ವಿಶ್ವಕಪ್ ಸಾಧನೆ
Team Udayavani, Jul 14, 2019, 5:57 AM IST
ಲಂಡನ್: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯು ಮೇ 30ರಂದು ಲೀಗ್ ಹಂತದ ಪಂದ್ಯಗಳು ಆರಂಭವಾಗಿ ಇದೀಗ ಪ್ರಶಸ್ತಿ ಸುತ್ತಿನ ಹಂತಕ್ಕೆ ಬಂದು ನಿಂತಿದೆ. ವಿಶ್ವಕಪ್ ಕೂಟದಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ನಲ್ಲಿ ಮುಖಾಮುಖೀಯಾಗುತ್ತಿರುವ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಮೊದಲ ವಿಶ್ವಕಪ್ ಕಿರೀಟಕ್ಕಾಗಿ ಸೆಣೆಸಾಟ ನಡೆಸಲಿದೆ. ಇಲ್ಲಿ ಯಾರೇ ಗೆದ್ದು ಬಂದರೂ ಮೊದಲ ಬಾರಿಗೆ ವಿಶ್ವಚಾಂಪಿಯನ್ ಆಗಿ ಮೂಡಿಬರಲಿದ್ದಾರೆ.
ಇಂಗ್ಲೆಂಡ್‌ಗೆ ನಾಲ್ಕನೇ ಫೈನಲ್
ಕ್ರಿಕೆಟ್ ಜನಕರೆಂಬ ಖ್ಯಾತಿ ಪಡೆದ ಆಂಗ್ಲರಿಗೆ ಇದು 4ನೇ ವಿಶ್ವಕಪ್ ಫೈನಲ್. ಆದರೆ ಈ ಹಿಂದಿನ ಮೂರು ವಿಶ್ವಕಪ್ (1979, 1987, 1992) ನ ಫೈನಲ್‌ನಲ್ಲಿÉ ಸೋತು ಕಪ್ ಗೆಲ್ಲುವ ಅವಕಾಶದಿಂದ ಇಂಗ್ಲೆಂಡ್ ವಂಚಿತವಾಗಿತ್ತು. ಆದರೆ ಈ ಬಾರಿ ಹೇಗಾದರೂ ಕಪ್‌ಗೆ ಮುತ್ತಿಡಲು ಮಾರ್ಗನ್ ಪಡೆ ಪಣ ತೊಟ್ಟಿದೆ.
ನ್ಯೂಜಿಲ್ಯಾಂಡ್‌ಗೆ 2ನೇ ಫೈನಲ್
ಕಿವೀಸ್‌ಗೆ ಇದು ಸತತ 2ನೇ ವಿಶ್ವಕಪ್ ಫೈನಲ್. 2015ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೋತು ಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ಆದರೆ ಈ ಬಾರಿ ಅದೃಷ್ಟದ ಬಲದಿಂದ ಫೈನಲ್‌ಗೆ ತಲುಪಿದ ನ್ಯೂಜಿಲ್ಯಾಂಡ್ ಹಿಂದಿನ ತಪ್ಪನ್ನು ಪುನರಾವರ್ತಿಸದೆ ಕಪ್ ಗೆಲ್ಲುವ ಯೋಜನೆ ಹಾಕಿಕೊಂಡಿದೆ.
ಪ್ರಮುಖ ಆಟಗಾರರ ಪೈಪೋಟಿ
ಜಾಸನ್ ರಾಯ್- ಮಾರ್ಟಿನ್ ಗಪ್ಟಿಲ್
ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರರಾಗಿರುವ ಜಾಸನ್ ರಾಯ್ ಕೂಟದ ಎಲ್ಲ ಪಂದ್ಯಗಳಲ್ಲೂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಅತ್ಯಧಿಕ ರನ್ ಗಳಿಸಿದ್ದ ನ್ಯೂಜಿಲ್ಯಾಂಡಿನ ಆರಂಭಕಾರ ಮಾರ್ಟಿನ್ ಗಪ್ಟಿಲ್ ಈ ಬಾರಿ ವೈಫಲ್ಯ ಅನುಭವಿಸಿದ್ದಾರೆ. ಆಡಿದ ಪ್ರತಿ ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿದ್ದರಿಂದ ಅವರ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಆದರೆ ಇದುವರೆಗೂ ಸ್ಫೋಟಕ ಬ್ಯಾಟಿಂಗ್ ನಡೆಸದ ಗಪ್ಟಿಲ್ ಫೈನಲ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದಲ್ಲಿ ಪಂದ್ಯದ ಗತಿಯೇ ಬದಲಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ರಾಯ್ ಮತ್ತು ಗಪ್ಟಿಲ್ ಅವರ ಬ್ಯಾಟಿಂಗ್ ಪಂದ್ಯದ ಪ್ರಮುಖ ಆಕರ್ಷಣೆಯಾಗಿದೆ.
ಮ್ಯಾಟ್ ಹೆನ್ರಿ- ಕ್ರಿಸ್ ವೋಕ್ಸ್
ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಘಾತಕ ಬೌಲಿಂಗ್ ನಡೆಸಿದ ಮ್ಯಾಟ್ ಹೆನ್ರಿ ಮತ್ತು ಆಸ್ಟ್ರೇಲಿಯ ವಿರುದ್ಧದ 2ನೇ ಸೆಮಿಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕ್ರಿಸ್ ವೋಕ್ಸ್ ಫೈನಲ್ ಪಂದ್ಯದ ಪ್ರಮುಖ ಬೌಲಿಂಗ್ ಆಕರ್ಷಣೆಯಾಗಿದ್ದಾರೆ. ಫೈನಲ್‌ನಲ್ಲಿಯೂ ಇವರಿಂದ ಘಾತಕ ಸ್ಪೆಲ್ ನಡೆಯುವುದೇ ಎನ್ನುವುದು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.