Cricket world cup; ಭಾರತೀಯ ಕ್ರಿಕೆಟಿಗರಿಂದ ಕಠಿನ ಅಭ್ಯಾಸ
ರವಿವಾರ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ...ಕೊಹ್ಲಿ ಹೆಚ್ಚುವರಿ ಅಭ್ಯಾಸ...
Team Udayavani, Oct 6, 2023, 6:45 AM IST
ಚೆನ್ನೈ: ಕೆಲವು ದಿನಗಳ ವಿಶ್ರಾಂತಿಯ ಬಳಿಕ ಭಾರತೀಯ ಆಟಗಾರರು ಇಲ್ಲಿನ ಪಿ. ಚಿದಂಬರಂ ಕ್ರೀಡಾಂಗಣದಲ್ಲಿ ನೆಟ್ ಅಭ್ಯಾಸದಲ್ಲಿ ಪಾಲ್ಗೊಂಡರು. ಭಾರತವು ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ರವಿವಾರ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ.
ಬೌಲಿಂಗ್ ವ್ಯೂಹದ ರಚನೆ ಬಗ್ಗೆ ವ್ಯವಸ್ಥಾಪಕರು ಗಂಭೀರ ಚಿಂತನೆ ಮಾಡುತ್ತಿದ್ದಾರೆ, ಹೆಚ್ಚುವರಿ ಸೀಮರ್ ಆಗಿ ಮೊಹಮ್ಮದ್ ಶಮಿ ಅಥವಾ ಇಲ್ಲಿನ ಪಿಚ್‌ಗೆ ಅನುಗುಣವಾಗಿ ಸ್ಥಳೀಯ ಹೀರೋ ಆರ್. ಅಶ್ವಿನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ಹಾರ್ದಿಕ್ ಪಾಂಡ್ಯ ಬಹುತೇಕ ಪೂರ್ಣ ಓವರ್ ಎಸೆಯಲು ಸಮರ್ಥರಾಗಿದ್ದರೂ ಆಸ್ಟ್ರೇಲಿಯದ ತಂತ್ರಗಳಿಗೆ ಕಡಿವಾಣ ಹಾಕಲು ಸಮರ್ಥರಿರುವ ಅಶ್ವಿನ್ ಅವರನ್ನು ಕಣಕ್ಕೆ ಇಳಿಸುವುದು ಉತ್ತಮವೆಂಬುದು ಕೆಲವರ ಅಭಿಪ್ರಾಯವಾಗಿದೆ.
ನೆಟ್‌ನಲ್ಲಿ ಕೊಹ್ಲಿ
ಸ್ಥಳೀಯ ನೆಟ್ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ ಅವರು ಸ್ವಲ್ಪ ಹೊತ್ತು ಚೆಂಡನ್ನು ಎಸೆಯುವ ಅಭ್ಯಾಸವನ್ನು ಮಾಡಿದರು. ಅಭ್ಯಾಸ ಪಂದ್ಯಗಳನ್ನು ಆಡಲು ಸಾಧ್ಯವಾಗದ ಕಾರಣ ಆಟಗಾರರು ಕಠಿನ ತರಬೇತಿಯಲ್ಲಿ ಪಾಲ್ಗೊಂಡರು. ಎರಡು ತಾಸು ನಿಗದಿಯಾಗಿದ್ದರೂ ಕೊಹ್ಲಿ ಅವರು ಹೆಚ್ಚುವರಿಯಾಗಿ 45 ನಿಮಿಷ ಅಭ್ಯಾಸ ನಡೆಸಿದರು.
ಕೊಹ್ಲಿ ಅವರಲ್ಲದೇ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ನೆಟ್‌ನಲ್ಲಿ ಬೌಲಿಂಗ್ ನಡೆಸಿದರು. ಜಡೇಜ ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್ ಅಭ್ಯಾಸ ಪಡೆದರು.
ಭಾರತೀಯ ಆಟಗಾರರು ಬುಧ ವಾರ ಮುಚ್ಚಿದ ಬಾಗಿಲಲ್ಲಿ ನೆಟ್‌ನಲ್ಲಿ ಅಭ್ಯಾಸ ನಡೆಸಿದ್ದರು. ಫುಟ್‌ಬಾಲ್ ತಂಡಗಳು ಹೆಚ್ಚಾಗಿ ಮುಚ್ಚಿದ ಬಾಗಿ ಲಲ್ಲಿ ಅಭ್ಯಾಸ ಮಾಡುತ್ತವೆ. ಆಟ ಗಾರರ ತಂತ್ರಗಳು ಯಾರಿಗೂ ತಿಳಿಯ ಬಾರದು ಎಂಬುದು ವ್ಯವ ಸ್ಥಾಪಕರ ಆಲೋಚನೆ ಆಗಿದೆ. ಆದರೆ ಕ್ರಿಕೆಟ್ ಆಟಗಾರರು ತಾಲೀಮ್ ವೇಳೆ ಅಂತಹ ತಂತ್ರಗಾರಿಕೆಯ ಆಟ ಆಡುವುದು ಬಹಳ ಕಡಿಮೆ. ಆದರೂ ಆಟಗಾರರ ಅಭ್ಯಾಸವನ್ನು ಮಾಧ್ಯಮದವರು ವೀಕ್ಷಿಸುವುದು ಬೇಡ ಎಂಬ ಕಾರಣಕ್ಕೆ ಮುಚ್ಚಿದ ಬಾಗಿಲಲ್ಲಿ ಅಭ್ಯಾಸ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.