INDvsNZ :ಶತಕ ವಂಚಿತರಾದರೂ ಗೆಲುವು ತಂದುಕೊಟ್ಟ ಕೊಹ್ಲಿ ಆಟ
ಮೊದಲ ಸ್ಥಾನದಲ್ಲಿ ಮತ್ತೆ ವಿರಾಜಮಾನ...
Team Udayavani, Oct 22, 2023, 10:24 PM IST
ಧರ್ಮಶಾಲಾ: ಭಾನುವಾರ ಇಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಜಿದ್ದಾ ಜಿದ್ದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ಅಮೋಘ ನಿರ್ವಹಣೆಯ ಕಾರಣದಿಂದ ನಾಲ್ಕು ವಿಕೆಟ್ ಗಳ ಜಯ ಒಲಿದಿದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮತ್ತೆ ವಿರಾಜಮಾನವಾಗುವಂತಾಗಿದೆ. ಭಾರತ 5 ಪಂದ್ಯಗಳಲ್ಲಿ 5ನ್ನೂ ಗೆದ್ದು 10 ಅಂಕಗಳೊಂದಿಗೆ +1.353 ರನ್ ರೇಟ್ ಹೊಂದಿದೆ.
274ರನ್ ಗಳ ಗುರಿ ಬೆನ್ನಟ್ಟಿದ ಭಾರತ 48 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿ ಜಯದ ಓಟ ಮುಂದುವರಿಸಿತು. ರೋಹಿತ್ ಶರ್ಮ 46, ಶ್ರೇಯಸ್ ಅಯ್ಯರ್ 33, ರಾಹುಲ್ 27 ರನ್ ಗಳಿಸಿ ಔಟಾದರು. ತಾಳ್ಮೆಯ ಆಟವಾಡಿ ತಂಡದ ಗೆಲುವಿಗೆ ಅಮೋಘ ಕೊಡುಗೆ ನೀಡಿದ ಕೊಹ್ಲಿ 95 ರನ್ ಗಳಿಸಿದ್ದ ವೇಳೆ ಔಟಾಗುವ ಮೂಲಕ ನಿರಾಶರಾದರು.
ಇದನ್ನೂ ಓದಿ: World Cup 2023: ಧರ್ಮಶಾಲಾದಲ್ಲಿ ಮಿಂಚಿದ ಮಿಚೆಲ್ ಮತ್ತು ಶಮಿ; ಭಾರತಕ್ಕೆ ರನ್ 274 ಗುರಿ
ಮ್ಯಾಟ್ ಹೆನ್ರಿ ನಿಧಾನಗತಿಯಲ್ಲಿ ಎಸೆದ ಚೆಂಡನ್ನು ದೊಡ್ಡ ಹೊಡೆತಕ್ಕೆ ಮುಂದಾದ ಕೊಹ್ಲಿ ಡೀಪ್ ಮಿಡ್‌ನಲ್ಲಿ ಗ್ಲೆನ್ ಫಿಲಿಪ್ಸ್ ಕೈಗೆ ಕ್ಯಾಚಿತ್ತರು. ಭಾರತ ತಂಡದ ಗೆಲುವಿಗೆ ಇನ್ನೂ 5 ರನ್‌ಗಳ ಅಗತ್ಯವಿತ್ತು. ಕೊಹ್ಲಿ 104 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಆಕರ್ಷಕ ಸಿಕ್ಸರ್ ಗಳನ್ನೂ ಬಾರಿಸಿದರು. ರವೀಂದ್ರ ಜಡೇಜಾ ಔಟಾಗದೆ 39 ರನ್ ಕೊಡುಗೆ ನೀಡಿ ಗೆಲುವಿಗೆ ಸಾಕ್ಷಿಯಾದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.