ಚಹಲ್, ರೋಹಿತ್ ಕಮಾಲ್; ಭಾರತ ಜಯಭೇರಿ
ಟೀಮ್ ಇಂಡಿಯಾ ಗೆಲುವಿನ ಆರಂಭ ; ದಕ್ಷಿಣ ಆಫ್ರಿಕಾಕ್ಕೆ ಹ್ಯಾಟ್ರಿಕ್ ಸೋಲಿನ ಆಘಾತ
Team Udayavani, Jun 6, 2019, 6:00 AM IST
ಸೌತಾಂಪ್ಟನ್: ಹನ್ನೆರಡನೇ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಡವಾಗಿ ಕಣಕ್ಕಿಳಿದ ಭಾರತ ಗೆಲುವಿನ ಅಭಿಯಾನ ಆರಂಭಿಸಿದೆ. ಬುಧವಾರ ಇಲ್ಲಿನ “ರೋಸ್ ಬೌಲ್’ ಸ್ಟೇಡಿಯಂನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿ ದಕ್ಷಿಣ ಆಫ್ರಿಕಾವನ್ನು 6 ವಿಕೆಟ್‌ಗಳಿಂದ ಹೊಡೆದುರುಳಿಸಿದೆ. ಹ್ಯಾಟ್ರಿಕ್ ಸೋಲುಂಡ ಹರಿಣಗಳ ವರ್ಲ್ಡ್ಕಪ್ ಹಾದಿ ಇನ್ನಷ್ಟು ದುರ್ಗಮಗೊಂಡಿದೆ.
ಯಜುವೇಂದ್ರ ಚಹಲ್, ಜಸ್‌ಪ್ರೀತ್ ಬುಮ್ರಾ ಅವರ ಘಾತಕ ಬೌಲಿಂಗ್ ದಾಳಿ, ಆರಂಭಕಾರ ರೋಹಿತ್ ಶರ್ಮ ಅವರ ಶತಕ ವೈಭವ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. ಚಹಲ್ 4 ವಿಕೆಟ್, ಬುಮ್ರಾ 2 ವಿಕೆಟ್ ಉಡಾಯಿಸಿದರು. ರೋಹಿತ್ ಶರ್ಮ ಅಜೇಯ 122 ರನ್ ಬಾರಿಸಿ 23ನೇ ಶತಕದೊಂದಿಗೆ ಮೆರೆದರು.
ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ 9 ವಿಕೆಟಿಗೆ ಕೇವಲ 227 ರನ್ ಗಳಿಸಿದರೆ, ಭಾರತ 47.3 ಓವರ್‌ಗಳಲ್ಲಿ 4 ವಿಕೆಟಿಗೆ 230 ರನ್ ಬಾರಿಸಿ ಮೆರೆದಾಡಿತು.
ರೋಹಿತ್ ಶತಕದ ಅಬ್ಬರ
ಚೇಸಿಂಗ್ ವೇಳೆ ಧವನ್ (8) ಅವರನ್ನು ಭಾರತ ಬೇಗನೇ ಕಳೆದುಕೊಂಡಿತು. ನಾಯಕ ಕೊಹ್ಲಿ 18ರ ಗಡಿ ದಾಟಲಿಲ್ಲ. ಇವರಿಬ್ಬರ ವಿಕೆಟ್ 54 ರನ್ನಿಗೆ ಉರುಳಿತು. ಆದರೆ ರೋಹಿತ್ ಶರ್ಮ ಕ್ರೀಸಿಗೆ ಅಂಟಿಕೊಂಡು ಆಫ್ರಿಕಾ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತ ಹೋದರು. 23ನೇ ಶತಕದೊಂದಿಗೆ ಭಾರತೀಯರ ವಿಶ್ವಕಪ್ ಸಂಭ್ರಮವನ್ನು ಹೆಚ್ಚಿಸಿದರು. ಭಾರತದ ಶತಕವೀರರ ಹಾದಿಯಲ್ಲಿ ರೋಹಿತ್‌ಗೆ ಈಗ 3ನೇ ಸ್ಥಾನ. 22 ಶತಕ ಬಾರಿಸಿದ ಗಂಗೂಲಿ 4ಕ್ಕೆ ಇಳಿದರು. ಇದು ಚೇಸಿಂಗ್ ವೇಳೆ ರೋಹಿತ್ ದಾಖಲಿಸಿದ 11ನೇ ಸೆಂಚುರಿ.
ರೋಹಿತ್ ಶರ್ಮ 144 ಎಸೆತಗಳಿಂದ 122 ರನ್ ಬಾರಿಸಿ ವಿಜೃಂಭಿಸಿದರು. ಸಿಡಿಸಿದ್ದು 13 ಬೌಂಡರಿ, 2 ಸಿಕ್ಸರ್. ಕೆ.ಎಲ್. ರಾಹುಲ್ 26, ಧೋನಿ 34 ರನ್ ಮಾಡಿ ರೋಹಿತ್‌ಗೆ ಉತ್ತಮ ಬೆಂಬಲವಿತ್ತರು.
ದಟ್ಟ ಮೋಡ ಕವಿ ವಾತಾವರಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾವನ್ನು ಭಾರತದ ಬೌಲರ್‌ಗಳು ಕಾಡುತ್ತಲೇ ಹೋದರು. ಆರಂಭ ದಲ್ಲಿ ಜಸ್‌ಪ್ರೀತ್ ಬುಮ್ರಾ, ಬಳಿಕ ಯಜುವೇಂದ್ರ ಚಹಲ್ ಘಾತಕ ದಾಳಿ ನಡೆಸಿ ಹರಿಣಗಳನ್ನು ಕಟ್ಟಿಹಾಕಿದರು. ಬುಮ್ರಾ 35ಕ್ಕೆ 2 ವಿಕೆಟ್ ಕಿತ್ತರೆ, ಚಹಲ್ 51 ರನ್ನಿಗೆ 4 ವಿಕೆಟ್ ಹಾರಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಇಬ್ಬರಿಗೂ ಇದು ಮೊದಲ ವಿಶ್ವಕಪ್ ಪಂದ್ಯವಾಗಿತ್ತು.
ಮೊಹಮ್ಮದ್ ಶಮಿ ಬದಲು ಅವಕಾಶ ಪಡೆದ ಭುವನೇಶ್ವರ್ ಕುಮಾರ್ ದ್ವಿತೀಯ ಸ್ಪೆಲ್ ದಾಳಿಯಲ್ಲಿ 2 ವಿಕೆಟ್ ಉರುಳಿಸಿದರು. ಉಳಿದೊಂದು ವಿಕೆಟ್ ಕುಲದೀಪ್ ಯಾದವ್ ಪಾಲಾಯಿತು. ಪಾಂಡ್ಯ, ಜಾಧವ್ ಕೂಡ ಪರಿಣಾಮಕಾರಿ ಬೌಲಿಂಗ್ ನಡೆಸಿದರು.
ದಕ್ಷಿಣ ಆಫ್ರಿಕಾ ಸರದಿಯಲ್ಲಿ ಯಾರಿಂ ದಲೂ ಅರ್ಧ ಶತಕ ದಾಖಲಾಗಲಿಲ್ಲ. 8ನೇ ಕ್ರಮಾಂಕದಲ್ಲಿ ಬಂದು 42 ರನ್ ಮಾಡಿದ ಆಲ್‌ರೌಂಡರ್ ಕ್ರಿಸ್ ಮಾರಿಸ್ ಅವರದೇ ಹೆಚ್ಚಿನ ಗಳಿಕೆ (1 ಬೌಂಡರಿ, 2 ಸಿಕ್ಸರ್). ಮತ್ತೋರ್ವ ಆಲ್‌ರೌಂಡರ್ ಫೆಲುಕ್ವಾಯೊ 61 ಎಸೆತ ನಿಭಾಯಿಸಿ 34 ರನ್ ಮಾಡಿದರು (2 ಬೌಂಡರಿ, 1 ಸಿಕ್ಸರ್). ನಾಯಕ ಡು ಪ್ಲೆಸಿಸ್ ಗಳಿಕೆ 38 ರನ್ (54 ಎಸೆತ, 4 ಬೌಂಡರಿ).
ಆಫ್ರಿಕಾ ಓಪನಿಂಗ್ ವೈಫಲ್ಯ
ಜಸ್‌ಪ್ರೀತ್ ಬುಮ್ರಾ ಅವರ ಆರಂಭಿಕ ಸ್ಪೆಲ್ ಅತ್ಯಂತ ಘಾತಕವಾಗಿತ್ತು. ಇದರ ಮರ್ಮ ಅರಿಯದ ಹಾಶಿಮ್ ಆಮ್ಲ (6) ಸ್ಲಿಪ್ ಫೀಲ್ಡರ್ ರೋಹಿತ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಎಡಗೈ ಆಟಗಾರ ಡಿ ಕಾಕ್ (10) ಕೂಡ ಬುಮ್ರಾ ಎಸೆತದಲ್ಲಿ ಸ್ಲಿಪ್‌ನಲ್ಲೇ ಕ್ಯಾಚ್ ಕೊಟ್ಟು ವಾಪಸಾದರು. 24 ರನ್ನಿಗೆ 2 ವಿಕೆಟ್ ಬಿತ್ತು. ಪವರ್ ಪ್ಲೇ ಅವಧಿಯಲ್ಲಿ ಗಳಿಸಲು ಸಾಧ್ಯವಾದದ್ದು 34 ರನ್ ಮಾತ್ರ.
ಆಗ ಜತೆಗೂಡಿದ ನಾಯಕ ಡು ಪ್ಲೆಸಿಸ್-ವಾನ್ ಡರ್ ಡುಸೆನ್ ಎಚ್ಚರಿಕೆಯ ಆಟವಾಡಿ ತಂಡವನ್ನು ಮೇಲೆತ್ತಲು ಪ್ರಯತ್ನಿಸಿದರು. ಸ್ಕೋರ್ 78ರ ತನಕ ಏರಿತು. ಆದರೆ ಇವರಿಬ್ಬರನ್ನೂ ಚಹಲ್ ಒಂದೇ ಓವರಿನಲ್ಲಿ ಉರುಳಿಸಿ ಆಫ್ರಿಕಾವನ್ನು ಸಂಕಟಕ್ಕೆ ತಳ್ಳಿದರು. ಇಬ್ಬರೂ ಕ್ಲೀನ್‌ಬೌಲ್ಡ್ ಆಗಿದ್ದರು. 80 ರನ್ನಿಗೆ 4 ವಿಕೆಟ್ ಬಿತ್ತು. ಫಾರ್ಮ್ನಲ್ಲಿಲ್ಲದ ಡ್ಯುಮಿನಿ (3) ಕುಲದೀಪ್ ಮೋಡಿಗೆ ಸಿಲುಕಿದರು.
ಮಿಲ್ಲರ್-ಫೆಲುಕ್ವಾಯೊ 46 ರನ್ ಪೇರಿಸಿದ ಬಳಿಕ ಮಾರಿಸ್-ರಬಾಡ ಜೋಡಿ ಪ್ರಯತ್ನದಿಂದ ತಂಡದ ಮೊತ್ತ ಇನ್ನೂರರ ಗಡಿ ದಾಟಿತು.
ಸ್ಕೋರ್ ಪಟ್ಟಿ
ದಕ್ಷಿಣ ಆಫ್ರಿಕಾ
ಹಾಶಿಮ್ ಆಮ್ಲ ಸಿ ರೋಹಿತ್ ಬಿ ಬುಮ್ರಾ 6
ಕ್ವಿಂಟಾನ್ ಡಿ ಕಾಕ್ ಸಿ ಕೊಹ್ಲಿ ಬಿ ಬುಮ್ರಾ 10
ಫಾ ಡು ಪ್ಲೆಸಿಸ್ ಬಿ ಚಹಲ್ 38
ವಾನ್ ಡರ್ ಡುಸೆನ್ ಬಿ ಚಹಲ್ 22
ಡೇವಿಡ್ ಮಿಲ್ಲರ್ ಸಿ ಮತ್ತು ಬಿ ಚಹಲ್ 31
ಜೆಪಿ ಡ್ಯುಮಿನಿ ಎಲ್‌ಬಿಡಬ್ಲ್ಯುಬಿ ಕುಲದೀಪ್ 3
ಆ್ಯಂಡಿಲ್ ಫೆಲುಕ್ವಾಯೊ ಸ್ಟಂಪ್ಡ್ ಧೋನಿ ಬಿ ಚಹಲ್ 34
ಕ್ರಿಸ್ ಮಾರಿಸ್ ಸಿ ಕೊಹ್ಲಿ ಬಿ ಭುವನೇಶ್ವರ್ 42
ಕಾಗಿಸೊ ರಬಾಡ ಔಟಾಗದೆ 31
ಇಮ್ರಾನ್ ತಾಹಿರ್ ಸಿ ಜಾಧವ್ ಬಿ ಭುವನೇಶ್ವರ್ 0
ಇತರ 10
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 227
ವಿಕೆಟ್ ಪತನ: 1-11, 2-24, 3-78, 4-80, 5-89, 6-135, 7-158, 8-224, 9-227.
ಬೌಲಿಂಗ್
ಭುವನೇಶ್ವರ್ ಕುಮಾರ್ 10-0-44-2
ಜಸ್‌ಪ್ರೀತ್ ಬುಮ್ರಾ 10-1-35-2
ಹಾರ್ದಿಕ್ ಪಾಂಡ್ಯ 6-0-31-0
ಕುಲದೀಪ್ ಯಾದವ್ 10-0-46-1
ಯಜುವೇಂದ್ರ ಚಹಲ್ 10-0-51-4
ಕೇದಾರ್ ಜಾಧವ್ 4-0-16-0
ಭಾರತ
ಶಿಖರ್ ಧವನ್ ಸಿ ಡಿ ಕಾಕ್ ಬಿ ರಬಾಡ 8
ರೋಹಿತ್ ಶರ್ಮ ಔಟಾಗದೆ 122
ವಿರಾಟ್ ಕೊಹ್ಲಿ ಸಿ ಡಿ ಕಾಕ್ ಬಿ ಫೆಲುಕ್ವಾಯೊ 18
ಕೆ.ಎಲ್. ರಾಹುಲ್ ಸಿ ಡು ಪ್ಲೆಸಿಸ್ ಬಿ ರಬಾಡ 26
ಎಂ.ಎಸ್. ಧೋನಿ ಸಿ ಮತ್ತು ಬಿ ಮಾರಿಸ್ 34
ಹಾರ್ದಿಕ್ ಪಾಂಡ್ಯ ಔಟಾಗದೆ 15
ಇತರ 7
ಒಟ್ಟು (47.3 ಓವರ್‌ಗಳಲ್ಲಿ 4 ವಿಕೆಟಿಗೆ) 230
ವಿಕೆಟ್ ಪತನ: 1-13, 2-54, 3-139, 4-213.
ಬೌಲಿಂಗ್:
ಇಮ್ರಾನ್ ತಾಹಿರ್ 10-0-58-0
ಕಾಗಿಸೊ ರಬಾಡ 10-1-39-2
ಕ್ರಿಸ್ ಮಾರಿಸ್ 10-3-36-1
ಆ್ಯಂಡಿಲ್ ಫೆಲುಕ್ವಾಯೊ 8.3-0-40-1
ತಬ್ರೇಜ್ ಶಂಸಿ 9-0-54-0
ಪಂದ್ಯಶ್ರೇಷ್ಠ ರೋಹಿತ್ ಶರ್ಮ
1992 ಅಡಿಲೇಡ್
ಆಫ್ರಿಕಾಕ್ಕೆ 6 ವಿಕೆಟ್ ಜಯ
ಇದು ಮಳೆಪೀಡಿತ ಪಂದ್ಯ. ತಲಾ 30 ಓವರ್‌ಗಳಿಗೆ ಸೀಮಿತ ಗೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 6 ವಿಕೆಟಿಗೆ 180 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 29.1 ಓವರ್‌ಗಳಲ್ಲಿ 4 ವಿಕೆಟಿಗೆ 181 ರನ್ ಬಾರಿಸಿ ಗೆದ್ದು
ಬಂದಿತು.
1999 ಬ್ರೈಟನ್
ಆಫ್ರಿಕಾಕ್ಕೆ 4 ವಿಕೆಟ್ ಜಯ
ಇಂಗ್ಲೆಂಡ್‌ನಲ್ಲಿ ನಡೆದ ಈ ವಿಶ್ವಕಪ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 5 ವಿಕೆಟಿಗೆ 253 ರನ್ ಮಾಡಿತು. ಆರಂಭಿಕ ಕುಸಿತಕ್ಕೆ ಸಿಲುಕಿದ ಬಳಿಕ ಚೇತರಿಕೆ ಕಂಡ ದಕ್ಷಿಣ ಆಫ್ರಿಕಾ 47.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತು.
2011 ನಾಗ್ಪುರ
ಆಫ್ರಿಕಾಕ್ಕೆ 3 ವಿಕೆಟ್ ಜಯ
ಭಾರತ 2ನೇ ಸಲ ಚಾಂಪಿ ಯನ್ ಆದ ವಿಶ್ವಕಪ್ ಪಂದ್ಯಾವಳಿ ಇದು. ನಾಗ್ಪುರದ ಈ ಮುಖಾ ಮುಖೀಯಲ್ಲಿ ತೆಂಡುಲ್ಕರ್ ಶತಕ ಸಾಹಸದಿಂದ (111) ಭಾರತ 296 ರನ್ ಮಾಡಿತು. ಹರಿಣಗಳ ಪಡೆ 2 ಎಸೆತ ಉಳಿದಿರುವಾಗ 7 ವಿಕೆಟಿಗೆ 300 ರನ್ ಪೇರಿಸಿ ಗೆದ್ದು ಬಂತು.
2015 ಮೆಲ್ಬರ್ನ್
ಭಾರತಕ್ಕೆ 130 ರನ್ ಜಯ
ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಒಲಿದ ಏಕೈಕ ಗೆಲುವಿನ ತಾಣ “ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್’. ಶಿಖರ್ ಧವನ್ 137 ಬಾರಿಸಿದರು. ಭಾರತದ ಮೊತ್ತ 7ಕ್ಕೆ 307ರ ತನಕ ಏರಿತು. ತೀವ್ರ ಬ್ಯಾಟಿಂಗ್ ಕುಸಿತ ಅನುಭವಿಸಿದ ದಕ್ಷಿಣ ಆಫ್ರಿಕಾ 40. 2 ಓವರ್‌ಗಳಲ್ಲಿ 177ಕ್ಕೆ ಕುಸಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.