ಒಬ್ಬನ ಅವಲಂಬನೆ ಬೇಡ: ಕಪಿಲ್ದೇವ್ ಕಿವಿಮಾತು
Team Udayavani, May 31, 2019, 6:00 AM IST
ಹೊಸದಿಲ್ಲಿ: ವಿಶ್ವಕಪ್ ಗೆಲ್ಲಬೇಕಿದ್ದರೆ ಒಬ್ಬನನ್ನೇ ಅವಲಂಬಿಸುವ ಪ್ರವೃತ್ತಿಯನ್ನು ಬಿಡಬೇಕೆಂದು ಭಾರತ ತಂಡಕ್ಕೆ 1983ರಲ್ಲಿ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ತಂಡದ ನಾಯಕ ಕಪಿಲ್ ದೇವ್ ಕಿವಿಮಾತು ಹೇಳಿದ್ದಾರೆ.
ಆಟದಲ್ಲಿ ಪೂರ್ಣ ತಂಡ ಸಹಭಾಗಿಯಾಗುವಂತೆ ಮಾಡುವುದು ಮುಖ್ಯ. ತಂಡವಾಗಿ ಆಡಿದರೆ ಮಾತ್ರ ಗೆಲ್ಲಬಹುದು. ಒಬ್ಬನ ಅವಲಂಬನೆ ಅಪಾಯಕಾರಿ. ಪ್ರತಿ ಪಂದ್ಯಕ್ಕೂ ಪೂರ್ಣ ಸಾಮರ್ಥ್ಯದೊಂದಿಗೆ ಮೈದಾನಕ್ಕಿಳಿಯಬೇಕು. ಇದು ಕಪಿಲ್ ಹೇಳಿರುವ ಕೆಲವು ಹಿತವಚನಗಳು.
ಇದೇ ವೇಳೆ ಕಪಿಲ್ ಭಾರತದ ಬೌಲರ್‌ಗಳನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ. ಬೌಲರ್‌ಗಳ ತಾಳಮೇಳ ಅದ್ಭುತವಾಗಿದೆ. ಎದುರಾಳಿಗಳೂ ನಮ್ಮ ಬೌಲಿಂಗ್ ಪಡೆಯನ್ನು ಗೌರವಿಸುತ್ತಿದ್ದಾರೆ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಆಟ ಭಾರತದ ಗೆಲುವಿನಲ್ಲಿ ನಿರ್ಣಾಯಕವಾಗಲಿದೆ. ಪಾಂಡ್ಯಗೆ 10 ಓವರ್‌ಗಳನ್ನು ನೀಡಬಹುದು. ಹಾಗೆಯೇ ಬಿಗ್ ಹಿಟ್ ಮೂಲಕ ರನ್ ದೇಣಿಗೆಯನ್ನೂ ನೀಡುವ ಸಾಮರ್ಥ್ಯ ಅವರಿಗಿದೆ ಎಂದಿದ್ದಾರೆ ಕಪಿಲ್.
ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ಗೆ ಇಂಗ್ಲಂಡ್‌ನ ಪಿಚ್‌ನಲ್ಲಿ ಆಡಿದ ಅನುಭವ ಇಲ್ಲದಿರಬಹುದು. ಇಂಥ ಅನುಭವ ರಹಿತ ಬೌಲರ್‌ಗಳು ಪ್ರತಿ ತಂಡದಲ್ಲೂ ಇದ್ದಾರೆ. ಯಾದವ್ ಮತ್ತು ಚಾಹಲ್ ಕಳೆದೆರಡು ವರ್ಷಗಳಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಈ ಅನುಭವ ಧಾರಾಳ ಸಾಕು ಎಂದು ಕಪಿಲ್ ವಿಶ್ಲೇಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.