ವಿಶ್ವಕಪ್: ಇಂದಿನಿಂದ ಅಭ್ಯಾಸ ಪಂದ್ಯಗಳ ಕಲರವ
ನೆಟ್ ಬೌಲರ್‌ಗಳ ನೆರವು ; ಭಾರತಕ್ಕೆ 2 ಪಂದ್ಯ; ನ್ಯೂಜಿಲ್ಯಾಂಡ್, ಬಾಂಗ್ಲಾದೇಶ ಎದುರಾಳಿ
Team Udayavani, May 24, 2019, 6:00 AM IST
ಲಂಡನ್: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಅಭ್ಯಾಸ ಪಂದ್ಯಗಳಿಗೆ ವೇದಿಕೆ ಸಿದ್ಧಗೊಂಡಿದೆ. ಶುಕ್ರವಾರದಿಂದ ಹತ್ತೂ ತಂಡಗಳ ಪ್ರ್ಯಾಕ್ಟೀಸ್ ಆರಂಭವಾಗಲಿದ್ದು, ಎಲ್ಲ ತಂಡಗಳಿಗೆ 2 ಅಭ್ಯಾಸ ಪಂದ್ಯಗಳನ್ನು ನಿಗದಿಗೊಳಿಸಲಾಗಿದೆ.
ಮೇ 24ರಿಂದ ಆರಂಭವಾಗಲಿರುವ ಅಭ್ಯಾಸ ಪಂದ್ಯಗಳು ಮೇ 28ರ ತನಕ ಸಾಗಲಿವೆ. ಒಂದು ದಿನದ ವಿಶ್ರಾಂತಿಯ ಬಳಿಕ ವಿಶ್ವಕಪ್ ಅಬ್ಬರ ಆರಂಭವಾಗಲಿದೆ. ಒಟ್ಟು 10 ಅಭ್ಯಾಸ ಪಂದ್ಯಗಳು ನಡೆಯಲಿದ್ದು, ಎಲ್ಲವೂ ಡೇ ಮ್ಯಾಚ್‌ಗಳಾಗಿವೆ.
ಪ್ರತೀ ದಿನ ಏಕಕಾಲದಲ್ಲಿ 2 ಅಭ್ಯಾಸ ಪಂದ್ಯಗಳು ಆರಂಭವಾಗಲಿವೆ. ಶುಕ್ರವಾರ ಪಾಕಿಸ್ಥಾನ-ಅಫ್ಘಾನಿಸ್ಥಾನ, ಶ್ರೀಲಂಕಾ- ದಕ್ಷಿಣ ಆಫ್ರಿಕಾ ಪರಸ್ಪರ ಎದುರಾಗಲಿವೆ.
ಭಾರತದ ಎದುರಾಳಿಗಳೆಂದರೆ ನ್ಯೂಜಿ ಲ್ಯಾಂಡ್ ಮತ್ತು ಬಾಂಗ್ಲಾದೇಶ. ಶನಿ ವಾರದ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲ್ಯಾಂಡನ್ನು ಎದುರಿಸಿದರೆ, ಮಂಗಳವಾರದ ಪಂದ್ಯದಲ್ಲಿ ಬಾಂಗ್ಲಾ ದೇಶ ವಿರುದ್ಧ ಸೆಣಸಲಿದೆ. ಎಲ್ಲ ಪಂದ್ಯಗಳು ಭಾರತದಲ್ಲಿ ನೇರ ಪ್ರಸಾರ ಕಾಣಲಿವೆ.
ಟೀಮ್ ಇಂಡಿಯಾ ಅಭ್ಯಾಸ
ವಿಶ್ವಕಪ್‌ಗಾಗಿ ಇಂಗ್ಲೆಂಡ್ ತಲುಪಿದ ಮರುದಿನವೇ ಭಾರತ ತಂಡ ಲಂಡನಿನ “ಓವಲ್ ಸ್ಟೇಡಿಯಂ’ನಲ್ಲಿ ಅಭ್ಯಾಸ ನಡೆಸಿತು. ಅಭ್ಯಾಸಕ್ಕೂ ಮೊದಲಿನ ಕೆಲವು ಚಿತ್ರಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಟೀಮ್ ಇಂಡಿಯಾ ಮೊದಲ ಅಭ್ಯಾಸದ ಅವಧಿಗೆ ಸರ್ವವಿಧದಲ್ಲೂ ಸಜ್ಜಾಗಿದೆ ಎಂದು ಬರೆದುಕೊಂಡಿದೆ. ಸ್ವತಃ ನಾಯಕ ವಿರಾಟ್ ಕೊಹ್ಲಿ ಅಭ್ಯಾಸದ ಉಸ್ತುವಾರಿ ವಹಿಸಿದ್ದರು. ತಂಡದೊಂದಿಗೆ ಸಾಗಿದ ನೆಟ್ ಬೌಲರ್‌ಗಳಾದ ದೀಪಕ್ ಚಹರ್, ಆವೇಶ್ ಖಾನ್ ಮತ್ತು ಖಲೀಲ್ ಅಹ್ಮದ್ ಅಭ್ಯಾಸದ ವೇಳೆ ನೆರವಾದರು.
ಅಭ್ಯಾಸ ಪಂದ್ಯಗಳ ವೇಳಾಪಟ್ಟಿ
ದಿನಾಂಕ ಪಂದ್ಯ ಸ್ಥಳ ಆರಂಭ
ಮೇ 24 ಪಾಕಿಸ್ಥಾನ-ಅಫಾ½ನಿಸ್ಥಾನ ಬ್ರಿಸ್ಟಲ್ 3.00
ಮೇ 24 ಶ್ರೀಲಂಕಾ-ದಕ್ಷಿಣ ಆಫ್ರಿಕಾ ಕಾರ್ಡಿಫ್ 3.00
ಮೇ 25 ಇಂಗ್ಲೆಂಡ್-ಆಸ್ಟ್ರೇಲಿಯ ಸೌತಾಂಪ್ಟನ್ 3.00
ಮೇ 25 ಭಾರತ-ನ್ಯೂಜಿಲ್ಯಾಂಡ್ ಓವಲ್ 3.00
ಮೇ 26 ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಬ್ರಿಸ್ಟಲ್ 3.00
ಮೇ 26 ಪಾಕಿಸ್ಥಾನ-ಬಾಂಗ್ಲಾದೇಶ ಕಾರ್ಡಿಫ್ 3.00
ಮೇ 27 ಇಂಗ್ಲೆಂಡ್-ಅಫ್ಘಾನಿಸ್ಥಾನ ಲಂಡನ್ 3.00
ಮೇ 27 ಆಸ್ಟ್ರೇಲಿಯ-ಶ್ರೀಲಂಕಾ ಸೌತಾಂಪ್ಟನ್ 3.00
ಮೇ 28 ಭಾರತ-ಬಾಂಗ್ಲಾದೇಶ ಕಾರ್ಡಿಫ್ 3.00
ಮೇ 28 ನ್ಯೂಜಿಲ್ಯಾಂಡ್-ವೆಸ್ಟ್ ಇಂಡೀಸ್ ಬ್ರಿಸ್ಟಲ್ 3.00
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.