ವಿಶ್ವಕಪ್ ಪ್ರಶಸ್ತಿ ಯಾರಿಗೆ?
ಅದೃಷ್ಟದ ಕಿವೀಸ್; ಆತಿಥ್ಯದ ಇಂಗ್ಲೆಂಡ್
Team Udayavani, Jul 13, 2019, 5:56 AM IST
ಲಂಡನ್: ಬಹುತೇಕ ಯಾರೂ ನಿರೀಕ್ಷೆ ಮಾಡದ ಎರಡು ತಂಡಗಳು 2019ರ ವಿಶ್ವಕಪ್ ಕ್ರಿಕೆಟ್ ಕೂಟದ ಪ್ರಶಸ್ತಿ ಎತ್ತಲು ರವಿವಾರ ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಮುಖಾ ಮುಖೀಯಾಗುತ್ತಿವೆ.
ಅದೃಷ್ಟದ ಬಲದಿಂದ ಫೈನಲಿಗೇರಿದ ನ್ಯೂಜಿಲ್ಯಾಂಡ್ ಮತ್ತು ಆತಿಥ್ಯ ವಹಿಸಿಕೊಂಡ ಇಂಗ್ಲೆಂಡ್ ಪ್ರಶಸ್ತಿ ಗೆಲ್ಲಲು ಹೋರಾಡಲಿದೆ. ಸಾಮಾನ್ಯ ತಂಡವಾಗಿರುವ ನ್ಯೂಜಿಲ್ಯಾಂಡ್ ಸೆಮಿಫೈನಲ್‌ನಲ್ಲಿ ಬಲಿಷ್ಠ ಭಾರತವನ್ನು ಬಗ್ಗುಬಡಿದರೆ ಇಂಗ್ಲೆಂಡ್ ವಿಶ್ವ ಚಾಂಪಿಯನ್ ಆಸ್ಟ್ರೇಲಿಯವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಏರಿದೆ. ರವಿವಾರ ಯಾರೇ ಗೆದ್ದರೂ ಆ ತಂಡ ಚೊಚ್ಚಲ ಬಾರಿ ಪ್ರಶಸ್ತಿ ಗೆದ್ದ ಸಂಭ್ರಮ ಆಚರಿಸಲಿದೆ.
ಪ್ರಶಸ್ತಿ ಯಾರಿಗೆ
ಉಭಯ ತಂಡಗಳ ಬಲಾಬಲ ವನ್ನು ಗಮನಿಸಿದರೆ ಇಂಗ್ಲೆಂಡ್ ಬಲಿಷ್ಠವೆಂದು ಹೇಳಬಹುದು. ಆಸ್ಟ್ರೇಲಿಯ ವಿರುದ್ಧ ಆಡಿದಂತೆ ಫೈನಲ್‌ನಲ್ಲೂ ಆಡಿದರೆ ಇಂಗ್ಲೆಂಡ್ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಬೌಲಿಂಗ್, ಬ್ಯಾಟಿಂಗ್‌ನಲ್ಲಿ ಅಸಾ ಮಾನ್ಯ ನಿರ್ವಹಣೆ ನೀಡಿದ ಆತಿ ಥೇಯ ಆಂಗ್ಲರು ಆಸೀಸನ್ನು ಬಗ್ಗು ಬಡಿದಿದ್ದರು. ಮಾತ್ರವಲ್ಲದೇ ಲೀಗ್ ಹಂತದಲ್ಲಿ ಇಂಗ್ಲೆಂಡ್ ಕಿವೀಸನ್ನು ಭಾರೀ ಅಂತರದಿಂದ ಉರುಳಿಸಿತ್ತು. ಇದೇ ವೇಳೆ ಅದೃ ಷ್ಟದ ಬಲದಿಂದ ಸೆಮಿಫೈನಲಿಗೇ ರಿದ್ದ ಕಿವೀಸ್ ಮಳೆ ಯಿಂದ ತೊಂದರೆಗೊ ಳಗಾದ ಪಂದ್ಯದಲ್ಲಿ ರನ್ ಮೆಷಿನ್ ಭಾರತದ ರನ್ ಓಟಕ್ಕೆ ಬ್ರೇಕ್ ನೀಡುವಲ್ಲಿ ಯಶಸ್ವಿಯಾಗಿ ಫೈನಲಿಗೆ ಏರಿತ್ತು.
ಹೀಗೊಂದು ಲೆಕ್ಕಾಚಾರ
1992ರಲ್ಲಿ ಅದೃಷ್ಟದ ಬಲದಿಂದ ಸೆಮಿಫೈನಲ್ ತಲುಪಿದ್ದ ಪಾಕಿಸ್ಥಾನ ಆಬಳಿಕ ಅಮೋಘ ನಿರ್ವಹಣೆ ನೀಡುತ್ತ ಪ್ರಶಸ್ತಿ ಗೆದ್ದು ಸಂಭ್ರಮಿಸಿತ್ತು. ಈ ಬಾರಿ ನ್ಯೂಜಿಲ್ಯಾಂಡ್ ಕೂಡ ಅದೃಷ್ಟದ ಬಲದಿಂದಲೇ ಸೆಮಿಫೈನಲಿಗೇರಿತ್ತು. ರನ್‌ಧಾರಣೆಯ ಆಧಾರದಲ್ಲಿ ನಾಕೌಟ್ ತಲುಪಿದೆ. ಫೈನಲ್‌ನಲ್ಲಿ ಇಂಗ್ಲೆಂಡ್ ಎದುರಾಳಿ ಸಿಕ್ಕಿದೆ.
ಇದೇ ವೇಳೆ ಆತಿಥ್ಯ ವಹಿಸಿದ ಇಂಗ್ಲೆಂಡಿಗೂ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಕಳೆದ ಎರಡು ವಿಶ್ವಕಪ್ ವೇಳೆ ಆತಿಥ್ಯ ವಹಿಸಿದ ತಂಡವೇ ಪ್ರಶಸ್ತಿ ಗೆದ್ದಿದೆ. ಈ ಬಾರಿ ಇಂಗ್ಲೆಂಡ್ ಗೆದ್ದರೆ ಹ್ಯಾಟ್ರಿಕ್ ಸಾಧಿಸಲಿದೆ. 2011ರ ವಿಶ್ವಕಪ್‌ನ ಆತಿಥ್ಯ ವಹಿಸಿದ್ದ ಭಾರತ ಫೈನಲ್‌ನಲ್ಲಿ ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿ ಗೆದ್ದಿದೆ. 2015ರ ವಿಶ್ವಕಪ್‌ನ ಆತಿಥ್ಯ ಆಸ್ಟ್ರೇಲಿಯ ವಹಿಸಿತ್ತು. ಫೈನಲ್‌ನಲ್ಲಿ ನ್ಯೂಜಿಲ್ಯಾಂಡನ್ನು ಕೆಡಹಿ ಪ್ರಶಸ್ತಿ ಎತ್ತಿ ಹಿಡಿದಿತ್ತು. 2019ರ ವಿಶ್ವಕಪ್‌ನ ಆತಿಥ್ಯ ಇಂಗ್ಲೆಂಡ್ ವಹಿಸಿದೆ. ಫೈನಲ್ ರವಿವಾರ ನಡೆಯಲಿದ್ದು ಪ್ರಶಸ್ತಿ ಗೆಲ್ಲುವರ್ಯಾರು ಕಾದು ನೋಡುವ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.