ಸಾಂಪ್ರದಾಯಿಕ ಎದುರಾಳಿಗಳ ಸೆಮಿಫೈನಲ್
49 ವರ್ಷಗಳ ಬಳಿಕ ಉಪಾಂತ್ಯದಲ್ಲಿ ಎದುರಾಗುವ ಆಸೀಸ್ - ಇಂಗ್ಲೆಂಡ್
Team Udayavani, Jul 11, 2019, 5:07 AM IST
ಬರ್ಮಿಂಗ್‌ಹ್ಯಾಮ್: ಕ್ರಿಕೆಟಿನ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡಗಳು ಗುರುವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ.
ಹಾಲಿ ಚಾಂಪಿಯನ್ ಕೂಡ ಆಗಿರುವ ಆಸ್ಟ್ರೇಲಿಯ ದಾಖಲೆ 5 ಸಲ ಕಪ್ ಎತ್ತಿದ ತಂಡ. ಈವರೆಗಿನ 7 ಸೆಮಿಫೈನಲ್‌ಗಳಲ್ಲಿ ಒಂದರಲ್ಲೂ ಸೋಲದ ಅಜೇಯ ದಾಖಲೆ ಕಾಂಗರೂಗಳ ಪಾರಮ್ಯಕ್ಕೆ ಸಾಕ್ಷಿ. ಇನ್ನೊಂದೆಡೆ ಕ್ರಿಕೆಟ್ ಜನಕರೆಂಬ ಖ್ಯಾತಿಯ ಇಂಗ್ಲೆಂಡ್ ಇನ್ನೂ ವಿಶ್ವಕಪ್ ಟ್ರೋಫಿಯ ಹುಡುಕಾಟದಲ್ಲೇ ಇದೆ. ಈ ಸಲ ಗೆಲ್ಲದಿದ್ದರೆ ಇನ್ನೆಂದೂ ಚಾಂಪಿಯನ್ ಆಗದು ಎಂಬಷ್ಟರ ಮಟ್ಟಿಗೆ ಮಾರ್ಗನ್ ಪಡೆಯ ಮೇಲೆ ವಿಶ್ವಾಸ ಇರಿಸಲಾಗಿದೆ.
ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಅಲ್ಪ ಅಂತರದಿಂದ ಶರಣಾದರೂ ಚಾಂಪಿಯನ್ನರ ಆಟವಾಡುವುದರಲ್ಲಿ ಆಸ್ಟ್ರೇಲಿಯ ಯಾವತ್ತೂ ಒಂದು ಹೆಜ್ಜೆ ಮುಂದೆಯೇ ಇರುತ್ತದೆ. ಕಳೆದ 4 ತಿಂಗಳ ಹಿಂದಿನ ಆಸ್ಟ್ರೇಲಿಯಕ್ಕೂ ಈಗಿನ ಆಸ್ಟ್ರೇಲಿಯ ತಂಡಕ್ಕೂ ಭಾರೀ ವ್ಯತ್ಯಾಸ ಗುರುತಿಸಬಹುದು. ಮತ್ತು ಇವೆಲ್ಲವೂ ಸಕಾರಾತ್ಮಕ ಬೆಳವಣಿಗೆಗಳೇ ಆಗಿವೆ.
ಇಂಗ್ಲೆಂಡ್ ನೆಲದಲ್ಲಿ ಆಡು ವುದನ್ನು ಯಾವತ್ತೂ ಸವಾಲಾಗಿ ಸ್ವೀಕರಿಸುವ ಆಸೀಸ್, ಈ ಬಾರಿ ತವರು ತಂಡವನ್ನೇ ಎದುರಿಸುವುದರಿಂದ ಕುತೂಹಲ ಪರಾಕಾಷ್ಠೆ ತಲುಪಿದೆ.
ಲೀಗ್‌ನಲ್ಲಿ ಎಡವಿದ ಇಂಗ್ಲೆಂಡ್
ಇಂಗ್ಲೆಂಡ್ ನೆಚ್ಚಿನ ತಂಡವಾದರೂ ಎದುರಾಳಿ ಆಸ್ಟ್ರೇಲಿಯ ಆಗಿರುವುದರಿಂದ ಸವಾಲು ಕಠಿನವೆಂದೇ ಹೇಳಬೇಕು. ಲಾರ್ಡ್ಸ್‌ನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸೀಸ್ ಕೈಯಲ್ಲಿ 64 ರನ್ನುಗಳ ಸೋಲಿನ ಏಟು ತಿಂದಿತ್ತು. ಇದರಲ್ಲಿ ಆರನ್ ಫಿಂಚ್ ಭರ್ತಿ 100 ಹೊಡೆದಿದ್ದರು. ಈ ಜಯದೊಂದಿಗೆ ಆಸ್ಟ್ರೇಲಿಯ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿತ್ತು.
ಈ ಸೋಲಿಗೆ ಸೇಡು ತೀರಿಸಿಕೊಂಡು ಇತಿಹಾಸದತ್ತ ಮುಖ ಮಾಡಲು ಇಂಗ್ಲೆಂಡಿಗೆ ಸಾಧ್ಯವೇ ಎಂಬ ಕೌತುಕದೊಂದಿಗೆ ಈ ಪಂದ್ಯ ಸಾಗಲಿದೆ.
ಆಸ್ಟ್ರೇಲಿಯ
ಪ್ಲಸ್
- ಆರಂಭಿಕರಾದ ವಾರ್ನರ್-ಫಿಂಚ್, ಕೀಪರ್ ಕ್ಯಾರಿ ಅವರ ಪ್ರಚಂಡ ಫಾರ್ಮ್.
-ಸ್ಟಾರ್ಕ್, ಕಮಿನ್ಸ್, ಬೆಹೆÅಂಡಾಫ್ì ಅವರ ಘಾತಕ ಬೌಲಿಂಗ್ ಆಕ್ರಮಣ.
ಮೈನಸ್
-ಖ್ವಾಜಾ ಹೊರಬಿದ್ದುದರಿಂದ ಮಧ್ಯಮ ಕ್ರಮಾಂಕದಲ್ಲಿ ಹಿನ್ನಡೆಯ ಸಾಧ್ಯತೆ.
-ಸ್ಮಿತ್, ಮ್ಯಾಕ್ಸ್‌ವೆಲ್, ಸ್ಟೋಯಿನಿಸ್ ಅವರಿಂದ ನೈಜ ಆಟ ಕಂಡುಬರದಿರುವುದು.
ಇಂಗ್ಲೆಂಡ್
ಪ್ಲಸ್
- ಏಕದಿನಕ್ಕೆ ಹೇಳಿ ಮಾಡಿಸಿದಂಥ ಸುದೀರ್ಘ ಬ್ಯಾಟಿಂಗ್ ಲೈನ್‌ಅಪ್.
-ದೊಡ್ಡ ಮೊತ್ತ ಪೇರಿಸಿ ಎದುರಾಳಿ ಮೇಲೆ ಒತ್ತಡ ಹೇರುವ ತಂತ್ರಗಾರಿಕೆ.
ಮೈನಸ್
- ಬ್ಯಾಟಿಂಗಿನಷ್ಟು ಸಮರ್ಥವಾದ ಬೌಲಿಂಗ್ ಪಡೆ ಇಲ್ಲದಿರುವುದು.
- ಫೇವರಿಟ್ ಮತ್ತು ತವರಿನ ತಂಡವಾಗಿರುವ ಕಾರಣ ಒತ್ತಡ ಅಧಿಕ.
ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ
ವರ್ಷ ಎದುರಾಳಿ ಫಲಿತಾಂಶ ಸ್ಥಳ
1975 ಇಂಗ್ಲೆಂಡ್ ಆಸ್ಟ್ರೇಲಿಯಕ್ಕೆ 4 ವಿಕೆಟ್ ಜಯ ಲೀಡ್ಸ್
1987 ಪಾಕಿಸ್ಥಾನ ಆಸ್ಟ್ರೇಲಿಯಕ್ಕೆ 18 ರನ್ ಜಯ ಲಾಹೋರ್
1996 ವೆಸ್ಟ್ ಇಂಡೀಸ್ ಆಸ್ಟ್ರೇಲಿಯಕ್ಕೆ 5 ರನ್ ಜಯ ಮೊಹಾಲಿ
1999 ದಕ್ಷಿಣ ಆಫ್ರಿಕಾ ಟೈ/ಆಸೀಸ್‌ಗೆ ಮುನ್ನಡೆ ಬರ್ಮಿಂಗ್‌ಹ್ಯಾಮ್
2003 ಶ್ರೀಲಂಕಾ ಆಸ್ಟ್ರೇಲಿಯಕ್ಕೆ 48 ರನ್ ಜಯ ಪೋರ್ಟ್ ಎಲಿಜಬೆತ್
2007 ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಕ್ಕೆ 7 ವಿಕೆಟ್ ಜಯ ಸೇಂಟ್ ಲೂಸಿಯಾ
2015 ಭಾರತ ಆಸ್ಟ್ರೇಲಿಯಕ್ಕೆ 95 ರನ್ ಜಯ ಸಿಡ್ನಿ
ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್
ವರ್ಷ ಎದುರಾಳಿ ಫಲಿತಾಂಶ ಸ್ಥಳ
1975 ಆಸ್ಟ್ರೇಲಿಯ ಇಂಗ್ಲೆಂಡಿಗೆ 4 ವಿಕೆಟ್ ಸೋಲು ಲೀಡ್ಸ್
1979 ನ್ಯೂಜಿಲ್ಯಾಂಡ್ ಇಂಗ್ಲೆಂಡಿಗೆ 9 ರನ್ ಜಯ ಮ್ಯಾಂಚೆಸ್ಟರ್
1983 ಭಾರತ ಇಂಗ್ಲೆಂಡಿಗೆ 6 ವಿಕೆಟ್ ಸೋಲು ಮ್ಯಾಂಚೆಸ್ಟರ್
1987 ಭಾರತ ಇಂಗ್ಲೆಂಡಿಗೆ 35 ರನ್ ಜಯ ಮುಂಬಯಿ
1992 ದಕ್ಷಿಣ ಆಫ್ರಿಕಾ ಇಂಗ್ಲೆಂಡಿಗೆ 19 ರನ್ ಜಯ ಸಿಡ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.