India ಸೋಲಿಸಿ..: ಬಾಂಗ್ಲಾ ಕ್ರಿಕೆಟಿಗರಿಗೆ ಡೇಟಿಂಗ್ ಆಫರ್ ನೀಡಿದ ಪಾಕ್ ನಟಿ!
71ರಲ್ಲಿ ಅವರು ನಮ್ಮನ್ನು ಒಡೆದಿದ್ದರು...
Team Udayavani, Oct 18, 2023, 7:08 PM IST
ಪುಣೆ: ಇಲ್ಲಿ ನಾಳೆ ಗುರುವಾರ(ಅಕ್ಟೋಬರ್ 19) ರಂದು ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡದೊಂದಿಗೆ ಸೆಣಸಾಡಲಿದೆ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಆಗಾಗ್ಗೆ ಸುದ್ದಿಯಾಗುತ್ತಿರುವ ಪಾಕಿಸ್ಥಾನದ ನಟಿ,ಸಾಮಾಜಿಕ ಕಾರ್ಯಕರ್ತೆ ಸೆಹರ್ ಶಿನ್ವಾರಿ ಅವರು ‘ಭಾರತವನ್ನು ಸೋಲಿಸಿದರೆ ನಿಮ್ಮೊಂದಿಗೆ ಡೇಟಿಂಗ್‌ಗೆ ಬರುತ್ತೇನೆ’ ಎಂದು ಬಾಂಗ್ಲಾದೇಶ ತಂಡದ ಆಟಗಾರರಿಗೆ ಭರವಸೆ ನೀಡಿದ್ದಾರೆ.
ಭಾರತದ ವಿರುದ್ಧ ಪಾಕಿಸ್ಥಾನದ ಸೋಲಿನಿಂದ ಕೋಪ ಮತ್ತು ಹತಾಶೆಗೊಂಡಿರುವ ಸೆಹರ್ ಬಾಂಗ್ಲಾದೇಶವನ್ನು ಹುರಿದುಂಬಿಸಿ, ಟೈಗರ್ಸ್, ನಮ್ಮನ್ನು ಸೋಲಿಸಿದ ರೀತಿಯಲ್ಲೇ ಭಾರತಕ್ಕೆ ಸೋಲನ್ನು ಉಣಿಸಬೇಕೆಂದು ಕೇಳಿಕೊಂಡಿದ್ದಾರೆ.
“ಇನ್ಶಾ ಅಲ್ಲಾ ನನ್ನ ಬಾಂಗ್ಲಾ ತಂಡ ಮುಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುತ್ತದೆ. ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ ನಾನು ಢಾಕಾಕ್ಕೆ ಹೋಗಿ ಬಾಂಗಾಲಿ ಮೀನಿನ ಭೋಜನವನ್ನು ಮಾಡುತ್ತೇನೆ, ”ಎಂದು ಸೆಹರ್ ಟ್ವೀಟ್ ಮಾಡಿದ್ದಾರೆ.
”ಪಾಕಿಸ್ಥಾನ ಮತ್ತು ಬಾಂಗ್ಲಾ ಸ್ನೇಹದ ಬಗ್ಗೆ ಈ ಭಾರತೀಯರಿಗೆ ಏಕೆ ಅಸೂಯೆ? 71ರಲ್ಲಿ(ಬಾಂಗ್ಲಾ ವಿಮೋಚನೆ) ಅವರು ನಮ್ಮನ್ನು ಒಡೆದಿದಿದ್ದರೂ, ಭಾರತ ವಿರುದ್ಧದ ಕ್ರಿಕೆಟ್‌ನಲ್ಲಿ ನಾವು ಪರಸ್ಪರ ಬೆಂಬಲಿಸುತ್ತಿರುವುದು ಅವರಿಗೆ ನಿಜವಾಗಿಯೂ ನೋವುಂಟುಮಾಡಿದೆ” ಎಂದು ಪೋಸ್ಟ್ ಮಾಡಿದ್ದಾರೆ.
ಸೆಹರ್ ಶಿನ್ವಾರಿ ಕ್ರಿಕೆಟ್ ಕುರಿತು ಪೋಸ್ಟ್ ಮಾಡಿ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ಥಾನ ಸೋಲನುಭವಿಸಿದಾಗ, “ನಾನು ಬಾಬರ್ ಅಜಮ್ ಮತ್ತು ಅವರ ತಂಡದ ವಿರುದ್ಧ ಎಫ್‌ಐಆರ್ ದಾಖಲಿಸಲಿದ್ದೇನೆ ಏಕೆಂದರೆ ಈ ಹುಡುಗರು ಯಾವಾಗಲೂ ಕ್ರಿಕೆಟ್ ಆಡುವ ಬದಲು ನಮ್ಮ ರಾಷ್ಟ್ರೀಯ ಭಾವನೆಗಳೊಂದಿಗೆ ಆಡುತ್ತಾರೆ” ಎಂದು ಬರೆದು ಸುದ್ದಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್
World Cup 2023 ; ಭಾರತವನ್ನು ರೂಪಿಸಿದ ತ್ರಿಮೂರ್ತಿಗಳು
ICC ವಿಶ್ವಕಪ್ ಸಾಧಕರ ತಂಡಕ್ಕೆ ರೋಹಿತ್ ನಾಯಕ; ತಂಡ ಹೀಗಿದೆ
World Cup Final; ವೀಕ್ಷಕರು ಮೌನಕ್ಕೆ ಶರಣು:ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಫುಲ್ ಖುಷ್
Head line ನಲ್ಲಿ ಮಿಂಚಿದ ಟ್ರ್ಯಾವಿಸ್ ಹೆಡ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.