World Cup ಕೆಲಸ ಅರ್ಧ ಮುಗಿದಿದೆ; ತುಂಬಾ ಮುಂದಾಲೋಚನೆ ಸರಿಯಲ್ಲ: ಶರ್ಮ
ಶಮಿ ಎರಡೂ ಕೈಗಳಿಂದ ಅವಕಾಶವನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ...
Team Udayavani, Oct 23, 2023, 6:55 AM IST
ಧರ್ಮಶಾಲಾ: ಇಲ್ಲಿ ಭಾನುವಾರ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಜಿದ್ದಾ ಜಿದ್ದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ಅಮೋಘ ಜಯದ ಸಂಭ್ರಮದಲ್ಲಿ ತಂಡದ ಕಪ್ತಾನ ರೋಹಿತ್ ಶರ್ಮ ”ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು ಕೆಲಸ ಅರ್ಧ ಮುಗಿದಿದ್ದು, ಇನ್ನು ಸಮತೋಲಿತವಾಗಿರಬೇಕಾಗಿದೆ. ವರ್ತಮಾನದಲ್ಲಿ ಉಳಿಯುವುದು ಮುಖ್ಯವಾಗಿದ್ದು ತುಂಬಾ ಮುಂದಾಲೋಚನೆ ಸರಿಯಲ್ಲ” ಎಂದು ಹೇಳಿದ್ದಾರೆ.
ಪಂದ್ಯದ ಬಳಿಕ ಪ್ರಸ್ತುತಿ ವೇಳೆ ಮಾತನಾಡಿದ ಶರ್ಮ, ” ಶಮಿ ಎರಡೂ ಕೈಗಳಿಂದ ಅವಕಾಶವನ್ನು ಬಾಚಿಕೊಂಡರು. ಅವರು ಇಂತಹ ಪರಿಸ್ಥಿತಿಗಳಲ್ಲಿ ಅನುಭವವನ್ನು ಹೊಂದಿರುವ ಕ್ಲಾಸ್ ಬೌಲರ್ ಆಗಿದ್ದಾರೆ ಎಂದು ಐದು ವಿಕೆಟ್ ಪಡೆದ ಬೌಲರ್ ಕುರಿತು ಹೊಗಳಿಕೆಯ ಮಾತುಗಳನ್ನಾಡಿದರು.
ನಾನು ನನ್ನ ಬ್ಯಾಟಿಂಗ್ ಅನ್ನು ಆನಂದಿಸುತ್ತಿದ್ದೇನೆ. ನಾನು ಮತ್ತು ಗಿಲ್ ಇಬ್ಬರೂ ವಿಭಿನ್ನ ವ್ಯಕ್ತಿತ್ವಗಳು ಆದರೆ ನಾವು ಒಬ್ಬರನ್ನೊಬ್ಬರು ಹೊಗಳುತ್ತೇವೆ. ಗೆದ್ದಿದ್ದಕ್ಕೆ ಸಂತೋಷವಾಗಿದೆ. ಕೊಹ್ಲಿ ಇಷ್ಟು ವರ್ಷ ನಮಗಾಗಿ ದೊಡ್ಡದನ್ನೇ ಮಾಡಿದ್ದಾರೆ. ನಾವು ಮಧ್ಯದಲ್ಲಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡಾಗ ಕೊಹ್ಲಿ ಮತ್ತು ಜಡೇಜಾ ನಮ್ಮನ್ನು ಮುಂದಕ್ಕೆ ಕೊಡೊಯ್ದರು ಎಂದರು.
”ಫೀಲ್ಡಿಂಗ್ ನಮಗೆ ಹೆಮ್ಮೆಯ ವಿಷಯ. ಇಂದು ಫೀಲ್ಡಿಂಗ್ ಕ್ಲಿನಿಕಲ್ ಆಗಿರಲಿಲ್ಲ. ರವೀಂದ್ರ ಜಡೇಜಾ ವಿಶ್ವದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರು. ಈ ಸಂಗತಿಗಳು(ಕ್ಯಾಚ್ ಡ್ರಾಪ್ ) ಸಂಭವಿಸುತ್ತವೆ. ಫೀಲ್ಡಿಂಗ್ ಎನ್ನುವುದು ಮುಂದೆ ಬಹಳಷ್ಟು ವಿಷಯಗಳನ್ನು ನಿರ್ಧರಿಸುತ್ತದೆ ಎಂದು ನಮಗೆ ತಿಳಿದಿದೆ. ನಾವು ಆಟದ ವಿವಿಧ ಭಾಗಗಳಲ್ಲಿ ಪ್ರಯಾಣಿಸುತ್ತಾ ಆಡಲು ಇಷ್ಟಪಡುತ್ತೇವೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್
World Cup 2023 ; ಭಾರತವನ್ನು ರೂಪಿಸಿದ ತ್ರಿಮೂರ್ತಿಗಳು
ICC ವಿಶ್ವಕಪ್ ಸಾಧಕರ ತಂಡಕ್ಕೆ ರೋಹಿತ್ ನಾಯಕ; ತಂಡ ಹೀಗಿದೆ
World Cup Final; ವೀಕ್ಷಕರು ಮೌನಕ್ಕೆ ಶರಣು:ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಫುಲ್ ಖುಷ್
Head line ನಲ್ಲಿ ಮಿಂಚಿದ ಟ್ರ್ಯಾವಿಸ್ ಹೆಡ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.