![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Nov 16, 2023, 4:35 PM IST
ಮುಂಬಯಿ : ಭಾರತ ಪುರುಷರ ಕ್ರಿಕೆಟ್ ತಂಡ ವಿಶ್ವಕಪ್ ನಲ್ಲಿ ಸೋಲಿಲ್ಲದ ಸರದಾರನಾಗಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಇದೆ ವೇಳೆ ತಂಡದ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ನೇತೃತ್ವದ ಸಹಾಯಕ ಸಿಬಂದಿಗಳ ಭವಿಷ್ಯದ ಬಗ್ಗೆ ಬಿಸಿಸಿಐ ಇನ್ನೂ ಚರ್ಚೆಗಳನ್ನು ಪ್ರಾರಂಭಿಸಿಲ್ಲ.
ರಾಹುಲ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬಂದಿ ವಿಶ್ವಕಪ್‌ನವರೆಗೆ ಒಪ್ಪಂದಗಳನ್ನು ಹೊಂದಿದ್ದು, ಕೋಚಿಂಗ್ ತಂಡದ ಮುಂದಿನ ಹಾದಿಯಲ್ಲಿ ಬಿಸಿಸಿಐನಲ್ಲಿ ವಿಭಿನ್ನ ದೃಷ್ಟಿಕೋನಗಳಿವೆ ಎನ್ನಲಾಗಿದೆ. ಮೊದಲು ದ್ರಾವಿಡ್ ಅವರ ಕೋಚಿಂಗ್ ಶೈಲಿಯ ಬಗ್ಗೆ ಬಿಸಿಸಿಐ ಮೇಲಧಿಕಾರಿಗಳಲ್ಲಿ ವಿಭಿನ್ನವಿಚಾರ ಇತ್ತು, ಆದರೆ ತಂಡದ ಇತ್ತೀಚಿನ ಪ್ರದರ್ಶನಗಳು ಆ ಗ್ರಹಿಕೆಗಳನ್ನು ಬದಲಾಯಿಸಿರಬಹುದು ಎನ್ನಲಾಗಿದೆ. ಆದಾಗ್ಯೂ, ದ್ರಾವಿಡ್ ಸ್ವತಃ ಮುಂದುವರಿಯಲು ಆಸಕ್ತಿ ಹೊಂದಿದ್ದಾರೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.
2021 ರಲ್ಲಿ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಾಗ, ಅವರು ಇಷ್ಟವಿಲ್ಲದೇ ತರಬೇತುದಾರರಾಗಿದ್ದರು ಎಂಬುದು ಆರಂಭಿಕ ಅನಿಸಿಕೆಯಾಗಿತ್ತು. ತಂಡದ ಪ್ರದರ್ಶನವನ್ನು ಲೆಕ್ಕಿಸದೆ ವಿಶ್ವಕಪ್ ನಂತರ ಅವರು ಸ್ವಯಂಪ್ರೇರಣೆಯಿಂದ ಕೆಳಗಿಳಿಯಬಹುದು ಎಂದು ಅವರ ನಿಕಟವರ್ತಿಯಾಗಿದ್ದ ಕೆಲವರು ಸಲಹೆ ನೀಡಿದ್ದರು.
ದ್ರಾವಿಡ್ ಮುಂದುವರಿಯಲು ನಿರ್ಧರಿಸಲಿ ಅಥವಾ ಇಲ್ಲದಿರಲಿ, ಅವರ ಸಹಾಯಕ ಸಿಬಂದಿ ಸದಸ್ಯರಾಗಿರುವ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರಿಗೆ ಬಿಸಿಸಿಐ ವಿಸ್ತರಣೆಯನ್ನು ನೀಡುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ. ವಿವರಗಳು ವಿಶ್ವಕಪ್ ಫೈನಲ್ ಪಂದ್ಯ ಮುಗಿದ ಕೂಡಲೇ ಹೊರಬರುವ ನಿರೀಕ್ಷೆಯಿದೆ.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.