ಪಾಕ್-ಲಂಕಾ: ಏಶ್ಯನ್ ತಂಡಗಳ ಮೇಲಾಟ
ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಎಲ್ಲ 7 ಪಂದ್ಯ ಗೆದ್ದಿರುವ ಪಾಕಿಸ್ಥಾನ!
Team Udayavani, Jun 7, 2019, 6:00 AM IST
ಬ್ರಿಸ್ಟಲ್: ವಿಶ್ವಕಪ್ ಕೂಟದ ಶುಕ್ರವಾರದ ಸ್ಪರ್ಧೆ ಏಶ್ಯನ್ ತಂಡಗಳೆರಡರ ಮೇಲಾಟಕ್ಕೆ ಸಾಕ್ಷಿ ಯಾಗಲಿದೆ. ಬ್ರಿಸ್ಟಲ್‌ನಲ್ಲಿ ಪಾಕಿಸ್ಥಾನ ಮತ್ತು ಶ್ರೀಲಂಕಾ ಮುಖಾಮುಖೀಯಾಗಲಿದ್ದು, ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯವಾಗಿದೆ.
ಇಲ್ಲಿ ಹೆಚ್ಚಿನ ಆತ್ಮವಿಶ್ವಾಸದಿಂದ ಕಣಕ್ಕಿಳಿಯುವ ತಂಡವೆಂದರೆ ಪಾಕಿಸ್ಥಾನ. ಇದಕ್ಕೆ 2 ಕಾರಣಗಳಿವೆ. ಒಂದು, ವೆಸ್ಟ್ ಇಂಡೀಸ್ ವಿರುದ್ಧ 105 ರನ್ನಿಗೆ ಕುಸಿದ ಬಳಿಕ ಬಲಿಷ್ಠ ಇಂಗ್ಲೆಂಡ್ ವಿರುದ್ಧ 348 ರನ್ ಪೇರಿಸಿ ಗೆಲುವಿನ ಹಳಿ ಏರಿದ್ದು; ಇನ್ನೊಂದು, ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಅಜೇಯ ದಾಖಲೆ ಕಾಯ್ದುಕೊಂಡು ಬಂದದ್ದು.
ಹೌದು, ವಿಶ್ವಕಪ್ ಇತಿಹಾಸದಲ್ಲಿ ಭಾರತದೆ ದುರು ಪಾಕಿಸ್ಥಾನ ಈವರೆಗೆ ಹೇಗೆ ಗೆಲ್ಲಲಿಲ್ಲವೋ, ಅದೇ ರೀತಿ ಪಾಕಿಸ್ಥಾನದ ಎದುರು ಶ್ರೀಲಂಕಾ ಈವ ರೆಗೆ ಗೆಲುವಿನ ಖಾತೆ ತೆರೆದಿಲ್ಲ. 1975-2011ರ ಅವಧಿಯ ಆಡಿದ ಏಳೂ ಪಂದ್ಯ ಗಳಲ್ಲಿ ಪಾಕಿಸ್ಥಾನ ಲಂಕೆಯನ್ನು ಮಣಿಸಿದೆ. ಇದನ್ನು ಎಂಟಕ್ಕೆ ವಿಸ್ತರಿಸುವ ಹಾದಿಯೊಂದು ಪಾಕ್ ಮುಂದಿದೆ.
ಇಂಗ್ಲೆಂಡ್ ವಿರುದ್ಧದ ತೋರಿದ ನಿರ್ವಹಣೆ ಯನ್ನೇ ಪುನರಾವರ್ತಿಸಿದರೆ ಶ್ರೀಲಂಕಾವನ್ನು ಸೋಲಿಸುವುದು ಪಾಕಿಸ್ಥಾನಕ್ಕೆ ದೊಡ್ಡ ಸಮಸ್ಯೆ ಎನಿಸದು. ಆದರೆ ಆಂಗ್ಲರ ಎದುರು ಪಾಕಿಸ್ಥಾನ ಮಿಂಚಿದ್ದು ಬ್ಯಾಟಿಂಗಿನಲ್ಲಿ ಮಾತ್ರ. ಉಳಿದಂತೆ ಬೌಲಿಂಗ್ ಹಾಗೂ ಫೀಲ್ಡಿಂಗ್ ತೀರಾ ಕಳಪೆಯಾಗಿತ್ತು. ಇದರ ಲಾಭವೆತ್ತಿದರೆ ಕರುಣರತ್ನೆ ಪಡೆಗೆ ಮೇಲುಗೈ ಸಾಧ್ಯತೆ ಇಲ್ಲದಿಲ್ಲ.
ಲಂಕೆಗೆ ಕಷ್ಟದ ಗೆಲುವು
ಶ್ರೀಲಂಕಾ ಕೂಡ ಮೊದಲ ಪಂದ್ಯದಲ್ಲಿ ಶೋಚನೀಯ ಪ್ರದರ್ಶನ ನೀಡಿದ ಬಳಿಕ ಹಳಿ ಏರಿದ ತಂಡ. ನ್ಯೂಜಿಲ್ಯಾಂಡ್ ವಿರುದ್ಧ ಎದುರಾದದ್ದು 10 ವಿಕೆಟ್‌ಗಳ ಭಾರೀ ಸೋಲು. ಇಲ್ಲಿನ ಸೇಡನ್ನು ಅಫ್ಘಾನಿಸ್ಥಾನ ವಿರುದ್ಧ ತೀರಿಸಿಕೊಂಡಿತು. ಆದರೆ ಇದೇನೂ ಅಧಿಕಾರಯುತ ಗೆಲುವಲ್ಲ. ತೀವ್ರ ಬ್ಯಾಟಿಂಗ್ ಕುಸಿತ ಲಂಕೆಯನ್ನು ಚಿಂತಿಸುವಂತೆ ಮಾಡಿದೆ. ಜತೆಗೆ ಅಫ್ಘಾನ್ ಬ್ಯಾಟಿಂಗ್ ದೌರ್ಬಲ್ಯದ ಪಾಲೂ ಇತ್ತು!
ಸಂಭಾವ್ಯ ತಂಡಗಳು
ಶ್ರೀಲಂಕಾ: ದಿಮುತ್ ಕರುಣರತ್ನೆ (ನಾಯಕ), ಕುಸಲ್ ಪೆರೆರ, ಲಹಿರು ತಿರಿಮನ್ನೆ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವ, ತಿಸರ ಪೆರೆರ, ಇಸುರು ಉದಾನ, ಸುರಂಗ ಲಕ್ಮಲ್, ಲಸಿತ ಮಾಲಿಂಗ, ನುವಾನ್ ಪ್ರದೀಪ್.
ಪಾಕಿಸ್ಥಾನ: ಇಮಾಮ್ ಉಲ್ ಹಕ್, ಫಕಾರ್ ಜಮಾನ್, ಬಾಬರ್ ಆಜಂ, ಹ್ಯಾರಿಸ್ ಸೊಹೈಲ್, ಸಫìರಾಜ್ ಅಹ್ಮದ್ (ನಾಯಕ), ಮೊಹಮ್ಮದ್ ಹಫೀಜ್, ಇಮಾದ್ ವಾಸಿಮ್, ಶಾದಾಬ್ ಖಾನ್, ಹಸನ್ ಅಲಿ, ವಹಾಬ್ ರಿಯಾದ್, ಮೊಹಮ್ಮದ್ ಆಮಿರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.