![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Oct 26, 2023, 5:40 AM IST
ಹೊಸದಿಲ್ಲಿ: ಗಾಯಾ ಳಾಗಿ ರುವ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಡೆಯಿಂದ ಯಾವುದೇ ಸಿಹಿ ಸುದ್ದಿ ಬಿತ್ತರಗೊಂಡಿಲ್ಲ. ಅವರು ಭಾರತದ ಮುಂದಿನೆರಡು ವಿಶ್ವಕಪ್ ಪಂದ್ಯಗಳಿಗೂ ಲಭಿಸುವುದು ಅನು ಮಾನ ಎಂದು ಎನ್‌ಸಿಎ ಮೂಲಗಳು ತಿಳಿಸಿವೆ. ಪಾಂಡ್ಯ ಗುರುವಾರ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದು, ಆಗ ಸ್ಪಷ್ಟ ಚಿತ್ರಣ ಲಭಿಸುತ್ತದೆ.
ಅ. 19ರಂದು ಬಾಂಗ್ಲಾದೇಶ ವಿರುದ್ಧದ ಪುಣೆ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಜಾರಿ ಬಿದ್ದ ಪರಿ ಣಾಮ ಅವರ ಎಡ ಪಾದಕ್ಕೆ ಗಂಭೀರ ಏಟು ಬಿದ್ದಿತ್ತು. ಕೇವಲ 3 ಎಸೆತ ಎಸೆಯುವಷ್ಟರಲ್ಲಿ ಈ ದುರಂತ ಸಂಭವಿ ಸಿತ್ತು. ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕರೆ ದೊಯ್ಯ ಲಾಯಿತು. ಬುಧವಾರ ಲಭಿಸಿದ ಮಾಹಿತಿ ಪ್ರಕಾರ ಅವರ ಪಾದದ ನೋವು ಇನ್ನೂ ಸಂಪೂರ್ಣ ವಾಸಿಯಾಗಿಲ್ಲ.
“ಹಾರ್ದಿಕ್ ಪಾಂಡ್ಯ ಅವರಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ. ಊತ ಕಡಿಮೆ ಆಗುತ್ತಿದೆ. ಆದರೆ ಬೌಲಿಂಗ್ ನಡೆಸಲು ವಾರಾಂತ್ಯದ ತನಕ ಕಾಯ ಬೇಕು. ಅವರ ಚೇತರಿಕೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕಾದ ಅಗತ್ಯ ವಿದೆ’ ಎಂಬುದಾಗಿ ಎನ್‌ಸಿಎ ಮೂಲಗಳು ಪಿಟಿಐಗೆ ತಿಳಿಸಿವೆ.
ಅ. 22ರಂದು ನ್ಯೂಜಿಲ್ಯಾಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಪಂದ್ಯ ದಲ್ಲಿ ಹಾರ್ದಿಕ್ ಪಾಂಡ್ಯ ಆಡಿರ ಲಿಲ್ಲ. ಭಾರತದ ಮುಂದಿನ ಪಂದ್ಯ ಇರುವುದು ರವಿವಾರಕ್ಕೆ. ಎದುರಾಳಿ ಇಂಗ್ಲೆಂಡ್. ಈ ಪಂದ್ಯಕ್ಕೆ ಪಾಂಡ್ಯ ಲಭ್ಯ ರಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇದೀಗ ಹುಸಿಯಾಗಿದೆ. ನ. 2ರಂದು ಭಾರತ-ಶ್ರೀಲಂಕಾ ಮುಖಾ ಮುಖೀ ಯಾಗಲಿದ್ದು, ಈಗಿನ ಸ್ಥಿತಿಯಂತೆ ಪಾಂಡ್ಯ ಈ ಪಂದ್ಯದಲ್ಲಿ ಆಡುವುದೂ ಅನುಮಾನ.
ತಪ್ಪಿದ ಸಮತೋಲನ
ಹಾರ್ದಿಕ್ ಪಾಂಡ್ಯ ಗೈರಿನಿಂದ ಉದ್ಭವಿಸಿರುವ ದೊಡ್ಡ ಸಮಸ್ಯೆ ಯೆಂದರೆ ತಂಡದ ಸಮತೋಲನ ತಪ್ಪಿರುವುದು. ಇವರಂಥ ಇನ್ನೊಬ್ಬ ಆಲ್‌ರೌಂಡರ್ ಟೀಮ್ ಇಂಡಿಯಾದಲ್ಲಿಲ್ಲ. ಮೀಸಲು ಆಟಗಾರರ ಯಾದಿಯಲ್ಲೂ ಇಲ್ಲ. ಹೀಗಾಗಿ ನ್ಯೂಜಿಲ್ಯಾಂಡ್ ವಿರುದ್ಧ ಸೂರ್ಯ ಕುಮಾರ್ ಯಾದವ್ ಮತ್ತು ಮೊಹಮ್ಮದ್ ಶಮಿ ಅವರನ್ನು ಸೇರಿಸಿ ಕೊಂಡು ಹನ್ನೊಂದರ ಬಳಗವನ್ನು ರಚಿಸಲಾಯಿತು. ಅಜೇಯ ನ್ಯೂಜಿಲ್ಯಾಂಡ್ ವಿರುದ್ಧವೂ ಗೆದ್ದು ಬಂದ ಭಾರತವೀಗ 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಸೆಮಿಫೈನಲ್ ಪ್ರವೇಶಕ್ಕೇನೂ ತೊಂದರೆ ಇಲ್ಲ. ಆದರೆ ನಾಕೌಟ್ ಸ್ಪರ್ಧೆ ವೇಳೆ ಹಾರ್ದಿಕ್ ಪಾಂಡ್ಯ ಅಗತ್ಯ ಭಾರತಕ್ಕಿದೆ.
World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್
World Cup 2023 ; ಭಾರತವನ್ನು ರೂಪಿಸಿದ ತ್ರಿಮೂರ್ತಿಗಳು
ICC ವಿಶ್ವಕಪ್ ಸಾಧಕರ ತಂಡಕ್ಕೆ ರೋಹಿತ್ ನಾಯಕ; ತಂಡ ಹೀಗಿದೆ
World Cup Final; ವೀಕ್ಷಕರು ಮೌನಕ್ಕೆ ಶರಣು:ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಫುಲ್ ಖುಷ್
Head line ನಲ್ಲಿ ಮಿಂಚಿದ ಟ್ರ್ಯಾವಿಸ್ ಹೆಡ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.