India vs Netherlands; ಕೊಹ್ಲಿಯ 50ನೇ ಶತಕದ ನಿರೀಕ್ಷೆಯಲ್ಲಿ…
ಭಾರತದಿಂದ ಸತತ 9ನೇ ಗೆಲುವಿನ ಯೋಜನೆ ಎರಡನೇ ತವರಲ್ಲಿ ಕೊಹ್ಲಿ ಮಿಂಚುವ ನಿರೀಕ್ಷೆ
Team Udayavani, Nov 12, 2023, 6:20 AM IST
ಬೆಂಗಳೂರು: ಎಲ್ಲ ಎಂಟು ಪಂದ್ಯಗಳೊಂದಿಗೆ ಗೆಲುವಿನ ನಂಟು ಬೆಸೆದುಕೊಂಡಿರುವ ಆತಿಥೇಯ ಭಾರತ ರವಿವಾರದ ಕೊನೆಯ ವಿಶ್ವಕಪ್ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಇದು 13ನೇ ವಿಶ್ವಕಪ್ ಪಂದ್ಯಾವಳಿಯ ಕೊನೆಯ ಲೀಗ್ ಮುಖಾಮುಖಿಯೂ ಹೌದು. ಇದಕ್ಕೆ ಸಾಕ್ಷಿಯಾಗಲಿರುವ ಅಂಗಳ ಉದ್ಯಾನನಗರಿಯ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’.
ಫಲಿತಾಂಶಕ್ಕೆ ಸಂಬಂಧಿಸಿದಂತೆ ಇಲ್ಲಿ ವಿಪರೀತ ನಿರೀಕ್ಷೆಗಳೇನಿಲ್ಲ. ಆದರೆ ಟೀಮ್ ಇಂಡಿಯಾ ಎಲ್ಲ 9 ಪಂದ್ಯಗಳನ್ನು ಗೆದ್ದು ಅಜೇಯ ಅಭಿ ಯಾನ ಕಾಯ್ದುಕೊಂಡು ಬರಬೇಕು ಎನ್ನುವುದು ಅಭಿಮಾನಿಗಳ ನಂಬಿಕೆ. ಸಾಮಾನ್ಯ ತಂಡವಾಗಿದ್ದರೂ ಒಂದೆ ರಡು ಅಚ್ಚರಿಯ ಫಲಿತಾಂಶವನ್ನು ದಾಖಲಿ ಸಿರುವ ನೆದರ್ಲೆಂಡ್ಸ್ ವಿರುದ್ಧ ಬಲಿಷ್ಠ ಭಾರತ ಮೇಲುಗೈ ಸಾಧಿಸದೇ ಇರಲು ಕಾರಣಗಳೇ ಇಲ್ಲ. ಆದರೂ ಎಷ್ಟೆಷ್ಟೋ ದೊಡ್ಡ ತಂಡಗಳನ್ನು ಬಡಿದುರುಳಿಸಿ ಇಲ್ಲಿಯ ತನಕ ಬಂದಿರುವ ರೋಹಿತ್ ಪಡೆ ಕೊನೆಯಲ್ಲಿ ಆಘಾತಕಾರಿ ಫಲಿತಾಂಶವನ್ನು ಕಾಣಬಾರದಲ್ಲ. ಹೀಗಾಗಿ ಈ ಪಂದ್ಯವನ್ನೂ ಹಿಂದಿನಂತೆ ಅತ್ಯಂತ ಗಂಭೀರವಾಗಿಯೇ ಆಡಿ ಭರ್ಜರಿ ಗೆಲುವನ್ನು ಸಾಧಿಸುವುದು ಟೀಮ್ ಇಂಡಿಯಾದ ಗುರಿ ಆಗಬೇಕು, ಮತ್ತು ಆಗಿರುತ್ತದೆ ಕೂಡ. “ಓವರ್ ಕಾನ್ಫಿಡೆನ್ಸ್’ಗೆ ಇಲ್ಲಿ ಜಾಗ ಇರಕೂಡದು.
ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಡಿದ ಎರಡೂ ಪಂದ್ಯಗಳನ್ನು ಭಾರತ ಜಯಿಸಿದೆ. ಈ ಪಂದ್ಯ ನಡೆದದ್ದು 2003, 2011ರಷ್ಟು ಹಿಂದೆ. 2011ರ ತವರಿನ ಕೂಟದ ವೇಳೆ ಭಾರತ ಕೊನೆಯ ಸಲ ಡಚ್ಚರ ಪಡೆಯನ್ನು ಎದುರಿಸಿತ್ತು. ಈ ಪಂದ್ಯವನ್ನೂ ಗೆದ್ದರೆ ಮೊದಲ ಸಲ ವಿಶ್ವಕಪ್ ಲೀಗ್‌ನ ಎಲ್ಲ ಪಂದ್ಯಗಳನ್ನು ಜಯಿಸಿದ ಹಿರಿಮೆ ಭಾರತದ್ದಾಗಲಿದೆ. ಮುಂದೆ ಚಾಂಪಿಯನ್ ಆದದ್ದಿದ್ದರೆ ಅಜೇಯವಾಗಿ ವಿಶ್ವಕಪ್ ಎತ್ತಿದ ಮಹೋನ್ನತ ಸಾಧನೆಗೆ ಟೀಮ್ ಇಂಡಿಯಾ ಭಾಜನವಾಗಲಿದೆ.
ಸೂರ್ಯಕುಮಾರ್ ಫಾರ್ಮ್
ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ಯಿಂದಾಗಿ ಟೀಮ್ ಇಂಡಿಯಾದ ಸಮತೋಲನ ತಪ್ಪಿರುವುದಂತೂ ನಿಜ. ಆದರೆ ಇಲ್ಲಿಯ ತನಕ ಇದು ಅರಿವಿಗೆ ಬಂದಿಲ್ಲ. ಕಾರಣ, ಭಾರತ ಗೆಲ್ಲುತ್ತ ಬಂದಿದೆ. ಪಾಂಡ್ಯ ಸ್ಥಾನದಲ್ಲಿ ಆಡಲಿಳಿದಿರುವ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಬಗ್ಗೆ ಆತಂಕ ಇದೆ. 4 ಪಂದ್ಯಗಳಲ್ಲಿ ಅವರು ಗಳಿಸಿದ್ದು 85 ರನ್ ಮಾತ್ರ. ಸರಾಸರಿ 21.25. ಸೂರ್ಯ ಈ ಕೂಟದಲ್ಲಿ ಅರ್ಧ ಶತಕವನ್ನೂ ಹೊಡೆಯದ ಭಾರತದ ಏಕೈಕ ಬ್ಯಾಟ್ಸ್‌ಮನ್. ನೆದರ್ಲೆಂಡ್ಸ್ ವಿರುದ್ಧವಾದರೂ ದೊಡ್ಡ ಸ್ಕೋರ್ ದಾಖಲಿಸಿ ನಾಕೌಟ್ ಹಣಾಹಣಿಗೆ ಸಜ್ಜಾಗಬೇಕಿದೆ.
ಓಪನಿಂಗ್, ಬೌಲಿಂಗ್ ಯಶಸ್ಸು
ಆರಂಭಿಕರಾದ ರೋಹಿತ್ ಶರ್ಮ- ಶುಭಮನ್ ಗಿಲ್ ಉತ್ತಮ ಫಾರ್ಮ್ ನಲ್ಲಿದ್ದಾರೆ. 3 ಪಂದ್ಯಗಳಲ್ಲಿ 50 ಪ್ಲಸ್ ರನ್ ಜತೆಯಾಟ ನಡೆಸಿದ್ದಾರೆ. ಬಾಂಗ್ಲಾದೇಶ ವಿರುದ್ಧ 12.4 ಓವರ್‌ಗಳಲ್ಲಿ 88 ರನ್, ನ್ಯೂಜಿಲ್ಯಾಂಡ್ ಎದುರು 11.1 ಓವರ್‌ಗಳಿಂದ 71 ರನ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 5.5 ಓವರ್‌ಗಳಲ್ಲಿ 62 ರನ್ ಸಿಡಿಸಿದ್ದಾರೆ. ಆದರೆ ಉಳಿದ 5 ಪಂದ್ಯಗಳಲ್ಲಿ ಗಳಿಸಿದ್ದು 5, 32, 23, 26 ಮತ್ತು 4 ರನ್ ಮಾತ್ರ.
ಭಾರತದ ಈವರೆಗಿನ ಯಶಸ್ಸಿನಲ್ಲಿ ಬೌಲಿಂಗ್ ಪಡೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಬುಮ್ರಾ, ಶಮಿ, ಸಿರಾಜ್, ಕುಲದೀಪ್, ಜಡೇಜ ಅತ್ಯಂತ ಘಾತಕವಾಗಿ ಪರಿಣಮಿಸುತ್ತಿದ್ದಾರೆ. ಈ ಐವರ ಕಾಂಬಿನೇಶನ್ ಕೂಟದಲ್ಲೇ ಅತ್ಯಂತ ಶಕ್ತಿಶಾಲಿ ಎನಿಸಿದೆ.
ಡಚ್ ಸಂತೃಪ್ತಭಾವ
ಅರ್ಹತಾ ಸುತ್ತಿನ ಮೂಲಕ ಆಗಮಿಸಿದ ನೆದರ್ಲೆಂಡ್ಸ್ ಪಾಲಿಗೆ ಇದೊಂದು ಸಾರ್ಥಕ ಪಂದ್ಯಾ ವಳಿ. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾ ದೇಶವನ್ನು ಮಣಿಸಿದ ಹೆಗ್ಗಳಿಕೆ ಡಚ್ಚರ ಪಾಲಿಗಿದೆ. ಕೊನೆಯಲ್ಲಿ ಭಾರತವನ್ನೂ ಬೆದರಿಸೀತೇ?!
ಇದು ಪ್ರಸಕ್ತ ವಿಶ್ವಕಪ್‌ನಲ್ಲಿ ಬೆಂಗಳೂರಿ ನಲ್ಲಿ ನಡೆಯುವ ಭಾರತದ ಏಕೈಕ ಪಂದ್ಯವೆಂಬುದನ್ನೂ ಮರೆಯು ವಂತಿಲ್ಲ. ಹಾಗೆಯೇ ಭಾರತವಿನ್ನು ಈ ಕೂಟದಲ್ಲಿ ಒತ್ತಡವಿಲ್ಲದೆ ಆಡಬಹು ದಾದ ಪಂದ್ಯವೆಂದರೆ ಇದೊಂದೇ. ಮುಂದಿನದು ಸೆಮಿಫೈನಲ್, ಮುಂದು ವರಿದರೆ ಫೈನಲ್. ಇಲ್ಲಿ ಹುರಿಗೊಳ್ಳಲು ನೆದರ್ಲೆಂಡ್ಸ್ ಎದುರಿನ ಮುಖಾಮುಖೀ ಭಾರತದ ಪಾಲಿಗೊಂದು “ಪ್ರ್ಯಾಕ್ಟೀಸ್ ಮ್ಯಾಚ್’.
ಗೆಲುವಿಗೂ ಮಿಗಿಲಾದ ಕುತೂಹಲ
ಇಲ್ಲಿ ಗೆಲುವಿಗೂ ಮಿಗಿಲಾದ ನಿರೀಕ್ಷೆ ಹಾಗೂ ಕುತೂಹಲವೆಂದರೆ, ವಿರಾಟ್ ಕೊಹ್ಲಿ ವಿಶ್ವದಾಖಲೆಯ 50ನೇ ಶತಕವನ್ನು ಬಾರಿಸುವರೇ ಎಂಬುದು. ಹೇಳಿ ಕೇಳಿ ಬೆಂಗಳೂರು ಅವರ ಎರಡನೇ ತವರು. ಆರ್‌ಸಿಬಿ ಕಿಂಗ್ ಎನಿಸಿರುವ ಕೊಹ್ಲಿಗೆ 50ನೇ ಶತಕದ ಶಿಖರ ತಲುಪಲು ಇದಕ್ಕಿಂತ ಮಿಗಿಲಾದ ಅಂಗಳ ಬೇರೊಂದಿಲ್ಲ. ಭಾರತ ಮೊದಲು ಬ್ಯಾಟಿಂಗ್ ನಡೆಸಿದರೆ ರವಿವಾರವೇ ಇತಿಹಾಸ ನಿರ್ಮಾಣವಾದೀತು!
ಪ್ರಚಂಡ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಈಗಾಗಲೇ 543 ರನ್ ಬಾರಿಸಿದ್ದಾರೆ. ಭಾರತದ ರನ್ ಸಾಧಕರ ಯಾದಿಯಲ್ಲಿ ಇವರಿಗೆ ಅಗ್ರಸ್ಥಾನದ ಗೌರವ. ಏಕದಿನ ವಿಶ್ವಕಪ್ ಪಂದ್ಯಾವಳಿಯೊಂದರಲ್ಲಿ ಕೊಹ್ಲಿ 500 ರನ್ ಗಡಿ ದಾಟಿದ ಮೊದಲ ನಿದರ್ಶನ ಇದಾಗಿದೆ. 2011ರಿಂದ ವಿಶ್ವಕಪ್ ಆಡಲಾರಂಭಿಸಿದ ಕೊಹ್ಲಿ ಕ್ರಮವಾಗಿ 282, 305, 443 ರನ್ ಬಾರಿಸಿದ್ದಾರೆ. ಈ 3 ಕೂಟಗಳಲ್ಲಿ ತೆಂಡುಲ್ಕರ್, ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಭಾರತದ ಟಾಪ್ ಸ್ಕೋರರ್ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.