ಧವನ್‌ರನ್ನು ಏಕೆ ಕೈ ಬಿಟ್ಟಿಲ್ಲ
ರಹಸ್ಯ ಬಹಿರಂಗಪಡಿಸಿದ ಕೊಹ್ಲಿ
Team Udayavani, Jun 15, 2019, 5:28 AM IST
ಲಂಡನ್ : ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಓಪನರ್ ಶಿಖರ್ ಧವನ್ ಅವರನ್ನು ತಂಡದಿಂದ ಏಕೆ ಕೈಬಿಟ್ಟಿಲ್ಲ ಎಂಬ ರಹಸ್ಯವನ್ನು ನಾಯಕ ಕೊಹ್ಲಿ ಬಹಿರಂಗಪಡಿಸಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ ಪಂದ್ಯದ ವೇಳೆ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಶಿಖರ್ ಧವನ್ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿದೆ. ಆದರೆ ಭಾರತ ಧವನ್ ಜಾಗಕ್ಕೆ ಹೊಸ ಆಟಗಾರನನ್ನು ಸೇರಿಸಿಕೊಳ್ಳದಿರಲು ತೀರ್ಮಾನಿಸಿ ಆಶ್ಚರ್ಯವುಂಟು ಮಾಡಿತ್ತು.
ಪಂತ್‌ರನ್ನು ಲಂಡನ್‌ಗೆ ಪ್ರಯಾಣಿಸಲು ಹೇಳಿದ್ದರೂ ಅವರು ಅಧಿಕೃತವಾಗಿ ತಂಡಕ್ಕೆ ಸೇರ್ಪಡೆ ಆಗುವುದಿಲ್ಲ. ಮುಂಜಾಗರೂಕತಾ ಕ್ರಮವಾಗಿ ಪಂತ್ ಅಲ್ಲಿರುತ್ತಾರಷ್ಟೆ.
ಕೂಟದ ದ್ವಿತೀಯಾರ್ಧದ ಲೀಗ್ ಪಂದ್ಯಗಳಿಗೆ ಅಂತೆಯೇ ನಾಕೌಟ್ ಪಂದ್ಯಗಳಲ್ಲಿ ಧವನ್ ಆಡಬೇಕೆನ್ನು ವುದು ಕೊಹ್ಲಿಯ ಬಯಕೆ. ಹೀಗಾಗಿ ಧವನ್ ಗಾಯ ಬೇಗನೆ
ಗುಣವಾಗಲಿದೆ ಎಂಬ ನಿರೀಕ್ಷೆಯಲ್ಲಿ ಭಾರತ ತಂಡವಿದೆ.
ಎಡಗೈ ಹೆಬ್ಬೆರಳಾಗಿರುವುದರಿಂದ ಧವನ್ ಬ್ಯಾಟಿಂಗ್ ಮೇಲೆ ಅಷ್ಟೇನೂ ಪರಿಣಾಮವಾಗದು. ಆದರೆ ಫೀಲ್ಡಿಂಗ್‌ಗೆ ಸಮಸ್ಯೆಯಾಗಬಹುದು. ಅವರು ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುವುದರಿಂದ ಕ್ಯಾಚ್ ಹಿಡಿಯಲು ಸಮಸ್ಯೆಯಾಗು ತ್ತದೆಯೇ ಎನ್ನುವುದನ್ನು ನೋಡಿಕೊಂಡು ಮುಂದಿನ ತೀರ್ಮಾನಕ್ಕೆ ಬರಲಾಗುವುದು ಎಂದಿದ್ದಾರೆ ಕೊಹ್ಲಿ.
ಧವನ್ ಅವರ ಸಕಾರಾತ್ಮಕವಾದ ಧೋರಣೆಯೇ ಅವರನ್ನು ತಂಡದಲ್ಲಿ ಉಳಿಸಿದೆ. ಹೆಬ್ಬೆರಳಿಗೆ ಗಾಯ ವಾಗಿದ್ದರೂ ಶೀಘ್ರ ಆಡಬೇಕೆಂಬ ಛಲ ಅವರಲ್ಲಿದೆ. ಆಟಗಾರರಿಗೆ ಈ ಛಲ ಮುಖ್ಯ. ಹೀಗಾಗಿ ಅವರನ್ನು ಕೈಬಿಡುವುದಿಲ್ಲ ಎಂದಿದ್ದಾರೆ ಕೊಹ್ಲಿ.
ಏನೇ ಆದರೂ ಮುಂದಿನ 2 ಪಂದ್ಯಗಳಲ್ಲಿ ಧವನ್ ಆಡುವುದು ಅನುಮಾನ. ರವಿವಾರ ಪಾಕ್ ಎದುರು ನಡೆಯುವ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್ ಬದಲಿ ಆಟಗಾರನಾಗಿ ಮೈದಾನಕ್ಕಿಳಿಯ ಬೇಕಾಗುತ್ತದೆ. ಜೂ.30ರಂದು ಇಂಗ್ಲಂಡ್ ಎದುರಿನ ಪಂದ್ಯಕ್ಕೆ ಧವನ್ ಫಿಟ್ ಆಗುವ ಸಾಧ್ಯತೆಯಿದೆ.
ಗಾಯವಾಗಿದ್ದರೂ ಧವನ್ ನಿತ್ಯದ ವ್ಯಾಯಾಮ ತಪ್ಪಿಸಿಲ್ಲ. ಹೆಬ್ಬೆರಳಿಗೆ ಬ್ಯಾಂಡೇಜ್ ಸುತ್ತಿಕೊಂಡು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವ ವೀಡಿಯೊವನ್ನು ಧವನ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಇದು ವೈರಲ್ ಆಗಿದೆ. ಅಭಿಮಾನಿಗಳಿಂದ ಶೀಘ್ರ ಗುಣಮುಖರಾಗಿ ಎಂಬ ಸಂದೇಶಗಳ ಮಹಾಪೂರವೇ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.