ಅಪ್ರತಿಮ ಆಸೀಸ್ ಅಜೇಯ ಭಾರತಕ್ಕೆ ಒಲಿಯದ ವಿಜಯ
Team Udayavani, May 24, 2019, 6:00 AM IST
ಭಾರತ 1983ರಲ್ಲಿ ಇತಿಹಾಸ ನಿರ್ಮಿಸಿದ ಬಳಿಕ ಸರಿಯಾಗಿ 2 ದಶಕ ಗಳ ಬಳಿಕ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಕೂಟವಿದು. ದಿಟ್ಟ ನಾಯಕ ಸೌರವ್ ಗಂಗೂಲಿ ಸಾರ ಥ್ಯದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ, ಆಸ್ಟ್ರೇಲಿಯ ಬಿಟ್ಟು ಬೇರೆ ಯಾವ ತಂಡಕ್ಕೂ ಶರಣಾಗಲಿಲ್ಲ.
ರಿಕಿ ಪಾಂಟಿಂಗ್ ನೇತೃತ್ವದ ಆಸೀಸ್ ವಿರುದ್ಧ ಭಾರತ 2 ಸಲ ಎಡವಿತು. ಒಂದು ಲೀಗ್ ಹಂತದಲ್ಲಿ, ಮತ್ತೂಂದು ಫೈನಲ್‌ನಲ್ಲಿ. ನಾಯಕ ಗಂಗೂಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದೇ ಆದರೆ ಭಾರತ ಜೊಹಾನ್ಸ್‌ಬರ್ಗ್‌ನಲ್ಲೇ 2ನೇ ಕಪ್ ಎತ್ತಿ ಮೆರೆಯಬಹುದಿತ್ತು. ಆದರೆ ಎಡವಟ್ಟು ಮಾಡಿಕೊಂಡ ಭಾರತ ಹೀನಾಯ ಸೋಲು ಕಾಣಬೇಕಾಯಿತು.
ಫೈನಲ್ ಮೊತ್ತದ ದಾಖಲೆ
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ ಭಾರತದ ಬೌಲರ್‌ಗಳ ಮೇಲೆ ಘಾತಕವಾಗೆರಗಿತು. ಫೈನಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ದಾಖಲಿಸಿತು. ನಾಯಕ ಪಾಂಟಿಂಗ್ ಅಜೇಯ 140, ಮಾರ್ಟಿನ್ ಅಜೇಯ 88, ಗಿಲ್‌ಕ್ರಿಸ್ಟ್ 57 ರನ್ ಬಾರಿಸಿ ತಂಡದ ಮೊತ್ತವನ್ನು ಎರಡೇ ವಿಕೆಟಿಗೆ 359ಕ್ಕೆ ಏರಿಸಿದರು. ಆಗಲೇ ಆಸೀಸ್ ಸತತ 2ನೇ ಕಪ್ ಮೇಲೆ ತನ್ನ ಹೆಸರು ಬರೆದಾಗಿತ್ತು.
ಚೇಸಿಂಗ್ ವೇಳೆ ತೆಂಡುಲ್ಕರ್ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡದ್ದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಹೋರಾಟ ಸಂಘಟಿಸಿದ್ದು ಸೆಹವಾಗ್ ಮತ್ತು ದ್ರಾವಿಡ್ ಮಾತ್ರ. ಭಾರತ 234ಕ್ಕೆ ಆಲೌಟಾಗಿ 125 ರನ್ನುಗಳ ಸೋಲಿಗೆ ತುತ್ತಾದಾಗ ಆಗಿನ್ನೂ 10.4 ಓವರ್ ಬಾಕಿ ಇತ್ತು. ಬಹುಶಃ ಕೈಯಲ್ಲಿ ಒಂದಿಷ್ಟು ವಿಕೆಟ್ ಉಳಿದಿದ್ದರೆ, ದೊಡ್ಡ ಜತೆಯಾಟವೊಂದು ದಾಖಲಾಗಿದ್ದರೆ ಆಸ್ಟ್ರೇಲಿಯಕ್ಕೆ ನೀರು ಕುಡಿಸುವುದು ಅಸಾಧ್ಯವೇನೂ ಆಗಿರಲಿಲ್ಲ. ಆದರೆ ಗಂಗೂಲಿ ಪಡೆಗೆ ಲಕ್ ಇರಲಿಲ್ಲ!
ಪಾಂಟಿಂಗ್ ಮೊದಲ ಸಲ ವಿಶ್ವಕ ಪ್‌ನಲ್ಲಿ ಆಸ್ಟ್ರೇಲಿಯವನ್ನು ಮುನ್ನ ಡೆಸಿ ಗೆಲುವಿನ ರೂವಾರಿಯಾಗಿ ಮೂಡಿಬಂ ದರು. ಕಪ್ ಉಳಿಸಿಕೊಂಡ ವಿಶ್ವದ ಕೇವಲ 2ನೇ ತಂಡವಾಗಿ ಹೊರಹೊಮ್ಮಿತು.
ವಾರ್ನ್ ಬ್ಯಾನ್!
ಕೂಟದ ಆರಂಭಕ್ಕೂ ಮೊದಲೇ ಚಾಂಪಿಯನ್ ಆಸ್ಟ್ರೇಲಿಯ ಭಾರೀ ಆಘಾತವೊಂದಕ್ಕೆ ಸಿಲುಕಿತು. ತಂಡದ ಪ್ರಧಾನ ಸ್ಪಿನ್ನರ್ ಶೇನ್ ವಾರ್ನ್ ನಿಷೇಧಿತ ಮದ್ದು ಸೇವಿಸಿದ ಹಿನ್ನೆಲೆಯಲ್ಲಿ ಬಂದ ಹಾದಿಯಲ್ಲೇ ತವರಿಗೆ ವಾಪಸಾದರು! ವಿಶ್ವಕಪ್ ಇತಿಹಾಸದಲ್ಲಿ ಕ್ರಿಕೆಟಿಗನೊಬ್ಬ ಇಂಥ ಪ್ರಕರಣಕ್ಕೆ ಸಿಲುಕಿ ನಿಷೇಧಕ್ಕೊಳಗಾದ ಮೊದಲ ನಿದರ್ಶನ ಇದಾಗಿದೆ.
ವಾರ್ನ್ ತೂಕ ಹೆಚ್ಚಿಸುವ ನಿಷೇಧಿತ ಔಷಧ ಸೇವಿಸಿ ಈ ಸಂಕಟಕ್ಕೆ ಸಿಲುಕಿದ್ದರು.
ಆಫ್ರಿಕಾ ಖಂಡದಲ್ಲಿ ಮೊದಲ ಟೂರ್ನಿ
ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯ ಆತಿಥ್ಯ ಆಫ್ರಿಕಾ ಖಂಡದ ಪಾಲಾಯಿತು. ನಿಷೇಧ ಕಳಚಿಕೊಂಡ ಒಂದೇ ದಶಕದಲ್ಲಿ ದಕ್ಷಿಣ ಆಫ್ರಿಕಾದ ಪ್ರಧಾನ ಆತಿಥ್ಯದಲ್ಲಿ 2003ರ ವಿಶ್ವಕಪ್ ನಡೆದದ್ದು ವಿಶೇಷ. ಜತೆಗೆ ಜಿಂಬಾಬ್ವೆ ಮತ್ತು ಕೀನ್ಯಾಗಳಿಗೂ ಕೆಲವು ಪಂದ್ಯಗಳ ಆತಿಥ್ಯ ಲಭಿಸಿತು.
ಸರ್ವಾಧಿಕ 14 ತಂಡಗಳು
ವಿಶ್ವಕಪ್ ಇತಿಹಾಸದಲ್ಲೇ ಸರ್ವಾಧಿಕ 14 ತಂಡಗಳು ಪಾಲ್ಗೊಂಡದ್ದು ಈ ಕೂಟದ ಹೆಗ್ಗಳಿಕೆ. ಕಳೆದ ಸೂಪರ್ ಸಿಕ್ಸ್ ಮಾದರಿಯಲ್ಲೇ ಪಂದ್ಯಾವಳಿಯನ್ನು ಆಯೋಜಿಸಲಾಯಿತು. ಒಟ್ಟು 54 ಪಂದ್ಯಗಳು ನಡೆದವು.
ಲೀಗ್ ಹಂತದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಸೇರಿದಂತೆ ಘಟಾನುಘಟಿ ತಂಡ ಗಳು ಉದುರಿ ಹೋದವು. ಪಾಕಿಸ್ಥಾನ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಆಘಾತಕಾರಿ ಸೋಲುಂಡು ಬಹಳ ಬೇಗ ನಿರ್ಗಮಿಸಿದವು. ಸಹ ಆತಿಥೇಯ ರಾಷ್ಟ್ರಗ ಳಾದ ಜಿಂಬಾಬ್ವೆ, ಕೀನ್ಯಾ ಸೂಪರ್ ಸಿಕ್ಸ್‌ಗೆ ನೆಗೆದದ್ದು ಅಚ್ಚರಿ. ಇನ್ನೂ ಮುಂದುವರಿದ ಕೀನ್ಯಾ ಸೆಮಿಫೈನಲಿಗೂ ಲಗ್ಗೆ ಹಾಕಿತು. ಅಲ್ಲಿ ಭಾರತಕ್ಕೆ ಶರಣಾಯಿತು.
ನೀರಸ ಪ್ರದರ್ಶನಕ್ಕೆ ಆಕ್ರೋಶ
ಕೂಟದಲ್ಲಿ ಸೌರವ್ ಗಂಗೂಲಿ ಸಾರಥ್ಯ ದ ಭಾರತ ನೀರಸ ಆರಂಭ ಕಂಡಾಗ ದೇಶ ದಲ್ಲಿ ಆಕ್ರೋಶ ಭುಗಿಲೆದ್ದಿತು. ಮೊದಲ ಪಂದ್ಯದಲ್ಲೇ ದುರ್ಬಲ ನೆದರ್ಲೆಂಡ್ ವಿರುದ್ಧ 204ಕ್ಕೆ ಆಲೌಟ್ ಆಗಿತ್ತು. 68 ರನ್ನುಗಳಿಂದ ಭಾರತ ಜಯಿಸಿತಾದರೂ ತಂಡದ ಮೇಲಿನ ನಂಬಿಕೆ ಹೊರಟು ಹೋಗಿತ್ತು. ಬಳಿಕ ಆಸ್ಟ್ರೇಲಿಯಕ್ಕೆ 9 ವಿಕೆಟ್‌ಗಳಿಂದ ಶರಣಾಯಿತು. ದ್ರಾವಿಡ್ ಸಹಿತ ತಂಡದ ಆಟಗಾರರು ದೇಶದ ಕ್ರಿಕೆಟ್ ಅಭಿಮಾನಿಗಳಲ್ಲಿ “ಸಮಾಧಾನದಿಂದಿರಿ, ನಿಮ್ಮ ಬೆಂಬಲ ನಮ್ಮ ಮೇಲಿರಲಿ’ ಎಂದು ಮನವಿ ಮಾಡಿಕೊಂಡ ವಿದ್ಯಮಾನವೂ ಸಂಭವಿಸಿತು.
ಇಲ್ಲಿಂದ ಮುಂದೆ ಛಲಕ್ಕೆ ಬಿದ್ದಂತೆ ಆಡಿದ ಭಾರತ ಫೈನಲ್ ತನಕ ಸೋಲಿನ ಮುಖವನ್ನೇ ಕಾಣದೆ ಮುನ್ನುಗ್ಗಿ ದ್ದೊಂದು ಅಸಾಮಾನ್ಯ ಸಾಧನೆಯೇ ಆಗಿದೆ. ಇಂಗ್ಲೆಂಡ್, ಪಾಕಿಸ್ಥಾನ ಸೇರಿದಂತೆ ಎದುರಾದ ಎಲ್ಲ ತಂಡಗಳನ್ನೂ ಮಣ್ಣು ಮುಕ್ಕಿಸಿತು. ಆದರೆ ಫೈನಲ್‌ನಲ್ಲಿ ಮಾತ್ರ ಗಂಗೂಲಿ ಪಡೆಯ ಕಾರ್ಯತಂತ್ರ ಕೈಕೊಟ್ಟಿತು.
2003 ವಿಶ್ವಕಪ್ ಫೈನಲ್
ಜೊಹಾನ್ಸ್‌ಬರ್ಗ್, ಮಾ. 23
ಆಸ್ಟ್ರೇಲಿಯ
ಆ್ಯಡಂ ಗಿಲ್‌ಕ್ರಿಸ್ಟ್ ಸಿ ಸೆಹವಾಗ್ ಬಿ ಹರ್ಭಜನ್ 57
ಮ್ಯಾಥ್ಯೂ ಹೇಡನ್ ಸಿ ದ್ರಾವಿಡ್ ಬಿ ಹರ್ಭಜನ್ 37
ರಿಕಿ ಪಾಂಟಿಂಗ್ ಔಟಾಗದೆ 140
ಡೆಮೀನ್ ಮಾರ್ಟಿನ್ ಔಟಾಗದೆ 88
ಇತರ 37
ಒಟ್ಟು (2 ವಿಕೆಟಿಗೆ) 359
ವಿಕೆಟ್ ಪತನ: 1-105, 2-125.
ಬೌಲಿಂಗ್:
ಜಹೀರ್ ಖಾನ್ 7-0-67-0
ಜಾವಗಲ್ ಶ್ರೀನಾಥ್ 10-0-87-0
ಆಶಿಷ್ ನೆಹ್ರಾ 10-0-57-0
ಹರ್ಭಜನ್ ಸಿಂಗ್ 8-0-49-2
ವೀರೇಂದ್ರ ಸೆಹವಾಗ್ 3-0-14-0
ಸಚಿನ್ ತೆಂಡುಲ್ಕರ್ 3-0-20-0
ದಿನೇಶ್ ಮೊಂಗಿಯ 7-0-39-0
ಯುವರಾಜ್ ಸಿಂಗ್ 2-0-12-0
ಭಾರತ
ಸಚಿನ್ ತೆಂಡುಲ್ಕರ್ ಸಿ ಮತ್ತು ಬಿ ಮೆಕ್‌ಗ್ರಾತ್ 4
ವೀರೇಂದ್ರ ಸೆಹವಾಗ್ ರನೌಟ್ 82
ಸೌರವ್ ಗಂಗೂಲಿ ಸಿ ಲೆಹ್ಮನ್ ಬಿ ಲೀ 24
ಮೊಹಮ್ಮದ್ ಕೈಫ್ ಸಿ ಗಿಲ್‌ಕ್ರಿಸ್ಟ್ ಬಿ ಮೆಕ್‌ಗ್ರಾತ್ 0
ರಾಹುಲ್ ದ್ರಾವಿಡ್ ಬಿ ಬಿಕೆಲ್ 47
ಯುವರಾಜ್ ಸಿಂಗ್ ಸಿ ಲೀ ಬಿ ಹಾಗ್ 24
ದಿನೇಶ್ ಮೊಂಗಿಯ ಸಿ ಮಾರ್ಟಿನ್ ಬಿ ಸೈಮಂಡ್ಸ್ 12
ಹರ್ಭಜನ್ ಸಿಂಗ್ ಸಿ ಮೆಕ್‌ಗ್ರಾತ್ ಬಿ ಸೈಮಂಡ್ಸ್ 7
ಜಹೀರ್ ಖಾನ್ ಸಿ ಲೇಹ್ಮನ್ ಬಿ ಮೆಕ್‌ಗ್ರಾತ್ 4
ಜಾವಗಲ್ ಶ್ರೀನಾಥ್ ಬಿ ಲೀ 1
ಆಶಿಷ್ ನೆಹ್ರಾ ಔಟಾಗದೆ 8
ಇತರ 21
ಒಟ್ಟು (39.2 ಓವರ್‌ಗಳಲ್ಲಿ ಆಲೌಟ್) 234
ವಿಕೆಟ್ ಪತನ: 1-4, 2-58, 3-59, 4-147, 5-187, 6-209, 7-223, 8-226, 9-226.
ಬೌಲಿಂಗ್:
ಗ್ಲೆನ್ ಮೆಕ್‌ಗ್ರಾತ್ 8.2-0-52-3
ಬ್ರೆಟ್ ಲೀ 7-1-31-2
ಬ್ರಾಡ್ ಹಾಗ್ 10-0-61-1
ಡ್ಯಾರನ್ ಲೇಹ್ಮನ್ 2-0-18-0
ಆ್ಯಂಡಿ ಬಿಕೆಲ್ 10-0-57-1
ಆ್ಯಂಡ್ರೂé ಸೈಮಂಡ್ಸ್ 2-0-7-2
ಪಂದ್ಯಶ್ರೇಷ್ಠ: ರಿಕಿ ಪಾಂಟಿಂಗ್
ಸರಣಿಶ್ರೇಷ್ಠ: ಸಚಿನ್ ತೆಂಡುಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.