳಪೆ ಮಟ್ಟದಲ್ಲಿತ್ತು ಎಂದು ಜಾಸನ್ ಹೋಲ್ಡರ್ ಹೇಳಿದರು.
2019ರ ವಿಶ್ವಕಪ್‌ನಲ್ಲಿ ಗರಿಷ್ಠ ಜತೆಯಾಟ
ರನ್ ಆಟಗಾರರು ವಿರುದ್ಧ
189* ಶಕಿಬ್-ಲಿಟನ್ ದಾಸ್ ವೆಸ್ಟ್‌ಇಂಡೀಸ್
173 ಆರನ್ ಫಿಂಚ್-ಸ್ಮಿತ್ ಶ್ರೀಲಂಕಾ
146 ಫಿಂಚ್-ವಾರ್ನರ್ ಪಾಕಿಸ್ಥಾನ
142 ಶಕಿಬ್-ಮುಶ್ಫಿಕರ್ ದಕ್ಷಿಣ ಆಫ್ರಿಕಾ
ವಿಶ್ವಕಪ್‌ನಲ್ಲಿ ಬಾಂಗ್ಲಾದ 4ನೇ ವಿಕೆಟಿಗೆ ಜತೆಯಾಟ
189* ಶಕಿಬ್-ಲಿಟನ್ ದಾಸ್ ವೆಸ್ಟ್‌ಇಂಡೀಸ್ 2019
84 ಮುಶ್ಫಿಕರ್-ಶಕಿಬ್ ಭಾರತ 2007
82 ಇಮ್ರುಲ್ -ಶಕಿಬ್ ಇಂಗ್ಲೆಂಡ್ 2011
59* ಶಕಿಬ್-ಅಶ್ರಫುಲ್ ಬರ್ಮುಡ 2007
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.