ಸೋತ ಆಫ್ರಿಕಾ: ವಿಲಿಯಮ್ಸನ್ ಶತಕ, ನ್ಯೂಜಿಲೆಂಡ್‌ಗೆ 4 ವಿಕೆಟ್ ಜಯ
Team Udayavani, Jun 20, 2019, 10:41 AM IST
ಬರ್ಮಿಂಗ್‌ಹ್ಯಾಮ್: ಕೇನ್ ವಿಲಿಯಮ್ಸನ್ (ಅಜೇಯ 106 ರನ್), ಗ್ರ್ಯಾಂಡ್ ಹೋಮ್ (60 ರನ್) ಬ್ಯಾಟಿಂಗ್ ಸಾಹಸದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್ 4 ವಿಕೆಟ್ ಗೆಲುವು ಸಾಧಿಸಿದೆ.
ಮಳೆಬಾಧಿತ ಪಂದ್ಯವನ್ನು 49 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ದಕ್ಷಿಣ ಆಫ್ರಿಕಾ 49 ಓವರ್‌ಗೆ 6 ವಿಕೆಟ್‌ಗೆ 241 ರನ್‌ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಅಗ್ರ ಆಟಗಾರರ ವೈಫಲ್ಯದ ನಡುವೆಯೂ ಕೇನ್ ವಿಲಿಯಮ್ಸನ್ (138 ಎಸೆತ, 9 ಬೌಂಡರಿ, 1 ಸಿಕ್ಸರ್) -ಗ್ರ್ಯಾಂಡ್ ಹೋಮ್ (47 ಎಸೆತ, 5 ಬೌಂಡರಿ, 2 ಸಿಕ್ಸರ್) ಸಾಹಸದಿಂದ ಗುರಿ ಸೇರಿತು. ಸೋಲಿನೊಂದಿಗೆ
ಆಫ್ರಿಕಾ ಮುಂದಿನ ದಾರಿಯನ್ನು ಬಹುತೇಕ ಕಗ್ಗಂಟಾಗಿಸಿಕೊಂಡಿದೆ.
ಆಫ್ರಿಕಾ ಪರ ಕ್ರಿಸ್ ಮಾರಿಸ್ (49ಕ್ಕೆ3) ವಿಕೆಟ್ ಪಡೆದರೆ ರಬಾಡ, ಎನ್‌ಗಿಡಿ, ಪೆಹ್ಲುಕ್ವಾಯೊ ತಲಾ ಒಂದೊಂದು ವಿಕೆಟ್ ಪಡೆದರು.
ಆಫ್ರಿಕಾ ಬ್ಯಾಟಿಂಗ್ ವೈಫಲ್ಯ: ಮೊದಲು ಬ್ಯಾಟಿಂಗ್ ನಡೆಸಿದ ಆಫ್ರಿಕಾ ತಂಡವು ಕಿವೀಸ್ ಮಾರಕ ಬೌಲಿಂಗ್ ದಾಳಿ ಸಿಲುಕಿ ರನ್‌ಗಳಿಸಲು ಒದ್ದಾಟ ನಡೆಸಿತು. ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ (5 ರನ್), ತಂಡದ ನಾಯಕ ಡು ಪ್ಲೆಸಿಸ್ (23 ರನ್) ಕಳಪೆ ಮೊತ್ತಕ್ಕೆ ಔಟಾದರು. ಪರಿಣಾಮ ತಂಡ ಒಟ್ಟು 59 ರನ್ ಆಗುವಷ್ಟರಲ್ಲಿ 2 ಪ್ರಮುಖ ವಿಕೆಟ್ ಉದುರಿಸಿಕೊಂಡಿತ್ತು. ಈ ನಡುವೆ ಆರಂಭಿಕ ಬ್ಯಾಟ್ಸ್‌ಮನ್ ಹಾಶಿಮ್ ಆಮ್ಲ (55 ರನ್, 83 ಎಸೆತ, 4 ಬೌಂಡರಿ) ಹಾಗೂ ವಾನ್ ಡರ್ ಡುಸೆನ್ (ಅಜೇಯ 67, 64 ಎಸೆತ, 2 ಬೌಂಡರಿ, 3 ಸಿಕ್ಸರ್) ತಂಡದ ನೆರವಿಗೆ ನಿಂತರು. ಇವರಿಬ್ಬರಿಂದ ತಂಡದ ಮೊತ್ತ ನಿಧಾನವಾಗಿ ಹೆಚ್ಚಾಯಿತು.
ಪಂದ್ಯದ ತಿರುವು
ಕೊನೆಯ ಓವರ್‌ನ 6 ಎಸೆತಕ್ಕೆ ಕಿವೀಸ್‌ಗೆ ಗೆಲ್ಲಲು 8 ರನ್ ಬೇಕಿತ್ತು. ಈ ಹಂತದಲ್ಲಿ ದಾಳಿಗಿಳಿದ ಫೆಹ್ಲುಕ್ವಾಯೊ ಮೊದಲ ಎಸೆತದಲ್ಲಿ 1 ರನ್ ಬಂತು. ನಂತರದ ಎರಡು ಎಸೆತದಲ್ಲಿ ವಿಲಿಯಮ್ಸನ್ ತಲಾ ಸಿಕ್ಸರ್, ಬೌಂಡರಿ ಬಾರಿಸಿ
ತಂಡದ ಗೆಲುವು ಸಾರಿದರು.
ಸ್ಕೊರ್ ಪಟ್ಟಿ
ದ.ಆಫ್ರಿಕಾ 49 ಓವರ್‌ಗೆ 241/6
ಕ್ವಿಂಟನ್ ಡಿ ಕಾಕ್ ಬಿ ಬೌಲ್ಟ್ 5
ಹಾಶಿಮ್ ಆಮ್ಲ ಬಿ ಸ್ಯಾಂಟ್ನರ್ 55
ಡು ಪ್ಲೆಸಿಸ್ ಬಿ ಫರ್ಗ್ಯುಸನ್ 23
ಮಾರ್ಕ್‌ರಮ್ ಸಿ ಮನ್ರೊ ಬಿ ಗ್ರ್ಯಾಂಡ್‌ಹೋಮ್ 38
ರಸ್ಸಿ ವಾನ್ ಡರ್ ಡುಸೆನ್ ಅಜೇಯ 67
ಡೇವಿಡ್ ಮಿಲ್ಲರ್ ಸಿ ಬೌಲ್ಟ್ ಬಿ ಫರ್ಗ್ಯುಸನ್ 36
ಫೆಹ್ಲುಕ್ವಾಯೊ ಸಿ ವಿಲಿಯಮ್ಸನ್ ಬಿ ಫರ್ಗ್ಯುಸನ್ 0
ಕ್ರಿಸ್ ಮಾರಿಸ್ ಅಜೇಯ 6
ಇತರೆ 11
ವಿಕೆಟ್ ಪತನ: 1-9, 2-59, 3-111, 4-136, 5-208, 6-218.
ಮ್ಯಾಟ್ ಹೆನ್ರಿ 10 2 34 0
ಟ್ರೆಂಟ್ ಬೌಲ್ಟ್ 10 0 63 1
ಲಾಕಿ ಫರ್ಗ್ಯುಸನ್ 10 0 59 3
ಗ್ರ್ಯಾಂಡ್‌ಹೋಮ್ 10 0 33 1
ಮಿಚೆಲ್ ಸ್ಯಾಂಟ್ನರ್ 9 0 45 1
ನ್ಯೂಜಿಲೆಂಡ್ 48.3 ಓವರ್‌ಗೆ 245/6
ಮಾರ್ಟಿನ್ ಗಪ್ಟಿಲ್ ಹಿಟ್ ವಿಕೆಟ್ ಬಿ ಪೆಹ್ಲುಕ್ವಾಯೊ 35
ಮನ್ರೊ ಸಿ ಬಿ ರಬಾಡ 9
ಕೇನ್ ವಿಲಿಯಮ್ಸನ್ ಅಜೇಯ 106
ರಾಸ್ ಟೇಲರ್ ಸಿ ಕಾಕ್ ಬಿ ಮಾರಿಸ್ 1
ಲ್ಯಾಥಮ್ ಸಿ ಕಾಕ್ ಬಿ ಮಾರಿಸ್ 1
ನಿಶಾಮ್ ಸಿ ಆಮ್ಲ ಬಿ ಮಾರಿಸ್ 23
ಗ್ರ್ಯಾಂಡ್‌ಹೋಮ್ ಸಿ ಪ್ಲೆಸಿಸ್ ಬಿ ಎನ್‌ಗಿಡಿ 60
ಸ್ಯಾಂಟ್ನರ್ ಅಜೇಯ 2
ಇತರೆ 8
ವಿಕೆಟ್ ಪತನ: 1-12, 2-72, 3-74,
4-80, 5-137, 6-228
ಕ್ಯಾಗಿಸೊ ರಬಾಡ 10 0 42 1
ಲುಂಗಿ ಎನ್‌ಗಿಡಿ 10 1 47 1
ಕ್ರಿಸ್ ಮಾರಿಸ್ 10 0 49 3
ಫೆಹ್ಲುಕ್ವಾಯೊ 8.3 0 73 1
ಇಮ್ರಾನ್ ತಾಹಿರ್ 10 0 33 0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.