World Cup: ಅಫ್ಘಾನ್ ವಿರುದ್ಧ ಭಾರತಕ್ಕೆ 8 ವಿಕೆಟ್‌ಗಳ ಅಮೋಘ ಜಯ
ದಾಖಲೆಗಳ ಮೇಲೆ ದಾಖಲೆ, ಸ್ಮರಣೀಯ ಜಯ...
Team Udayavani, Oct 11, 2023, 9:30 PM IST
ಹೊಸದಿಲ್ಲಿ: ಇಲ್ಲಿ ಬುಧವಾರ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಫ್ಘಾನಿಸ್ಥಾನದ ಎದುರು ಅಬ್ಬರಿಸಿದ ಭಾರತ ತಂಡ 8 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ನಾಯಕ ರೋಹಿತ್ ಶರ್ಮ ಅವರ ಅಬ್ಬರ ಸೇರಿ ತಂಡದ ಅಮೋಘ ನಿರ್ವಹಣೆ ಸುಲಭ ಗೆಲುವಿಗೆ ನೆರವಾಯಿತು.
ಅಫ್ಘಾನಿಸ್ಥಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. ನಾಯಕ ಹಶ್ಮತುಲ್ಲಾ ಶಾಹಿದಿ 80, ಅಜ್ಮತುಲ್ಲಾ ಒಮರ್ಜಾಯ್ 62 ರನ್ ಗಳಿಸಿ ಉತ್ತಮ ಆಟವಾಡಿದರು. ಭಾರತದ ಪರ ಬುಮ್ರಾ 4 ವಿಕೆಟ್ ಕಬಳಿಸಿ ಮಿಂಚಿದರು. ಹಾರ್ದಿಕ್ ಪಾಂಡ್ಯ 2, ಕುಲದೀಪ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ : World Cup ; ಅಫ್ಘಾನ್ ಎದುರು ರೋಹಿತ್ ಶರ್ಮ ಅಬ್ಬರ:ತೆಂಡೂಲ್ಕರ್, ಗೇಲ್ ದಾಖಲೆ ಪತನ
ಗುರಿ ಬೆನ್ನಟ್ಟಿದ ಭಾರತ ಆರಂಭದಿಂದಲೂ ಅಬ್ಬರಿಸಿತು. ರೋಹಿತ್ ಶರ್ಮ 84 ಎಸೆತಗಳಲ್ಲಿ 131 ರನ್ ಬಾರಿಸಿದರು. 16 ಬೌಂಡರಿ ಮತ್ತು ಆಕರ್ಷಕ 5 ದಾಖಲೆಯ ಸಿಕ್ಸರ್ ಗಳು ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿತ್ತು. ರಶೀದ್ ಖಾನ್ ಅವರು ಶರ್ಮ ಅವರನ್ನು ಬೌಲ್ಡ್ ಮಾಡಿದರು. ಇಶಾನ್ ಕಿಶನ್ 47 ರನ್ ಗಳಿಸಿ ಔಟಾದರು. ಕೊಹ್ಲಿ 55 ಮತ್ತು ಶ್ರೇಯಸ್ ಅಯ್ಯರ್ 25 ರನ್ ಗಳಿಸಿ ಅಜೇಯರಾಗಿ ಉಳಿದರು.
ಭಾರತ 35 ಓವರ್ ಗಳಲ್ಲೇ 273 ರನ್ ಗಳಿಸಿ ಸ್ಮರಣೀಯ ಜಯ ತನ್ನದಾಗಿಸಿಕೊಂಡಿತು.
ದಾಖಲೆಗಳ ಮೇಲೆ ದಾಖಲೆ
ಕುತೂಹಲಕಾರಿಯಾಗಿ, ರೋಹಿತ್ ಅವರ ಏಳು ವಿಶ್ವಕಪ್ ಶತಕಗಳು ಆರು ವಿಭಿನ್ನ ಎದುರಾಳಿಗಳ ವಿರುದ್ಧ ಬಂದವು. ಸ್ಪರ್ಧೆಯಲ್ಲಿ ಐದು ವಿಭಿನ್ನ ತಂಡಗಳ ವಿರುದ್ಧ ಸಚಿನ್ ತೆಂಡೂಲ್ಕರ್ (6) ಮತ್ತು ಕುಮಾರ ಸಂಗಕ್ಕಾರ (5) ಶತಕ ದಾಖಲಿಸಿದ್ದರು.
ಯಶಸ್ವಿ ವಿಶ್ವಕಪ್ ಚೇಸಿಂಗ್‌ಗಳಲ್ಲಿ ಅತ್ಯಧಿಕ ಸ್ಕೋರ್‌ಗಳು
152* – ಡೆವೊನ್ ಕಾನ್ವೇ (NZ) ವಿರುದ್ಧ ಇಂಗ್ಲೆಂಡ್ , ಅಹಮದಾಬಾದ್, 2023
139* – ಲಹಿರು ತಿರಿಮನ್ನೆ (SL) ವಿರುದ್ಧಇಂಗ್ಲೆಂಡ್, ವೆಲ್ಲಿಂಗ್ಟನ್, 2015
134* – ಸ್ಟೀಫನ್ ಫ್ಲೆಮಿಂಗ್ (NZ) ವಿರುದ್ಧ ದ.ಆ, ಜೋಹಾನ್ಸ್‌ಬರ್ಗ್, 2003
131* – ಮೊಹಮ್ಮದ್ ರಿಜ್ವಾನ್ (PAK) vs ಶ್ರೀಲಂಕಾ , ಹೈದರಾಬಾದ್, 2023
131 – ರೋಹಿತ್ ಶರ್ಮ ವಿರುದ್ಧ ಅಫ್ಘಾನ್ , ದೆಹಲಿ, 2023
127* – ಸಚಿನ್ ತೆಂಡೂಲ್ಕರ್ ವಿರುದ್ಧ ಕೀನ್ಯಾ , ಕಟಕ್, 1996
ಯಶಸ್ವಿ ವಿಶ್ವಕಪ್ ಚೇಸಿಂಗ್‌ಗಳಲ್ಲಿ ಹೆಚ್ಚಿನ ಶತಕಗಳು
3 – ರೋಹಿತ್ ಶರ್ಮ
2 – ಗಾರ್ಡನ್ ಗ್ರೀನಿಡ್ಜ್
2 – ರಮೀಜ್ ರಾಜ
2 – ಸ್ಟೀಫನ್ ಫ್ಲೆಮಿಂಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.