World Cup ಸೆಮಿಫೈನಲ್‌ನಲ್ಲಿ ಭಾರತದ ಸಾಧನೆ; 2019ರಲ್ಲಿ ಅಡ್ಡಗಾಲಿಕ್ಕಿದ ನ್ಯೂಜಿಲ್ಯಾಂಡ್‌

ಭಾರತದ ವಿಶ್ವಕಪ್‌ ಸೆಮಿಫೈನಲ್‌ ಸಾಧನೆಯತ್ತ ಒಂದು ಕಿರು ಚಿತ್ರಣ...

Team Udayavani, Nov 13, 2023, 6:20 AM IST

1-aaa

ಈ ಬಾರಿಯ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆತಿಥೇಯ ಭಾರತದ್ದು ಅಜೇಯ ಓಟ. ಆಡಿದ ಎಲ್ಲ 9 ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನದ ಗೌರವದೊಂದಿಗೆ ರೋಹಿತ್‌ ಪಡೆ ಸೆಮಿಫೈನಲ್‌ ಸಮರಕ್ಕೆ ಸಜ್ಜಾಗಿದೆ. ಎದುರಾಳಿ, ಮತ್ತದೇ… ಕೇನ್‌ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲ್ಯಾಂಡ್‌. ಬುಧವಾರ ಮುಂಬಯಿಯ “ವಾಂಖೇಡೆ ಸ್ಟೇಡಿ ಯಂ’ನಲ್ಲಿ ಈ ಮುಖಾಮುಖಿ ಏರ್ಪಡಲಿದೆ. ಈ ಹಿನ್ನೆಲೆಯಲ್ಲಿ ಭಾರತದ ವಿಶ್ವಕಪ್‌ ಸೆಮಿಫೈನಲ್‌ ಸಾಧನೆಯತ್ತ ಒಂದು ಕಿರು ಚಿತ್ರಣ.

1983: ಇಂಗ್ಲೆಂಡ್‌ ವಿರುದ್ಧ ಜಯಭೇರಿ
ಮೊದಲೆರಡು ವಿಶ್ವಕಪ್‌ ಪಂದ್ಯಾ ವಳಿಯಲ್ಲಿ ಕೇವಲ ಒಂದು ಪಂದ್ಯ ವನ್ನಷ್ಟೇ ಜಯಿಸಿದ್ದ ಭಾರತ, 1983 ರಲ್ಲಿ ನೂತನ ಇತಿಹಾಸ ಬರೆದು ದನ್ನು ಮರೆಯುವಂತಿಲ್ಲ. ಕಪಿಲ್‌ದೇವ್‌ ಸಾರಥ್ಯದಲ್ಲಿ ಜಗತ್ತನ್ನೇ ದಂಗು ಬಡಿಸುವ ರೀತಿಯಲ್ಲಿ ಆಡಿ ವಿಶ್ವಕಪ್‌ ಎತ್ತಿದ ಸಾಧನೆ ಸಾಟಿಯಿಲ್ಲದ್ದು. ಅಂದಿನ ಸೆಮಿಫೈನಲ್‌ನಲ್ಲಿ ಭಾರತ ಆತಿಥೇಯ ಇಂಗ್ಲೆಂಡ್‌ ಮೇಲೆ ಸವಾರಿ ಮಾಡಿ 6 ವಿಕೆಟ್‌ ಜಯ ಸಾಧಿಸಿತ್ತು.

ಇಂಗ್ಲೆಂಡ್‌ 60 ಓವರ್‌ಗಳಲ್ಲಿ 213ಕ್ಕೆ ಆಲೌಟ್‌ ಆದರೆ, ಭಾರತ 54.4 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 217 ರನ್‌ ಬಾರಿಸಿ ಜಯಭೇರಿ ಮೊಳಗಿಸಿತ್ತು. “ಸಿಂಹವನ್ನು ಸಿಂಹದ ಗುಹೆಗೇ ನುಗ್ಗಿ ಬೇಟೆಯಾಡಿದ ಭಾರತ’ ಎಂದು ಅಂದಿನ ಪತ್ರಿಕೆಗಳು ಕಪಿಲ್‌ ಬಳಗದ ಸಾಹಸವನ್ನು ಬಣ್ಣಿಸಿದ್ದವು. ಯಶ್ಪಾಲ್‌ ಶರ್ಮ ಸರ್ವಾಧಿಕ 61, ಸಂದೀಪ್‌ ಪಾಟೀಲ್‌ ಅಜೇಯ 51, ಕಪಿಲ್‌ದೇವ್‌ 35ಕ್ಕೆ 3 ವಿಕೆಟ್‌ ಉರುಳಿಸಿ ಮಿಂಚಿದ್ದರು. 46 ರನ್‌ ಜತೆಗೆ 2 ವಿಕೆಟ್‌ ಉರುಳಿಸಿದ ಮೊಹಿಂದರ್‌ ಅಮರನಾಥ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

1987: ಮುಂಬಯಿಯಲ್ಲಿ ಇಂಗ್ಲೆಂಡ್‌ ಸೇಡು
1987ರ ವಿಶ್ವಕಪ್‌ ಭಾರತದ ಆತಿಥ್ಯದಲ್ಲಿ ನಡೆದಿತ್ತು. ಕಪಿಲ್‌ದೇವ್‌ ಅವರೇ ಸಾರಥಿ. ಭಾರತ ಸತತ 2ನೇ ಸಲ ಸೆಮಿಫೈನಲ್‌ ತಲುಪಿತ್ತು. ಎದುರಾದ ತಂಡ ಬೇರೆ ಯಾವುದೂ ಅಲ್ಲ, ಇಂಗ್ಲೆಂಡ್‌!
ಈ ವಾಂಖೇಡೆ ಸಮರವನ್ನು ಗೆದ್ದು ಭಾರತ ಫೈನಲ್‌ಗೆ ಲಗ್ಗೆ ಇಡಲಿದೆ ಎಂಬುದೇ ಎಲ್ಲರ ನಿರೀಕ್ಷೆ ಆಗಿತ್ತು. ಆದರೆ ಸಂಭವಿಸಿದ್ದೇ ಬೇರೆ. ಇಂಗ್ಲೆಂಡ್‌ 35 ರನ್ನುಗಳಿಂದ ಭಾರತವನ್ನು ಮಣಿಸಿ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಇಂಗ್ಲೆಂಡ್‌ 6ಕ್ಕೆ 254 ರನ್‌ ಮಾಡಿದರೆ, ಭಾರತ 45.3 ಓವರ್‌ಗಳಲ್ಲಿ 219ಕ್ಕೆ ಸರ್ವಪತನ ಕಂಡಿತು. ಆರಂಭಕಾರ ಗ್ರಹಾಂ ಗೂಚ್‌ 115 ರನ್‌ ಬಾರಿಸಿದರೆ, ಎಡ್ಡಿ ಹೆಮ್ಮಿಂಗ್ಸ್‌ (52ಕ್ಕೆ 4) ಮತ್ತು ನೀಲ್‌ ಫಾಸ್ಟರ್‌ (47ಕ್ಕೆ 3) ಬೌಲಿಂಗ್‌ನಲ್ಲಿ ಕಂಟಕವಾಗಿ ಕಾಡಿದರು. ಅಜರುದ್ದೀನ್‌ ಸರ್ವಾಧಿಕ 64 ರನ್‌ ಹೊಡೆದರು.

1996: ಮರೆಯಲಾಗದ ಆಘಾತ
ಶ್ರೀಲಂಕಾ ವಿರುದ್ಧದ 1996ರ ಸೆಮಿಫೈನಲ್‌ ನೆನೆಸಿಕೊಂಡರೆ ಈಗಲೂ ವಿನೋದ್‌ ಕಾಂಬ್ಳಿಯಂತೆ ಕಣ್ಣೀರು ಸುರಿಸಬೇಕಾಗುತ್ತದೆ! ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನಲ್ಲಿ ಭಾರತದ ಕುಸಿತದ ವೇಳೆ ವೀಕ್ಷಕರು ನಡೆಸಿದ ದುಂಡಾವರ್ತಿ, ಭಾರತದ ಮೇಲೆ ಯಾವಾಗ ಹಗೆ ತೀರಿಸುವುದೋ ಎಂಬುದನ್ನೇ ಕಾಯುತ್ತಿದ್ದ ಮ್ಯಾಚ್‌ ರೆಫ್ರಿ ಕ್ಲೈವ್‌ ಲಾಯ್ಡ ಪಂದ್ಯವನ್ನು ರದ್ದುಗೊಳಿಸಿ ಶ್ರೀಲಂಕಾವನ್ನು ಫೈನಲ್‌ಗೆ ಕಳುಹಿಸಿದ್ದನ್ನು ಕ್ರಿಕೆಟ್‌ ಇತಿಹಾಸ ಎಂದೂ ಮರೆಯದು.

ಶ್ರೀಲಂಕಾ 8 ವಿಕೆಟಿಗೆ 251 ರನ್‌ ಬಾರಿಸಿತ್ತು. ನೆಚ್ಚಿನ ತಂಡವಾಗಿದ್ದ ಭಾರತ ದಿಢೀರ್‌ ಕುಸಿತಕ್ಕೆ ಸಿಲುಕಿ 8ಕ್ಕೆ 120 ರನ್‌ ಮಾಡಿ ಸೋಲಿನಂಚಿಗೆ ಬಂದು ನಿಂತಿತು. ಇದನ್ನು ಸಹಿಸದ ಕೋಲ್ಕತಾ ಪ್ರೇಕ್ಷಕರು ರೊಚ್ಚಿಗೆದ್ದರು. ಸ್ಟೇಡಿಯಂನಲ್ಲಿ ಅಗ್ನಿಜ್ವಾಲೆಯೂ ಕಾಣಿಸಿಕೊಂಡಿತು!

2003: ಎದುರಾಳಿಯಾಗಿ ಬಂತು ಕೀನ್ಯಾ!
2003ರ ಡರ್ಬನ್‌ ಸೆಮಿಫೈನಲ್‌ನಲ್ಲಿ ಭಾರತದ ಎದುರಾಳಿಯಾಗಿ ಅಚ್ಚರಿಯ ತಂಡವಾದ ಕೀನ್ಯಾ ಕಾಣಿಸಿಕೊಂಡಿತ್ತು. ಆಗಲೇ ಭಾರತದ ಫೈನಲ್‌ ಖಾತ್ರಿಯಾಗಿತ್ತು. ಆದರೆ ಕ್ರಿಕೆಟ್‌ನಲ್ಲಿ ಏನೂ ಸಂಭವಿಸಬಹುದಿತ್ತು. ಆದರೆ ಹಾಗೇನೂ ಆಗಲಿಲ್ಲ. ಸೌರವ್‌ ಗಂಗೂಲಿ ಪಡೆ 91 ರನ್ನುಗಳಿಂದ ಗೆದ್ದು 2ನೇ ಸಲ ಫೈನಲ್‌ಗೆ ಲಗ್ಗೆ ಹಾಕಿತು.
ಭಾರತ 4ಕ್ಕೆ 270 ರನ್‌ ಬಾರಿಸಿದರೆ, ಕೀನ್ಯಾ 46.2 ಓವರ್‌ಗಳಲ್ಲಿ 179ಕ್ಕೆ ಸರ್ವಪತನ ಕಂಡಿತು. ನಾಯಕ ಸೌರವ್‌ ಗಂಗೂಲಿ (ಅಜೇಯ 111), ಜಹೀರ್‌ ಖಾನ್‌ (3 ವಿಕೆಟ್‌), ಆಶಿಷ್‌ ನೆಹ್ರಾ ಮತ್ತು ಸಚಿನ್‌ ತೆಂಡುಲ್ಕರ್‌ (ತಲಾ 2 ವಿಕೆಟ್‌) ಭಾರತದ ಗೆಲುವಿನ ರೂವಾರಿಗಳಾಗಿದ್ದರು.

2011: ಪಾಕ್‌ ಪತನ
ಭಾರತ 2ನೇ ಸಲ ವಿಶ್ವಕಪ್‌ ಗೆದ್ದದ್ದು 2011ರಲ್ಲಿ. ಅಂದಿನ ಸೆಮಿಫೈನಲ್‌ನಲ್ಲಿ ಧೋನಿ ಪಡೆಗೆ ಎದುರಾದ ತಂಡ ಪಾಕಿಸ್ಥಾನ. ಈ ಕ್ರಿಕೆಟ್‌ ಕದನದ ಕೇಂದ್ರ ಮೊಹಾಲಿ. ಇದೊಂದು ರೋಚಕ ಹಾಗೂ ಜಿದ್ದಾಜಿದ್ದಿ ಮೇಲಾಟವಾಗಿತ್ತು. ಟೀಮ್‌ ಇಂಡಿಯಾದ ಗೆಲುವಿನ ಅಂತರ ಬರೀ 29 ರನ್‌.

ಭಾರತದ 9ಕ್ಕೆ 260 ರನ್‌ ಸವಾಲಿಗೆ ಜವಾಬಾಗಿ ಪಾಕಿಸ್ಥಾನ 49.5 ಓವರ್‌ಗಳಲ್ಲಿ 231ಕ್ಕೆ ಆಟ ಮುಗಿಸಿತು. ಎಲ್ಲ 5 ಬೌಲರ್ ತಲಾ 2 ವಿಕೆಟ್‌ ಕೆಡವಿದರೆ, ಬ್ಯಾಟಿಂಗ್‌ನಲ್ಲಿ ಸಚಿನ್‌ ತೆಂಡುಲ್ಕರ್‌ 85 ರನ್‌ ಕೊಡುಗೆ ಸಲ್ಲಿಸಿದರು.

2015: ಆಸ್ಟ್ರೇಲಿಯಕ್ಕೆ ಶರಣು
2015ರ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಎದುರಾದ ತಂಡ ಆತಿಥೇಯ ಆಸ್ಟ್ರೇ ಲಿಯ. ಆದರೆ ಈ ಸಿಡ್ನಿ ಸಮರದಲ್ಲಿ ಆಸೀಸ್‌ಗೆ ಆಘಾತವಿಕ್ಕುವ ಧೋನಿ ಪಡೆಯ ಯೋಜನೆ ಫ‌ಲಿಸಲಿಲ್ಲ. 95 ರನ್ನುಗಳಿಂದ ಸೋತ ಭಾರತ ಮಾಜಿ ಆಯಿತು. ಆಸೀಸ್‌ 7ಕ್ಕೆ 328 ರನ್‌ ಪೇರಿಸಿದಾಗಲೇ ಭಾರತ ಆಸೆ ಬಿಟ್ಟಿತ್ತು. 46.5 ಓವರ್‌ಗಳಲ್ಲಿ 233ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಮಿತ್‌ (105), ಫಿಂಚ್‌ (81) ಆಸ್ಟ್ರೇಲಿಯದ ಬೃಹತ್‌ ಮೊತ್ತಕ್ಕೆ ಕಾರಣರಾಗಿದ್ದರು. ಭಾರತದ ಪರ ಧೋನಿ ಸರ್ವಾಧಿಕ 65 ರನ್‌ ಮಾಡಿದರು.

2019: ಅಡ್ಡಗಾಲಿಕ್ಕಿದ ನ್ಯೂಜಿಲ್ಯಾಂಡ್‌
4 ವರ್ಷಗಳ ಹಿಂದೆ ಭಾರತದ ಫೈನಲ್‌ಗೆ ಅಡ್ಡಗಾಲಿಕ್ಕಿದ ತಂಡ ನ್ಯೂಜಿಲ್ಯಾಂಡ್‌. ಈ ಮ್ಯಾಂಚೆಸ್ಟರ್‌ ಮುಖಾಮುಖೀಯಲ್ಲಿ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿದ ಕೊಹ್ಲಿ ಪಡೆ 18 ರನ್ನಿನಿಂದ ಎಡವಿತ್ತು. ನ್ಯೂಜಿಲ್ಯಾಂಡ್‌ 8ಕ್ಕೆ 239 ರನ್‌ ಗಳಿಸಿದರೆ, ಭಾರತ 49.3 ಓವರ್‌ಗಳಲ್ಲಿ 221ಕ್ಕೆ ಆಲೌಟ್‌ ಆಗಿ ಕೂಟದಿಂದ ನಿರ್ಗಮಿಸಿತು. ನ್ಯೂಜಿಲ್ಯಾಂಡ್‌ ಬ್ಯಾಟಿಂಗ್‌ ವೇಳೆ ಮಳೆ ಸುರಿದುದರಿಂದ ಈ ಪಂದ್ಯ ಮೀಸಲು ದಿನಕ್ಕೆ ವಿಸ್ತರಣೆಗೊಂಡಿತ್ತು. ಭಾರತದ 4 ವಿಕೆಟ್‌ 24ಕ್ಕೆ ಹಾರಿ ಹೋಗಿತ್ತು.
ಈ ಬಾರಿ ಮತ್ತೆ ನ್ಯೂಜಿಲ್ಯಾಂಡ್‌ ಸೆಮಿಯಲ್ಲಿ ಎದುರಾಗಿದೆ. ಸೇಡು ತೀರಿಸಿಕೊಳ್ಳಲು ಭಾರತಕ್ಕೊಂದು ಸೊಗಸಾದ ಅವಕಾಶ.

ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ
ವರ್ಷ ಎದುರಾಳಿ ಸ್ಥಳ ಫ‌ಲಿತಾಂಶ
1983 ಇಂಗ್ಲೆಂಡ್‌ ಮ್ಯಾಂಚೆಸ್ಟರ್‌ 6 ವಿಕೆಟ್‌ ಜಯ
1987 ಇಂಗ್ಲೆಂಡ್‌ ಮುಂಬಯಿ 35 ರನ್‌ ಸೋಲು
1996 ಶ್ರೀಲಂಕಾ ಕೋಲ್ಕತಾ ರದ್ದು, ಲಂಕೆಗೆ ವಾಕ್‌ ಓವರ್‌
2003 ಕೀನ್ಯಾ ಡರ್ಬನ್‌ 91 ರನ್‌ ಜಯ
2011 ಪಾಕಿಸ್ಥಾನ ಮೊಹಾಲಿ 29 ರನ್‌ ಜಯ
2015 ಆಸ್ಟ್ರೇಲಿಯ ಸಿಡ್ನಿ 95 ರನ್‌ ಸೋಲು
2019 ನ್ಯೂಜಿಲ್ಯಾಂಡ್‌ ಮ್ಯಾಂಚೆಸ್ಟರ್‌ 18 ರನ್‌ ಸೋಲು

·ಎಚ್‌. ಪ್ರೇಮಾನಂದ ಕಾಮತ್‌

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

Ahmed Shehzad: ಭಾರತ-ಪಾಕ್‌ ಗಡಿಯಲ್ಲಿ ಕ್ರಿಕೆಟ್‌ ಸ್ಟೇಡಿಯಂಗೆ ಸಲಹೆ!

Ahmed Shehzad: ಭಾರತ-ಪಾಕ್‌ ಗಡಿಯಲ್ಲಿ ಕ್ರಿಕೆಟ್‌ ಸ್ಟೇಡಿಯಂಗೆ ಸಲಹೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.