ಚಾಂಪಿಯನ್ನರ ಆಟಕ್ಕೆ ತಲೆ ಬಾಗಿದ ವೆಸ್ಟ್ ಇಂಡೀಸ್
38ಕ್ಕೆ 4 ವಿಕೆಟ್ ಉದುರಿದ ಬಳಿಕ 288ರ ತನಕ ಸಾಗಿದ ಕಾಂಗರೂ ಓಟ;8ನೇ ಕ್ರಮಾಂಕದಲ್ಲಿ ಬಂದು ವಿಶ್ವಕಪ್ ದಾಖಲೆ ಬರೆದ ಕೋಲ್ಟರ್ ನೈಲ್
Team Udayavani, Jun 7, 2019, 6:00 AM IST
ನಾಟಿಂಗ್‌ಹ್ಯಾಮ್: ವೆಸ್ಟ್ ಇಂಡೀಸಿನ ಘಾತಕ ದಾಳಿಗೆ ಸಿಲುಕಿ ಅಗ್ರ ಕ್ರಮಾಂಕದಲ್ಲಿ ತೀವ್ರ ಕುಸಿತ ಅನುಭವಿಸಿದ ಆಸ್ಟ್ರೇಲಿಯ ಚಾಂಪಿಯನ್ನರ ಆಟದ ಮೂಲಕ ತಿರುಗಿ ಬಿದ್ದಿದೆ. ನಾಟಿಂಗ್‌ಹ್ಯಾಮ್‌ನಲ್ಲಿ ಸಾಗಿದ ಗುರುವಾರದ ವಿಶ್ವಕಪ್ ಮುಖಾಮುಖೀಯಲ್ಲಿ 15 ರನ್ನುಗಳ ಗೆಲುವನ್ನು ಒಲಿಸಿಕೊಂಡಿದೆ.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 8ನೇ ಓವರ್ ವೇಳೆ 38 ರನ್ ಆಗುವಷ್ಟರಲ್ಲಿ 4 ವಿಕೆಟ್ ಉದುರಿಸಿಕೊಂಡು ಚಿಂತಾಜನಕ ಸ್ಥಿತಿ ತಲುಪಿತ್ತು. ಆದರೆ ಉಳಿದ 6 ವಿಕೆಟ್‌ಗಳ ನೆರವಿನಿಂದ ಭರ್ತಿ 250 ರನ್ ಪೇರಿಸಿ 288ಕ್ಕೆ ಆಲೌಟ್ ಆಯಿತು. ಇದು 50 ರನ್ನಿಗೂ ಕಡಿಮೆ ಮೊತ್ತಕ್ಕೆ 4 ವಿಕೆಟ್ ಉರುಳಿದ ಬಳಿಕ ವಿಶ್ವಕಪ್ ಇನ್ನಿಂಗ್ಸ್ ಒಂದರಲ್ಲಿ ದಾಖಲಾದ 2ನೇ ಅತ್ಯಧಿಕ ಗಳಿಕೆ. 1983ರ ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಭಾರತ 257 ರನ್ ರಾಶಿ ಹಾಕಿದ್ದು ದಾಖಲೆ. ಅಂದು ಕಪಿಲ್ ಪಡೆ 9 ರನ್ನಿಗೆ 4 ವಿಕೆಟ್ ಕಳೆದುಕೊಂಡ ಬಳಿಕ 8 ವಿಕೆಟಿಗೆ 266 ರನ್ ಪೇರಿಸಿತ್ತು.
ಜವಾಬಿತ್ತ ವೆಸ್ಟ್ ಇಂಡೀಸ್ 9 ವಿಕೆಟಿಗೆ 273 ರನ್ ಹೊಡೆಯಿತು. ಹೋಪ್ ಮತ್ತು ಹೋಲ್ಡರ್ ಅರ್ಧ ಶತಕ ಬಾರಿಸಿದರೆ, ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ 5 ವಿಕೆಟ್ ಉಡಾಯಿಸಿ ಮೆರೆದರು.
ಸ್ಮಿತ್, ಕೋಲ್ಟರ್ ನೈಲ್ ಹೋರಾಟ
ಒಶೇನ್ ಥಾಮಸ್ ಮತ್ತು ಶೆಲ್ಡನ್ ಕಾಟ್ರೆಲ್ ಅವರ ಘಾತಕ ಸ್ಪೆಲ್‌ಗೆ ಆಸ್ಟ್ರೇಲಿಯ ಅಕ್ಷರಶಃ ತತ್ತರಿಸಿ ಹೋಯಿತು. ವಾರ್ನರ್, ಫಿಂಚ್, ಖ್ವಾಜಾ, ಮ್ಯಾಕ್ಸ್‌ವೆಲ್ ಬಳಿ ಉತ್ತರವೇ ಇರಲಿಲ್ಲ. ಆಸೀಸ್ ಮೊತ್ತ 150ರ ಗಡಿ ತಲುಪುವುದೂ ಅನುಮಾನವಿತ್ತು. ಆದರೆ ಈ ಹಂತದಲ್ಲಿ ಆಸೀಸ್ ಆಡಿದ್ದು ನಿಜವಾದ ಚಾಂಪಿಯನ್ನರ ಆಟ. ಮಾಜಿ ನಾಯಕ ಸ್ಟೀವನ್ ಸ್ಮಿತ್, ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಮತ್ತು ಬೌಲರ್ ನಥನ್ ಕೋಲ್ಟರ್ ನೈಲ್ ಸೇರಿಕೊಂಡು ಕೆರಿಬಿಯನ್ ದಾಳಿಯನ್ನು ಪುಡಿಗುಟ್ಟಿದರು.
ಸ್ಮಿತ್ 103 ಎಸೆತಗಳಿಂದ 73 ರನ್ (7 ಬೌಂಡರಿ) ಬಾರಿಸಿದರು. ಕ್ಯಾರಿ ಕಾಣಿಕೆ 55 ಎಸೆತಗಳಿಂದ 45 ರನ್ (7 ಬೌಂಡರಿ). ಆದರೆ ಇವರೆಲ್ಲರಿಗಿಂತ ಮಿಗಿಲಾದದ್ದು ನಥನ್ ಕೋಲ್ಟರ್ ನೈಲ್ ಅವರ ಅಸಾಮಾನ್ಯ ಬ್ಯಾಟಿಂಗ್ ಸಾಹಸ.
ಈವರೆಗಿನ 28 ಏಕದಿನ ಪಂದ್ಯಗಳಲ್ಲಿ ಒಂದೂ ಅರ್ಧ ಶತಕ ಬಾರಿಸದ, 34 ರನ್ ಗಡಿ ದಾಟದ ಕೋಲ್ಟರ್ ನೈಲ್, ತಂಡ ಆಪತ್ತಿಗೆ ಸಿಲುಕಿದಾಗ ಆಪತಾºಂಧವನ ಅವತಾರವೆತ್ತಿದರು. 60 ಎಸೆತಗಳಿಂದ 92 ರನ್ ಕೊಡುಗೆ ಸಲ್ಲಿಸಿದರು.
ಸ್ಕೋರ್ ಪಟ್ಟಿ
ಆಸ್ಟ್ರೇಲಿಯ
ಡೇವಿಡ್ ವಾರ್ನರ್ ಸಿ ಹೆಟ್‌ಮೈರ್ ಬಿ ಕಾಟ್ರೆಲ್ 3
ಆರನ್ ಫಿಂಚ್ ಸಿ ಹೋಪ್ ಬಿ ಥಾಮಸ್ 6
ಉಸ್ಮಾನ್ ಖ್ವಾಜಾ ಸಿ ಹೋಪ್ ಬಿ ರಸೆಲ್ 13
ಸ್ಟೀವನ್ ಸ್ಮಿತ್ ಸಿ ಕಾಟ್ರೆಲ್ ಬಿ ಥಾಮಸ್ 73
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಹೋಪ್ ಬಿ ಕಾಟ್ರೆಲ್ 0
ಸ್ಟೋಯಿನಿಸ್ ಸಿ ಪೂರನ್ ಬಿ ಹೋಲ್ಡರ್ 19
ಅಲೆಕ್ಸ್ ಕ್ಯಾರಿ ಸಿ ಹೋಪ್ ಬಿ ರಸೆಲ್ 45
ಕೋಲ್ಟರ್ ನೈಲ್ ಸಿ ಹೋಲ್ಡರ್ ಬಿ ಬ್ರಾತ್‌ವೇಟ್ 92
ಪ್ಯಾಟ್ ಕಮಿನ್ಸ್ ಸಿ ಕಾಟ್ರೆಲ್ ಬಿ ಬ್ರಾತ್‌ವೇಟ್ 2
ಮಿಚೆಲ್ ಸ್ಟಾರ್ಕ್ ಸಿ ಹೋಲ್ಡರ್ ಬಿ ಬ್ರಾತ್‌ವೇಟ್ 8
ಆ್ಯಡಂ ಝಂಪ ಔಟಾಗದೆ 0
ಇತರ 27
ಒಟ್ಟು (49 ಓವರ್‌ಗಳಲ್ಲಿ ಆಲೌಟ್) 288
ವಿಕೆಟ್ ಪತನ: 1-15, 2-26, 3-36, 4-38, 5-79, 6-147, 7-249, 8-268, 9-284.
ಬೌಲಿಂಗ್:
ಒಶೇನ್ ಥಾಮಸ್ 10-0-63-2
ಶೆಲ್ಡನ್ ಕಾಟ್ರೆಲ್ 9-0-56-2
ಆ್ಯಂಡ್ರೆ ರಸೆಲ್ 8-0-41-2
ಕಾರ್ಲೋಸ್ ಬ್ರಾತ್‌ವೇಟ್ 10-0-67-3
ಜಾಸನ್ ಹೋಲ್ಡರ್ 7-2-28-1
ಆ್ಯಶೆÉ ನರ್ಸ್ 5-0-31-0
ವೆಸ್ಟ್ ಇಂಡೀಸ್
ಕ್ರಿಸ್ ಗೇಲ್ ಎಲ್‌ಬಿಡಬ್ಲ್ಯು ಸ್ಟಾರ್ಕ್ 21
ಎವಿನ್ ಲೆವಿಸ್ ಸಿ ಸ್ಮಿತ್ ಬಿ ಕಮಿನ್ಸ್ 1
ಶೈ ಹೋಪ್ ಸಿ ಖ್ವಾಜಾ ಬಿ ಕಮಿನ್ಸ್ 68
ನಿಕೋಲಸ್ ಪೂರನ್ ಸಿ ಫಿಂಚ್ ಬಿ ಝಂಪ 40
ಶಿಮ್ರನ್ ಹೈಟ್‌ಮೈರ್ ರನೌಟ್ 21
ಜಾಸನ್ ಹೋಲ್ಡರ್ ಸಿ ಝಂಪ ಬಿ ಸ್ಟಾರ್ಕ್ 51
ಆ್ಯಂಡ್ರೆ ರಸೆಲ್ ಸಿ ಮ್ಯಾಕ್ಸ್‌ವೆಲ್ ಬಿ ಸ್ಟಾರ್ಕ್ 15
ಬ್ರಾತ್‌ವೇಟ್ ಸಿ ಫಿಂಚ್ ಬಿ ಸ್ಟಾರ್ಕ್ 16
ಆ್ಯಶೆÉ ನರ್ಸ್ ಔಟಾಗದೆ 19
ಶೆಲ್ಡನ್ ಕಾಟ್ರೆಲ್ ಬಿ ಸ್ಟಾರ್ಕ್ 1
ಒಶೇನ್ ಥಾಮಸ್ ಔಟಾಗದೆ 0
ಇತರ 20
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 273
ವಿಕೆಟ್ ಪತನ: 1-7, 2-31, 3-99, 4-149, 5-190, 6-216, 7-252, 8-252, 9-256.
ಬೌಲಿಂಗ್:
ಮಿಚೆಲ್ ಸ್ಟಾರ್ಕ್ 10-1-46-5
ಪ್ಯಾಟ್ ಕಮಿನ್ಸ್ 10-3-41-2
ನಥನ್ ಕೋಲ್ಟರ್ ನೈಲ್ 10-0-70-0
ಗ್ಲೆನ್ ಮ್ಯಾಕ್ಸ್‌ವೆಲ್ 6-1-31-0
ಆ್ಯಡಂ ಝಂಪ 10-0-58-1
ಮಾರ್ಕಸ್ ಸ್ಟೋಯಿನಿಸ್ 4-0-18-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.