ನಟಿ ಮಣಿಯ ಟ್ವೀಟ್‌ಗೆ ಭಾರೀ ಟೀಕೆ
Team Udayavani, Jun 19, 2019, 10:32 AM IST
ಮ್ಯಾಂಚೆಸ್ಟರ್: ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯವನ್ನು ಸೈಫ್ ಆಲಿ ಖಾನ್, ರಣವೀರ್ ಸಿಂಗ್, ಸೇರಿದಂತೆ ಹೆಚ್ಚಿನ ನಟ ನಟಿಯರು ವೀಕ್ಷಿಸಿದ್ದರು. ಈ ವೇಳೆ ಕ್ರೀಡಾಂಗಣದಲ್ಲಿ ಇರಿಸಲಾಗಿದ್ದ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ ಜತೆ ಹೆಚ್ಚಿನವರು ಫೋಟೊ ತೆಗೆಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕೂಡ ಪ್ರಕಟಿಸಿದ್ದರು. ಆದರೆ ನಟಿ ಮಣಿಯರ ಪೈಕಿ ಊರ್ವಶಿ ರೌತೇಲ ಸ್ವಲ್ಪ ಅತಿರೇಕಕ್ಕೆ ಹೋಗಿದ್ದಾರೆ. ಕೊಹ್ಲಿಯ ಪ್ರತಿಮೆ ಯನ್ನು ಬಿಗಿದಪ್ಪಿ ಹಿಡಿದ ಫೋಟೋ ಪ್ರಕಟಿಸಿದ್ದಾರೆ. ಇದಕ್ಕೆ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.