World Cup ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ಸಾಧನೆ
Team Udayavani, Nov 14, 2023, 6:35 AM IST
ವಿಶ್ವಕಪ್‌ನ ನತದೃಷ್ಟ ತಂಡವೆಂದು ನಾವು ಬೆಟ್ಟು ಮಾಡುವುದು ದಕ್ಷಿಣ ಆಫ್ರಿಕಾದತ್ತ. ಆದರೆ ಇದಕ್ಕೂ ಮಿಗಿಲಾದ ದುರದೃಷ್ಟವನ್ನು ಹೊತ್ತುಕೊಂಡಿರುವ ತಂಡವೊಂದಿದೆ. ಅದು ನ್ಯೂಜಿ ಲ್ಯಾಂಡ್. 2023ರ ಕೂಟವನ್ನು ಹೊರತು ಪಡಿಸಿ ಈವರೆಗೆ ಅದು 8 ಸೆಮಿಫೈನಲ್, 2 ಫೈನಲ್ ಕಂಡಿದೆ. ಆದರೆ ಒಮ್ಮೆಯೂ ಕಪ್ ಎತ್ತಿಲ್ಲ! ಬ್ಲ್ಯಾಕ್ ಕ್ಯಾಪ್ಸ್ ಮತ್ತು ವಿಶ್ವಕಪ್ ಸೆಮಿಫೈನಲ್ ನಂಟು 9ಕ್ಕೆ ವಿಸ್ತರಿಸಲ್ಪಟ್ಟಿರುವ ಈ ಹೊತ್ತಿನಲ್ಲಿ ಒಂದು ಹಿನ್ನೋಟ.
1975: ವಿಂಡೀಸ್ ವಿರುದ್ಧ ಸೋಲು
ನ್ಯೂಜಿಲ್ಯಾಂಡ್ 1975ರ ಚೊಚ್ಚಲ ವಿಶ್ವಕಪ್‌ನಲ್ಲೇ ಸೆಮಿಫೈನಲ್ ಕಂಡ ತಂಡ. ಅಂದು ಓವಲ್‌ನಲ್ಲಿ ಎದುರಾದದ್ದು ಬಲಾಡ್ಯ ವೆಸ್ಟ್ ಇಂಡೀಸ್. ಫಲಿತಾಂಶ ಕೂಡ ವಿಂಡೀಸ್ ಪರವಾಗಿಯೇ ಬಂತು. ಅದು 5 ವಿಕೆಟ್‌ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು.
ಬರ್ನಾರ್ಡ್ ಜೂಲಿಯನ್, ವಾರ್ನ್ ಬರ್ನ್ ಹೋಲ್ಡರ್ ಹಾಗೂ ಆ್ಯಂಡಿ ರಾಬರ್ಟ್ಸ್ ಅವರ ವೇಗದ ದಾಳಿಗೆ ತತ್ತರಿಸಿದ ಗ್ಲೆನ್ ಟರ್ನರ್ ಪಡೆ 52.2 ಓವರ್‌ಗಳಲ್ಲಿ 158ಕ್ಕೆ ಕುಸಿಯಿತು. ವಿಂಡೀಸ್ 40.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿತು. ಚೇಸಿಂಗ್ ವೇಳೆ 72 ರನ್ ಮಾಡಿದ ಅಲ್ವಿನ್ ಕಾಳೀಚರಣ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
1979: ಇಂಗ್ಲೆಂಡ್‌ಗೆ ಶರಣು
ಸತತ 2ನೇ ವಿಶ್ವಕಪ್‌ನಲ್ಲೂ ನ್ಯೂಜಿ ಲ್ಯಾಂಡ್ ಸೆಮಿಫೈನಲ್ ಪ್ರವೇಶಿಸಿತು. ಮತ್ತೆ ಸೋತಿತು. ಆದರೆ ಎದುರಾಳಿ ಮಾತ್ರ ಬೇರೆ, ಅದು ಆತಿಥೇಯ ಇಂಗ್ಲೆಂಡ್. ಅಂತರ ಬರೀ 9 ರನ್. ಮ್ಯಾಂಚೆಸ್ಟರ್ ಮುಖಾಮುಖಿಯಲ್ಲಿ ಇಂಗ್ಲೆಂಡ್ ಗಳಿಸಿದ್ದು 8ಕ್ಕೆ 221 ರನ್ ಮಾತ್ರ. ಮಾರ್ಕ್ ಬರ್ಗೆಸ್ ನೇತೃತ್ವದಲ್ಲಿ ಆಡಲಿಳಿದಿದ್ದ ಕಿವೀಸ್ ಪೂರ್ತಿ 60 ಓವರ್ ಆಡಿತಾದರೂ 9ಕ್ಕೆ 212 ರನ್ ಮಾಡಿ ಸೋಲನ್ನು ಹೊತ್ತುಕೊಂಡಿತು. 71 ರನ್ ಮಾಡಿದ ಗ್ರಹಾಂ ಗೂಚ್ ಪಂದ್ಯಶ್ರೇಷ್ಠರೆನಿಸಿದರು. ಅಂದು ಗೂಚ್ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದಿದ್ದರು.
1992: ತವರಲ್ಲೇ ಸೋಲು
ನ್ಯೂಜಿಲ್ಯಾಂಡ್ 3ನೇ ಸಲ ವಿಶ್ವಕಪ್ ಸೆಮಿಫೈನಲ್ ಕಂಡದ್ದು 1992ರಲ್ಲಿ. ಇದು ನ್ಯೂಜಿಲ್ಯಾಂಡ್‌ನ ಜಂಟಿ ಆತಿ ಥ್ಯದ ಕೂಟವಾಗಿತ್ತು. ಮಾರ್ಟಿನ್ ಕ್ರೋವ್ ತಂಡ ಪ್ರಚಂಡ ಪ್ರದರ್ಶನ ಕಾಯ್ದುಕೊಂಡು ಬಂದಿತ್ತು. ಲೀಗ್ ಹಂತದಲ್ಲಿ ಎಡವಿದ್ದು ಪಾಕಿಸ್ಥಾನ ವಿರುದ್ಧ ಮಾತ್ರ (7 ವಿಕೆಟ್). ಆಕ್ಲೆಂಡ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲೂ ಪಾಕಿಸ್ಥಾ ನವೇ ಎದುರಾಯಿತು. ಸೇಡು ತೀರಿಸಿ ಕೊಳ್ಳಲು ನ್ಯೂಜಿಲ್ಯಾಂಡ್‌ಗೆ ಉತ್ತಮ ಅವಕಾಶ ಎದುರಾಯಿತು. ಆದರೆ ಇಲ್ಲಿಯೂ ಪಾಕ್ ಪಟ್ಟು ಸಡಿಲಿಸಲಿಲ್ಲ.
ನ್ಯೂಜಿಲ್ಯಾಂಡ್ 7ಕ್ಕೆ 262 ರನ್ ಬಾರಿಸಿದರೆ, ಇಮ್ರಾನ್ ಖಾನ್ ಪಡೆ 49 ಓವರ್‌ಗಳಲ್ಲಿ 6 ವಿಕೆಟಿಗೆ 264 ರನ್ ಬಾರಿಸಿ ಜಯಭೇರಿ ಮೊಳಗಿಸಿತು. ಇಂಝಮಾಮ್ ಉಲ್ ಹಕ್ (ಅಜೇಯ 60) ಮತ್ತು ಜಾವೇದ್ ಮಿಯಾಂದಾದ್ (ಅಜೇಯ 57) ಸೇರಿಕೊಂಡು ನ್ಯೂಜಿಲ್ಯಾಂಡನ್ನು ಅವರ ಅಂಗಳದಲ್ಲೇ ಮುಳುಗಿಸಿದರು.
1999: ಮತ್ತೆ ಪಾಕ್ ಕಂಟಕ
ಒಂದು ವಿಶ್ವಕಪ್ ಬ್ರೇಕ್ ಬಳಿಕ ನ್ಯೂಜಿಲ್ಯಾಂಡ್ 1999ರಲ್ಲಿ ಮತ್ತೆ ಸೆಮಿ ಫೈನಲ್ ಕಂಡಿತು. ಮತ್ತೆ ಪಾಕಿ ಸ್ಥಾನ ಎದುರಾಯಿತು. ಮತ್ತೂಂದು ಸೋಲನ್ನು ಹೊತ್ತುಕೊಂಡಿತು. ಅಂತರ, ಬರೋಬ್ಬರಿ 9 ವಿಕೆಟ್!
ಮ್ಯಾಂಚೆಸ್ಟರ್ ಪಂದ್ಯದಲ್ಲಿ ನ್ಯೂಜಿ ಲ್ಯಾಂಡ್ 7ಕ್ಕೆ 241 ರನ್ ಗಳಿಸಿದರೆ, ಪಾಕಿಸ್ಥಾನ 47.3 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 242 ರನ್ ಬಾರಿಸಿ ಆಮೋಘ ಗೆಲುವು ಸಾಧಿಸಿತು. ಸಯೀದ್ ಅನ್ವರ್ ಅಜೇಯ 113, ವಜಹತುಲ್ಲ ವಸ್ತಿ 85 ರನ್, ಈ ಆರಂಭಿಕ ಜೋಡಿಯ 194 ರನ್ ಜತೆಯಾಟ ಪಾಕ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು.
2007: ಲಂಕಾ ಕೈಯಲ್ಲಿ ಏಟು
ನ್ಯೂಜಿಲ್ಯಾಂಡ್ 6ನೇ ಸಲ ವಿಶ್ವಕಪ್ ಸೆಮಿಫೈನಲ್ ಕಂಡದ್ದು 2007ರಲ್ಲಿ. ಕಿಂಗ್‌ಸ್ಟನ್‌ನಲ್ಲಿ ಕದನಲ್ಲಿ ಎದುರಾದ ತಂಡ ಶ್ರೀಲಂಕಾ. ಫಲಿತಾಂಶದಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ನ್ಯೂಜಿ ಲ್ಯಾಂಡ್ ಮತ್ತೂಂದು ಸೋಲನ್ನು ಹೊತ್ತುಕೊಂಡಿತು. ಅಂತರ 81 ರನ್.
ಶ್ರೀಲಂಕಾ 5ಕ್ಕೆ 289 ರನ್ ಬಾರಿಸಿ ಸವಾಲೊಡ್ಡಿದರೆ, ಸ್ಟೀಫನ್ ಫ್ಲೆಮಿಂಗ್ ಟೀಮ್ 41.4 ಓವರ್‌ಗಳಲ್ಲಿ 208ಕ್ಕೆ ಕುಸಿಯಿತು. ಮುರಳೀಧರನ್ 4, ಜಯಸೂರ್ಯ ಮತ್ತು ದಿಲ್ಶನ್ ತಲಾ 2 ವಿಕೆಟ್ ಕಿತ್ತು ಕಿವೀಸ್ ಕತೆ ಮುಗಿಸಿದರು. ಜಯವರ್ಧನೆ 115 ರನ್ ಬಾರಿಸಿ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು.
2011: ಪುನಃ ಕಾಡಿದ ಲಂಕಾ
2011ರಲ್ಲಿ ನ್ಯೂಜಿಲ್ಯಾಂಡ್ ಮತ್ತೆ ಉಪಾಂತ್ಯ ತಲುಪಿತು. ಮತ್ತೆ ಶ್ರೀಲಂಕಾ ವಿರುದ್ಧ ಎಡವಿ ಫೈನಲ್ ಟಿಕೆಟ್‌ನಿಂದ ವಂಚಿತವಾಯಿತು.
ಇದು ಕೊಲಂಬೊ ಕ್ರಿಕೆಟ್ ಕದನ. ನ್ಯೂಜಿಲ್ಯಾಂಡ್ ಗಳಿಸಿದ್ದು 217 ರನ್ ಮಾತ್ರ. ಶ್ರೀಲಂಕಾ 47.5 ಓವರ್‌ಗಳಲ್ಲಿ 5ಕ್ಕೆ 220 ರನ್ ಬಾರಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಅಂದಹಾಗೆ ಇದು ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ಎದುರಿಸಿದ ಸತತ 6ನೇ ಸೋಲು.
2019: ಭಾರತದ ಮೇಲೆ ಸವಾರಿ
ಇದು ನ್ಯೂಜಿಲ್ಯಾಂಡ್‌ನ ಸತತ 4ನೇ ಸೆಮಿಫೈನಲ್ ಪ್ರವೇಶವಾಗಿತ್ತು. ಭಾರತ ಮೊದಲ ಸಲ ಎದುರಾಗಿತ್ತು. ಮ್ಯಾಂಚೆಸ್ಟರ್‌ನಲ್ಲಿ ಮಳೆಯ ಕಾಟ ವಾದ್ದರಿಂದ ಪಂದ್ಯ ಮೀಸಲು ದಿನದಲ್ಲಿ ಮುಂದು ವರಿದಿತ್ತು. 18 ರನ್ನುಗಳಿಂದ ಗೆದ್ದು ಸತತ 2ನೇ ಫೈನಲ್‌ಗೆ ಲಗ್ಗೆ ಹಾಕಿತು.
ನ್ಯೂಜಿಲ್ಯಾಂಡನ್ನು 239ಕ್ಕೆ ನಿಯಂತ್ರಿ ಸಿದರೂ ಕೊಹ್ಲಿ ಪಡೆಗೆ ಇದನ್ನು ಹಿಂದಿಕ್ಕಲಾಗಲಿಲ್ಲ. 49.3 ಓವರ್‌ಗಳಲ್ಲಿ 221ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
2015: ಮೊದಲ ಫೈನಲ್!
ನ್ಯೂಜಿಲ್ಯಾಂಡ್‌ನ ಸೆಮಿಫೈನಲ್ ಕಂಟಕ ಕೊನೆಗೊಂಡದ್ದು 2015ರಲ್ಲಿ. ಆಕ್ಲೆಂಡ್‌ನಲ್ಲಿ ಮಳೆಯ ಕಾರಣ ಪಂದ್ಯ 43 ಓವರ್‌ಗಳಿಗೆ ಸೀಮಿತ ಗೊಂಡಿತ್ತು. ದ. ಆಫ್ರಿಕಾ 5ಕ್ಕೆ 281 ರನ್ ಮಾಡಿ ದರೆ, ಕಿವೀಸ್ ಡಿ-ಎಲ್ ನಿಯಮದಂತೆ 6ಕ್ಕೆ 299 ರನ್ ಬಾರಿಸಿ ಮೊದಲ ವಿಶ್ವಕಪ್ ಫೈನಲ್ ಕಂಡಿತು.ಗ್ರ್ಯಾಂಟ್ ಈಲಿಯಟ್ (ಅಜೇಯ 84), ಕೋರಿ ಆ್ಯಂಡರ್ಸನ್ (58) ಗೆಲುವಿನ ರೂವಾರಿಗಳಾಗಿದ್ದರು.
ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್
ವರ್ಷ ಎದುರಾಳಿ ಸ್ಥಳ ಫಲಿತಾಂಶ
1975 ವೆಸ್ಟ್ ಇಂಡೀಸ್ ಓವಲ್ 5 ವಿಕೆಟ್ ಸೋಲು
1979 ಇಂಗ್ಲೆಂಡ್ ಮ್ಯಾಂಚೆಸ್ಟರ್ 9 ರನ್ ಸೋಲು
1992 ಪಾಕಿಸ್ಥಾನ ಆಕ್ಲೆಂಡ್ 4 ವಿಕೆಟ್ ಸೋಲು
1999 ಪಾಕಿಸ್ಥಾನ ಮ್ಯಾಂಚೆಸ್ಟರ್ 9 ವಿಕೆಟ್ ಸೋಲು
2007 ಶ್ರೀಲಂಕಾ ಕಿಂಗ್‌ಸ್ಟನ್ 81 ರನ್ ಸೋಲು
2011 ಶ್ರೀಲಂಕಾ ಕೊಲಂಬೊ 5 ವಿಕೆಟ್ ಸೋಲು
2015 ದಕ್ಷಿಣ ಆಫ್ರಿಕಾ ಆಕ್ಲೆಂಡ್ 4 ವಿಕೆಟ್ ಜಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.