Gill ಆರೋಗ್ಯ ಸುಧಾರಿಸುತ್ತಿದೆ,ಇನ್ನೂ ಹೊರಗುಳಿದಿಲ್ಲ: ರಾಹುಲ್ ದ್ರಾವಿಡ್
ಇನ್ನೂ 36 ಗಂಟೆಗಳ ಕಾಲಾವಕಾಶವಿದೆ...
Team Udayavani, Oct 6, 2023, 7:36 PM IST
ಚೆನ್ನೈ: ಆರಂಭಿಕ ಆಟಗಾರ ಶುಭಮನ್ ಗಿಲ್ ಅವರ ಆರೋಗ್ಯ ಸುಧಾರಿಸುತ್ತಿರುವುದರಿಂದ ಅವರನ್ನು ಇನ್ನೂ ತಂಡದಿಂದ ಹೊರಗಿಡಲಾಗಿಲ್ಲ ಎಂದು ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಶುಕ್ರವಾರ ಖಚಿತಪಡಿಸಿದ್ದಾರೆ.
ಗಿಲ್ ಅವರು ಡೆಂಗ್ಯೂ ನಿಂದ ಬಳಲುತ್ತಿದ್ದು, ಆಸ್ಟ್ರೇಲಿಯ ವಿರುದ್ಧ ಭಾರತದ ವಿಶ್ವಕಪ್ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ ಚೆನ್ನೈನಲ್ಲಿ ನಡೆದ ತರಬೇತಿ ಅವಧಿಯನ್ನು ತಪ್ಪಿಸಿಕೊಂಡಿದ್ದಾರೆ.
‘ಆಸ್ಟ್ರೇಲಿಯ ವಿರುದ್ದದ ಪಂದ್ಯಕ್ಕೆ ಶುಭ್‌ಮನ್ ಲಭ್ಯತೆಯ ಬಗ್ಗೆ ಅನುಮಾನಗಳಿವೆ ಆದರೆ ಇನ್ನೂ 36 ಗಂಟೆಗಳ ಕಾಲಾವಕಾಶವಿದೆ ಮತ್ತು ವೈದ್ಯಕೀಯ ತಂಡವು ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದ್ರಾವಿಡ್ ಪ್ರತಿಪಾದಿಸಿದ್ದಾರೆ.
“ಗಿಲ್ ಅವರು ಉತ್ತಮವಾಗಿದ್ದಾರೆ, ನಮಗೆ ಇನ್ನೂ 36 ಗಂಟೆಗಳಿವೆ, ವೈದ್ಯಕೀಯ ತಂಡವು ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ, ಅವರು ಆಡುವುದನ್ನು ಇನ್ನೂ ತಳ್ಳಿಹಾಕಲಾಗಿಲ್ಲ” ಎಂದು ದ್ರಾವಿಡ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ
Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!
Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್ ಹಾರನಹಳ್ಳಿ
Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್
ಬಣ ಜಗಳ ಸಾಕು ನಿಲ್ಲಿಸಿ, ಗೊಂದಲದ ಹೇಳಿಕೆ ನೀಡಿದ್ರೆ ಕ್ರಮ: ಕಾಂಗ್ರೆಸ್ ಹೈಕಮಾಂಡ್ ತಾಕೀತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.