Rachin Ravindra “ನಾನು ನ್ಯೂಜಿಲ್ಯಾಂಡಿಗ, ನನ್ನ ಬೇರುಗಳ ಬಗ್ಗೆ ಹೆಮ್ಮೆಯಿದೆ’
Team Udayavani, Oct 6, 2023, 11:00 PM IST
ಅಹ್ಮದಾಬಾದ್: ನ್ಯೂಜಿಲ್ಯಾಂಡ್‌ನ ಆಲ್ ರೌಂಡರ್, ಎಡಗೈ ಬ್ಯಾಟರ್ ರಚಿನ್ ರವೀಂದ್ರ ರಾತೋ ರಾತ್ರಿ ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಅದರಲ್ಲೂ ಕನ್ನಡಿಗರು ತಮ್ಮೂರಿನವರು ಎಂಬ ಪ್ರೀತಿಯಿಂದ ನೋಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಚಿನ್, “ನಾನು ಸಂಪೂರ್ಣ ನ್ಯೂಜಿಲ್ಯಾಂಡ್‌ಗೆ ಸೇರಿದವನು, ಆದರೆ ನನ್ನ ಬೇರುಗಳ ಬಗ್ಗೆ, ಜನಾಂಗದ ಬಗ್ಗೆ ಹೆಮ್ಮೆಯಿದೆ’ ಎಂದು ಹೇಳಿದ್ದಾರೆ.
ಗುರುವಾರ ಇಂಗ್ಲೆಂಡ್ ವಿರುದ್ಧ ಸ್ಫೋಟಕ 123 ರನ್ ಚಚ್ಚಿ ತಂಡವನ್ನು ಗೆಲ್ಲಿಸಿದ ರಚಿನ್ ರವೀಂದ್ರ, ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದರು. “ನಾನು ಮತ್ತು ಡೇವನ್ ಕಾನ್ವೇ ಸಂಪೂರ್ಣವಾಗಿ ನ್ಯೂಜಿಲ್ಯಾಂಡ್‌ಗೆ ಸೇರಿದವರು. ನನ್ನ ಕುಟುಂಬ ಭಾರತೀಯ ಮೂಲದ್ದು. ಆದರೆ ನನ್ನನ್ನು ನಾನು ಪೂರ್ಣವಾಗಿ ಒಬ್ಬ ನ್ಯೂಜಿಲ್ಯಾಂಡಿಗನಾಗಿಯೇ ನೋಡುತ್ತೇನೆ. ಇದರ ನಡುವೆ ನನ್ನ ಬೇರು, ಜನಾಂಗದ ಬಗ್ಗೆ ಅಷ್ಟೇ ಹೆಮ್ಮೆಯಿದೆ’ ಎಂದರು.
ಗುರುವಾರ ಸ್ಫೋಟಕವಾಗಿ ಆಡಿ ಅಜೇಯ 152 ರನ್ ಗಳಿಸಿದ ನ್ಯೂಜಿಲ್ಯಾಂಡ್‌ನ ಇನ್ನೊಬ್ಬ ಆರಂಭಿಕ ಬ್ಯಾಟರ್ ಡೇವನ್ ಕಾನ್ವೇ ಮೂಲತಃ ದಕ್ಷಿಣ ಆಫ್ರಿಕಾದವರು. 2017ರಲ್ಲಿ ನ್ಯೂಜಿಲ್ಯಾಂಡ್‌ಗೆ ತೆರಳಿದರು. ಕ್ರಿಕೆಟ್ ಅವಕಾಶಗಳನ್ನು ಹುಡುಕಿಯೇ ಅವರು ಆ ನ್ಯೂಜಿಲ್ಯಾಂಡ್‌ಗೆ ವಲಸೆ ಹೋಗಿದ್ದರು.
ಆದರೆ ರಚಿನ್ ಹುಟ್ಟಿ ಬೆಳೆದಿದ್ದೆಲ್ಲ ನ್ಯೂಜಿಲ್ಯಾಂಡ್‌ನ ವೆಲ್ಲಿಂಗ್ಟನ್‌ನಲ್ಲೇ. ಅವರ ತಂದೆ ರವೀಂದ್ರ ಬೆಂಗಳೂರಿನವರು. ನ್ಯೂಜಿಲ್ಯಾಂಡ್‌ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಕ್ರಿಕೆಟ್ ತರಬೇತಿಯನ್ನೂ ನೀಡುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.