World Cup; ಪಾಕ್‌-ಬಾಂಗ್ಲಾ: ಸಮಾನ ದುಃಖಿಗಳ ಆಟ


Team Udayavani, Oct 31, 2023, 6:00 AM IST

1-sadasdas

ಕೋಲ್ಕತಾ: ಈ ಬಾರಿಯ ವಿಶ್ವಕಪ್‌ ವೈಶಿಷ್ಟ್ಯವೆಂದರೆ ಆರಂಭದಿಂದಲೇ 4 ತಂಡಗಳು “ಟಾಪ್‌ ಫೋರ್‌’ ಸ್ಥಾನಕ್ಕೆ ಅಂಟಿಕೊಂಡದ್ದು ಹಾಗೂ ಇವು ಉಳಿದ ತಂಡಗಳಿಗೆ ಹತ್ತಿರಕ್ಕೂ ಸುಳಿಯಲು ಆಸ್ಪದ ನೀಡ ದಿದ್ದುದು. ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯ ಸೆಮಿ ಫೈನಲ್‌ಗೆ ಪಕ್ಕಾ ಆದಂತಿದೆ. ಹೀಗಿರು ವಾಗ ನಾಲ್ಕರಾಚೆಯ ತಂಡಗಳ ಕತೆ ಏನು, ಇಲ್ಲೇನಾದರೂ ಪವಾಡ ಸಂಭವಿಸೀತೇ… ಮೊದಲಾದ ಪ್ರಶ್ನೆ ಗಳು ಉದ್ಭವಿಸುವುದು ಸಹಜ. ಪಾಕಿಸ್ಥಾನ ಇಂಥದೇ ನಿರೀಕ್ಷೆಯ ಮೂಟೆಯನ್ನು ಹೊತ್ತು ಮಂಗಳವಾರ ಬಾಂಗ್ಲಾದೇಶವನ್ನು ಎದುರಿಸಲು ಇಳಿಯುತ್ತದೆ.

ಇದು ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆಯುವ ಮುಖಾ ಮುಖಿ. ಯಾರೇ ಸೋತರೂ ಕೂಟ ದಿಂದ ಹೊರಬೀಳುವುದು ಖಚಿತ ಎಂಬಂಥ ಸ್ಥಿತಿಯಲ್ಲಿ ಬಾಂಗ್ಲಾ-ಪಾಕ್‌ ಮಾಡು-ಮಡಿ ಕದನಕ್ಕೆ ಇಳಿಯುತ್ತಿವೆ.

ಆರರಲ್ಲಿ ಎರಡೇ ಜಯ
ಪಾಕಿಸ್ಥಾನ 6 ಪಂದ್ಯಗಳಿಂದ ಕೇವಲ 4 ಅಂಕಗಳನ್ನು ಹೊಂದಿದೆ. ಉಳಿದ ಮೂರನ್ನು ಗೆದ್ದರೆ ಅಂಕ 10ಕ್ಕೆ ಏರುತ್ತದೆ. ಆದರೆ ನವಂಬರ್‌ ಒಂದರ ಫ‌ಲಿತಾಂಶವನ್ನು ಅನ್ವಯಿಸಿ ಹೇಳುವುದಾದರೆ, ಟಾಪ್‌-ಫೋರ್‌ನಲ್ಲಿ ನ್ಯೂಜಿಲ್ಯಾಂಡ್‌ ಅಥವಾ ದಕ್ಷಿಣ ಆಫ್ರಿಕಾದ ಸ್ಥಾನ ಇನ್ನೂ ಗಟ್ಟಿಯಾಗು ತ್ತದೆ. ಭಾರತ ಈಗಾಗಲೇ ಸೆಮಿಫೈನಲ್‌ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಆಸ್ಟ್ರೇಲಿಯ ಪಂದ್ಯದಿಂದ ಪಂದ್ಯಕ್ಕೆ ಚಿಗುರುತ್ತಿದೆ. ಪಾಕಿಸ್ಥಾನ ತನ್ನ ಉಳಿದೆರಡು ಪಂದ್ಯಗಳನ್ನು ನ್ಯೂಜಿ ಲ್ಯಾಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧ ಆಡಬೇಕಿದೆ. ಇವೆರಡನ್ನೂ ದೊಡ್ಡ ಅಂತರದಿಂದ ಗೆದ್ದು, ಉಳಿದ ಪಂದ್ಯಗಳ ಫ‌ಲಿತಾಂಶವನ್ನೂ ನಂಬಿ ಕೂರಬೇಕು. ಜತೆಗೆ ರನ್‌ರೇಟ್‌ನಲ್ಲಿ ದೊಡ್ಡ ಮಟ್ಟದ ಪ್ರಗತಿ ಆಗಬೇಕಿದೆ. ಸದ್ಯ -0.205ರಲ್ಲಿದೆ. ಪಾಕಿಸ್ಥಾನದ ಫಾರ್ಮ್ ಕಂಡರೆ ಸದ್ಯದ ಮಟ್ಟಿಗೆ ಇದು ಆಗುವ ಹೋಗುವ ಮಾತಲ್ಲ. ಆದರೆ ಬಾಂಗ್ಲಾ ವಿರುದ್ಧ ಸೋತು ಹೊರಬೀಳುವ ಸ್ಥಿತಿಯನ್ನು ಅದು ಆಹ್ವಾನಿಸಲು ಖಂಡಿತ ಇಷ್ಟಪಡದು.

ಪಾಕಿಸ್ಥಾನ ಈವರೆಗೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆ ರಡರಲ್ಲೂ ವೈಫ‌ಲ್ಯ ಕಂಡಿದೆ. ಯಾರೂ ಜವಾಬ್ದಾರಿಯುತವಾಗಿ ಆಡುತ್ತಿಲ್ಲ. ದೊಡ್ಡ ಜತೆಯಾಟ, ದೊಡ್ಡ ಸ್ಕೋರ್‌ ಯಾವುದೂ ದಾಖಲಾಗುತ್ತಿಲ್ಲ. 4 ಪಂದ್ಯಗಳಲ್ಲಿ ಪಾಕ್‌ ಬ್ಯಾಟರ್‌ಗಳಿಗೆ 50 ಓವರ್‌ ಪೂರೈಸಲಿಕ್ಕೂ ಆಗಿರಲಿಲ್ಲ.

ಬೌಲಿಂಗ್‌ ವಿಭಾಗಕ್ಕೆ ಬಂದಾಗ ಶಾಹೀನ್‌ ಶಾ ಅಫ್ರಿದಿ ವೈಫ‌ಲ್ಯ ದೊಡ್ಡ ಹಿನ್ನಡೆಯಾಗಿ ಕಾಣಿಸಿದೆ. ಉಪನಾಯಕ ಹಾಗೂ ಆಲ್‌ರೌಂಡರ್‌ ಶದಾಬ್‌ ಖಾನ್‌ ಯಾವ ವಿಭಾಗದಲ್ಲೂ ತಂಡದ ರಕ್ಷಣೆಗೆ ನಿಂತಿಲ್ಲ. ಹೀಗಾಗಿ ಇವರು ಆಡುವ ಬಳಗದಿಂದಲೂ ಹೊರಗುಳಿಯಬೇಕಾಯಿತು.
ಈಡನ್‌ ಟ್ರ್ಯಾಕ್‌ನಲ್ಲಾದರೂ ಪಾಕಿಸ್ಥಾನದ ಬೌಲಿಂಗ್‌ ಯಶಸ್ಸು ಕಂಡೀತೇ ಎಂಬುದೊಂದು ನಿರೀಕ್ಷೆ. ಕಾರಣ, ಇದು ಸೀಮರ್‌ ಫ್ರೆಂಡ್ಲಿ ಆಗಿರುವುದು. ಅಫ್ರಿದಿ, ರವೂಫ್, ಮೊಹಮ್ಮದ್‌ ವಾಸಿಮ್‌ ಇದರ ಪ್ರಯೋಜನ ಎತ್ತಿದರೆ ಪಾಕಿಸ್ಥಾನದ ಗೆಲುವನ್ನು ನಿರೀಕ್ಷಿಸಬಹುದು.

ಹತಾಶ ಬಾಂಗ್ಲಾದೇಶ
ಬಾಂಗ್ಲಾದೇಶ ಕೂಡ ಸುಸ್ಥಿತಿಯಲ್ಲಿಲ್ಲ. ಆರರಲ್ಲಿ ಒಂದನ್ನಷ್ಟೇ ಗೆದ್ದು ಒಂದು ಕಾಲನ್ನು ಕೂಟದಿಂದ ಹೊರಗಿರಿಸಿದೆ. ಪಾಕ್‌ ವಿರುದ್ಧ ಎಡವಿದರೆ ನಿರ್ಗ ಮನ ಖಚಿತವಾಗಲಿದೆ. ಗೆದ್ದರೆ ಪಾಕಿಸ್ಥಾನವನ್ನು ಹೊರದಬ್ಬಿದ ಹಿರಿಮೆಗೆ ಪಾತ್ರವಾಗಲಿದೆ.

ಪಾಕಿಸ್ಥಾನಕ್ಕೂ ಬಾಂಗ್ಲಾದೇಶಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಬಾಂಗ್ಲಾ ದೇಶದ ಅಗ್ರ ಕ್ರಮಾಂಕದ ಬ್ಯಾಟರ್‌ಗಳೂ ರನ್‌ ಬರಗಾಲ ಆನುಭವಿ ಸುತ್ತಿದ್ದಾರೆ. ನೆದರ್ಲೆಂಡ್ಸ್‌ ವಿರುದ್ಧದ ಕಳೆದ ಪಂದ್ಯದಲ್ಲಿ 230 ರನ್‌ ಚೇಸ್‌ ಮಾಡಲಿಕ್ಕೂ ಸಾಧ್ಯವಾಗಿರಲಿಲ್ಲ. ಅಗ್ರ 6 ಮಂದಿಯಲ್ಲಿ ನಾಲ್ವರು ಎರಡಂಕೆಯ ಗಡಿ ಮುಟ್ಟಲಿಕ್ಕೂ ವಿಫ‌ಲರಾಗಿದ್ದರು. ಪರಿಣಾಮ, 142ಕ್ಕೆ ಢಮಾರ್‌! ಇದು ಬಾಂಗ್ಲಾ ಅನುಭವಿಸಿದ ಸತತ 5ನೇ ಸೋಲು.
“ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವುದು ಸುಲಭವಲ್ಲ. ಇಂಥ ಸ್ಥಿತಿಯನ್ನು ಅರಗಿಸಿಕೊಳ್ಳುವುದು ಕಷ್ಟ. ಆದರೆ ಕ್ರಿಕೆಟ್‌ನಲ್ಲಿ ಇಂಥದ್ದೆಲ್ಲ ಸಂಭವಿಸುತ್ತಲೇ ಇರುತ್ತದೆ’ ಎನ್ನುವ ಮೂಲಕ ನಾಯಕ ಶಕಿಬ್‌ ಅಲ್‌ ಹಸನ್‌ ತಮ್ಮ ಅಸಹಾಯಕತೆಯನ್ನು ಬಿಚ್ಚಿಟ್ಟಿದ್ದಾರೆ.

ಟಾಪ್ ನ್ಯೂಸ್

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್‌ ಬಣದ ನಾಯಕ

Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್‌ ಬಣದ ನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್

World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್

1-sadsdas

World Cup 2023 ; ಭಾರತವನ್ನು ರೂಪಿಸಿದ ತ್ರಿಮೂರ್ತಿಗಳು

1-qweqwwqe

ICC ವಿಶ್ವಕಪ್‌ ಸಾಧಕರ ತಂಡಕ್ಕೆ ರೋಹಿತ್‌ ನಾಯಕ; ತಂಡ ಹೀಗಿದೆ

1-ww-eqeqwe

World Cup Final; ವೀಕ್ಷಕರು ಮೌನಕ್ಕೆ ಶರಣು:ಕ್ಯಾಪ್ಟನ್‌ ಪ್ಯಾಟ್‌ ಕಮಿನ್ಸ್‌  ಫುಲ್‌ ಖುಷ್‌

1-saddasd

Head line ನಲ್ಲಿ ಮಿಂಚಿದ ಟ್ರ್ಯಾವಿಸ್‌ ಹೆಡ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.