Semi-Final; ಕೊಹ್ಲಿ ದಾಖಲೆ, ಅಯ್ಯರ್ ಸ್ಪೋಟಕ ಶತಕ: ಕಿವೀಸ್ ಗೆ 398 ರನ್ ಗುರಿ
Team Udayavani, Nov 15, 2023, 6:07 PM IST
ಮುಂಬಯಿ : ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆಯುತ್ತಿರುವ ವಿಶ್ವಕಪ್ ಸೆಮಿಫೈನಲ್ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಸ್ಮರಣೀಯ 50 ನೇ ಏಕದಿನ ಶತಕ, ಶ್ರೇಯಸ್ ಅಯ್ಯರ್ ಅವರ ಸ್ಪೋಟಕ ಶತಕ ಮತ್ತು ಆಗ್ರ ಕ್ರಮಾಂಕಾದ ಅತ್ಯಮೋಘ ಬ್ಯಾಟಿಂಗ್ ಬಲ ಪ್ರದರ್ಶನದಿಂದಾಗಿ ಭಾರತ ತಂಡ ನ್ಯೂಜಿಲ್ಯಾಂಡ್ ಗೆಲುವಿಗೆ 398 ರನ್ ಗಳ ಬೃಹತ್ ಗುರಿ ಮುಂದಿಟ್ಟಿದೆ.
ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಆರಂಭ ಪಡೆಯಿತು. 50 ಓವರ್ ಗಳಲ್ಲಿ4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿ ಬೃಹತ್ ಗುರಿಯನ್ನು ಕೇನ್ ವಿಲಿಯಮ್ಸನ್ ಪಡೆಯ ಮುಂದಿಟ್ಟಿದೆ. ಆರಂಭದಲ್ಲಿ ಅಬ್ಬರಿಸಿದ ನಾಯಕ ರೋಹಿತ್ ಶರ್ಮ29 ಎಸೆತಗಳಲ್ಲಿ 47 ರನ್ ಗಳಿಸಿ ನಿರ್ಗಮಿಸಿದರು. ಅವರು ತಲಾ 4 ಭರ್ಜರಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ್ದರು.
ಇನ್ನೊಂದು ಅತ್ಯಮೋಘ ಇನ್ನಿಂಗ್ಸ್ ಆಡಿದ ಶುಭ್ ಮನ್ ಗಿಲ್ 79 ರನ್ ಗಳಿಸಿದ್ದ ವೇಳೆ ಗಾಯಾಳಾಗಿ ನಿವೃತ್ತಿಯಾಗಿದ್ದು ಅಭಿಮಾನಿಗಳು ತೀವ್ರವಾಗಿ ನೊಂದುಕೊಳ್ಳಲು ಕಾರಣವಾಯಿತು. ಶುಭ್‌ಮನ್ ಗಿಲ್ ಕುಸಿದಿದ್ದು,ಅವರಿಗೆ ಆಟ ಮುಂದುವರಿಸಲು ಸಾಧ್ಯವಾಗಲಿಲ್ಲ. ಮುಂಬೈ ಶಾಖ ಅವರ ಬಳಲಿಕೆಗೆ ಕಾರಣ ಎನ್ನಲಾಗಿದೆ. ಗಾಳಿ ಬೀಸುತ್ತಿಲ್ಲ ಮತ್ತು ಮುಂಬೈನಲ್ಲಿ ಬಿರು ಬಿಸಿಲಿದ್ದು 34°C ಗರಿಷ್ಠ ತಾಪಮಾನ ದಾಖಲಾಗಿದೆ.
ಗಿಲ್ ಅತ್ಯಮೋಘ ಆಟವಾಡುತ್ತಿದ್ದರು. 65 ಎಸೆತಗಳಲ್ಲಿ 79 ರನ್ ಗಳಿಸಿದ್ದರು. 8 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ ಸಿಡಿಸಿದ್ದರು.
ಕೊಹ್ಲಿ 50 ನೇ ಏಕದಿನ ಕ್ರಿಕೆಟ್ ನ ಸಿಡಿಸಿ ಸಂಭ್ರಮಿಸಿದರು. ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಸಮ್ಮುಖದಲ್ಲೇ ಅವರ ಹೆಸರಿನಲ್ಲಿದ್ದ ದಾಖಲೆ ಪತನಗೊಳಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.ತಾಳ್ಮೆಯ ಆಟವಾಡಿದ ಕೊಹ್ಲಿ ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿ ಸಂಭ್ರಮಿಸಿದರು. 49 ಶತಕಗಳನ್ನು ತೆಂಡೂಲ್ಕರ್ ಅವರು ಸಿಡಿಸಿ ಅಗ್ರಗಣ್ಯ ಶತಕಗಳ ಸರದಾರ ಎನಿಸಿಕೊಂಡಿದ್ದರು.ಶತಕ ಸಿಡಿಸಿ ತೆಂಡೂಲ್ಕರ್ ಅವರನ್ನು ಕಂಡು ಸಂಭ್ರಮಿಸಿದರು. ಪ್ರೇಕ್ಷಕರಾಗಿದ್ದ ಸಚಿನ್ ಐತಿಹಾಸಿಕ ದಾಖಲೆಯನ್ನು ಕಂಡು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.ಕೊಹ್ಲಿ 113 ಎಸೆತಗಳಲ್ಲಿ117 ರನ್ ಗಳಿಸಿ ಔಟಾದರು.ಸೌಥಿ ಎಸೆದ ಚೆಂಡನ್ನುಕಾನ್ವೇ ಕೈಗಿತ್ತು ನಿರ್ಗಮಿಸಿದರು. 9 ಬೌಂಡರಿ ಮತ್ತು 2 ಆಕರ್ಷಕ ಸಿಕ್ಸರ್ ಸಿಡಿಸಿದರು.
ಅಯ್ಯರ್ ಶತಕದ ಶ್ರೇಯಸ್ಸು
ಇನ್ನೊಂದು ಅತ್ಯಮೋಘ ಇನ್ನಿಂಗ್ಸ್ ಆಡಿದ ಶ್ರೇಯಸ್ ಅಯ್ಯರ್ ಸ್ಪೋಟಕ ಶತಕ ಸಿಡಿಸಿ ಸಂಭ್ರಮಿಸಿದರು.70 ಎಸೆತಗಳಲ್ಲಿ 105 ರನ್ ಗಳಿಸಿ ಔಟಾದರು. 4 ಬೌಂಡರಿ ಮತ್ತು 8 ಅಮೋಘ ಸಿಕ್ಸರ್ ಸಿಡಿಸಿದರು. ಇದು ಶ್ರೇಯಸ್ ಅಯ್ಯರ್ ಅವರ ಬ್ಯಾಕ್ ಟು ಬ್ಯಾಕ್ ಶತಕವಾಗಿದೆ.
79 ರನ್ ಗಳಿಸಿದ್ದ ವೇಳೆ ಗಾಯಾಳಾಗಿ ನಿವೃತ್ತಿಯಾಗಿದ್ದ ಗಿಲ್ ಕೊನೆಯಲ್ಲಿ ಮತ್ತೆ ಬ್ಯಾಟಿಂಗ್ ಗೆ ಬಂದರು. 80 ರನ್ ಗಳಿಸಿದ್ದ ಅವರು ಔಟಾಗದೆ ಉಳಿದರು. ಕೆಎಲ್ ರಾಹುಲ್ ಔಟಾಗದೆ 20 ಎಸೆತಗಳಲ್ಲಿ 39 ರನ್ ಗಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.